Vande Bharat: ಬೆಂಗಳೂರು - ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್, ಇಷ್ಟೇ ಟೈಮ್ ಸಾಕು.. ಬಿಗ್ ಅಪ್ಡೇಟ್
ರಾಜ್ಯ ರಾಜಧಾನಿ ಬೆಂಗಳೂರು (Bengaluru) ಶೀಘ್ರದಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಸಾಕ್ಷಿಯಾಗಲಿದೆ. ನೂತನ ರೈಲು ಬೆಂಗಳೂರು - ಹೈದರಾಬಾದ್ ನಡುವೆ ಕಾರ್ಯಚರಣೆ ನಡೆಸಲಿದ್ದು, ತಿಂಗಳಾಂತ್ಯದಲ್ಲಿ ಓಡಾಟ ನಡೆಸುವ ಸಾಧ್ಯತೆಯಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ದಕ್ಷಿಣ ಮಧ್ಯೆ ರೈಲ್ವೆ (South Central Railway - SCR), ಬೆಂಗಳೂರು - ಹೈದರಾಬಾದ್ (ಕಾಚಿಗುಡ) ಮಾರ್ಗದಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ತೀರ್ಮಾನಿಸಿದೆ. ಎರಡು ನಗರಗಳ ನಡುವೆ 618 ಕಿಲೋಮೀಟರ್ ಅಂತರವಿದ್ದು, ಈ ರೈಲು ಅಷ್ಟು ದೂರವನ್ನು ಕೇವಲ 7 - 8 ಗಂಟೆಯಲ್ಲಿ ಕ್ರಮಿಸಲಿದೆ.

ತೆಲಂಗಾಣದಲ್ಲಿ ಮುಖ್ಯ ಕಚೇರಿ ಹೊಂದಿರುವ ದಕ್ಷಿಣ ಮಧ್ಯೆ ರೈಲ್ವೆ ಈ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಧರ್ಮಾವರಂ, ಧೋನೆ, ಕರ್ನುಲ್, ಗದ್ವಲ್ ಮಹಬೂಬ್ ನಗರ ಹಾಗೂ ಶಾದ್ ನಗರ ರೈಲು ನಿಲ್ದಾಣದಲ್ಲಿ ನಿಲ್ಲುವ ನೀರಿಕ್ಷೆಯಿದೆ. ಬಹುತೇಕ, ಈ ರೈಲು ಕರ್ನಾಟಕದ ಯಾವುದೇ ನಿಲ್ದಾಣದಲ್ಲಿಯೂ ನಿಲುಗಡೆಯಾಗುವುದಿಲ್ಲ ಎಂದು ಹೇಳಲಾಗಿದೆ. ಸದ್ಯ, ದಕ್ಷಿಣ ಮಧ್ಯೆ ರೈಲ್ವೆ ಇದರ ಪರೀಕ್ಷಾರ್ಥ ಸಂಚಾರವನ್ನು ನಡೆಸುತ್ತಿದೆ.
ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರು - ಹೈದರಾಬಾದ್ ನಡುವೆ ಓಡಾಟ ನಡೆಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿರಲಿದೆ. ಅದರಲ್ಲಿ 2 ಎಕ್ಸಿಕ್ಯೂಟಿವ್ ಹಾಗೂ ಉಳಿದ 14 ಸಾಮಾನ್ಯ ಬೋಗಿಗಳಾಗಿರಲಿವೆ. ಶೀಘ್ರದಲ್ಲಿಯೇ ದಕ್ಷಿಣ ಮಧ್ಯೆ ರೈಲ್ವೆ ವಿಭಾಗವು ರೈಲ್ವೆ ಇಲಾಖೆಯಿಂದ ವಂದೇ ಭಾರತ್ ನ ಬೋಗಿಗಳನ್ನು ಪಡೆಯುವ ನೀರಿಕ್ಷೆಯಿದೆ.
ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾಗಿರುವ ಇವೆರೆಡು ನಗರಗಳ ನಡುವೆ ಸಂಚರಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ಪ್ರಯಾಣದ ಅವಧಿಯನ್ನು ತುಂಬಾ ಕಡಿಮೆ ಮಾಡಲಿದೆ. ಈ ಹಿಂದೆ, ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳಲು 11 - 12 ಗಂಟೆ ಹಿಡಿಯುತ್ತಿತ್ತು. ಅದು, 7 - 8 ಗಂಟೆ ಆಗಲಿದೆ.
ಬೆಂಗಳೂರು - ಹೈದರಾಬಾದ್ ನಗರಗಳ ನಡುವೆ ಕಾರ್ಯಾಚರಣೆ ಆರಂಭಿಸಲಿರುವ ಈ ರೈಲು, ಕರ್ನಾಟಕ - ತೆಲಂಗಾಣಗಳಿಗೆ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಲಿದೆ. ಈಗಾಗಲೇ, ತೆಲಂಗಾಣದಲ್ಲಿ ಸಿಕಂದರಾಬಾದ್ (ಹೈದರಾಬಾದ್) - ವಿಶಾಖಪಟ್ಟಣಂ ಹಾಗೂ ಸಿಕಂದರಾಬಾದ್ (ಹೈದರಾಬಾದ್) - ತಿರುಪತಿ ಮಧ್ಯೆ ಸಂಚರಿಸುತ್ತಿದೆ. ಕರ್ನಾಟಕದಲ್ಲಿ ಮೈಸೂರು - ಬೆಂಗಳೂರು - ಚೆನ್ನೈ ಮತ್ತು ಬೆಂಗಳೂರು - ಧಾರವಾಡ ನಡುವೆ ಕಾರ್ಯಾಚರಣೆ ನಡೆಸುತ್ತಿದೆ.
ಆದರೆ, ಬೆಂಗಳೂರು - ಹೈದರಾಬಾದ್ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರಗಳು, ಯಾವ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ ಎಂಬುದರ ಬಗ್ಗೆ ಸ್ಪಷ್ಟ ವಿವರಗಳಿಲ್ಲ. ಅದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಸದ್ಯ, ದೇಶದಲ್ಲಿ ಸಂಚರಿಸುವ ಈ ರೈಲುಗಳು ಸಾಕಷ್ಟು ಅತ್ಯಾಧುನಿಕವಾಗಿದ್ದು, ಸೇಫ್ಟಿ ಸಲುವಾಗಿ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ.
ಇವುಗಳಲ್ಲಿ ಪ್ರತೇಕ ಎಂಜಿನ್ ಇಲ್ಲ. ಸಂಪೂರ್ಣ ಎಸಿಯಿರುವ ಈ ರೈಲಿನ ಸೀಟುಗಳು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯದ ವ್ಯವಸ್ಥೆಯಿದೆ. ಜೊತೆಯಲ್ಲಿ ಅಗ್ನಿ ನಿರೋಧಕ ಸಾಧನಗಳು ಹಾಗೂ ಸ್ವಯಂ ಚಾಲಿತ ಬಾಗಿಲುಗಳನ್ನು ಹೊಂದಿವೆ. ಇನ್ನು, ಬೆಂಗಳೂರು - ಹೈದರಾಬಾದ್ (ಕಾಚಿಗುಡ) ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸುವುದರಿಂದ ಎರಡು ನಗರಗಳ ಜನರಿಗೆ ದೊಡ್ಡ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications