ಬೆಂಗಳೂರಿನಲ್ಲಿ ಆಟೋ ಬುಕ್ ಮಾಡಿ 71 ನಿಮಿಷ ಕಾದ ವ್ಯಕ್ತಿ: ನೀವೇ ಲಕ್ಕಿ ಬಿಡಿ ಎಂದ ನೆಟ್ಟಿಗರು

ಸಿಲಿಕಾನ್ ಸಿಟಿ ಬೆಂಗಳೂರನ್ನು ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಬೀಳುವುದು ಟ್ರಾಫಿಕ್ ಜಾಮ್. ವಿಶ್ವದಲ್ಲಿಯೇ ಅತಿದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಗಳನ್ನು ನೋಡುತ್ತೇವೆ.

ಬೆಂಗಳೂರಿನಲ್ಲಿ ಅನೇಕ ಜನರು ಓಡಾಡಲು ಕೆಲವು ಬಾರಿ ಓಲಾ, ಉಬರ್‌ಗಳ ಕ್ಯಾಬ್‌, ಆಟೋಗಳನ್ನು ಬಳಸುತ್ತಾರೆ. ಇವುಗಳು ಜನರಿಗೆ ಸಾಕಷ್ಟು ಅನುಕೂಲಕರವಾಗಿದೆ. ನಾವು ಬಾರಿ ಓಲಾ, ಉಬರ್‌ಗಳ ಕ್ಯಾಬ್ ಅಥವಾ ಆಟೋಗಳನ್ನು ಬುಕ್ ಮಾಡಿ 5 - 15 ನಿಮಿಗಳವರೆಗೆ ಕಾಯುವುದು ಸಾಮಾನ್ಯ. ಕೆಲವು ವೀಕೆಂಡ್ ಮತ್ತು ರಜೆ ದಿನಗಳ ಪೀಕ್‌ ಅವರ್‌ಗಳಲ್ಲಿ ಸ್ವಲ್ಪ ಹೆಚ್ಚು ಆಗಬಹುದು. ಏಕೆಂದರೆ ಬೆಂಗಳೂರು ಟ್ರಾಫಿಕ್‌ ಹಾಗಿದೆ.

uber auto

ಆದರೆ ಒಬ್ಬರು ಒಂದು ಉಬರ್ ಆಟೋಗಾಗಿ ತಾವು ಬರೊಬ್ಬರಿ 71 ನಿಮಿಷ ಕಾದಿದ್ದಾಗಿ ಹೇಳಿಕೊಂಡಿದ್ದಾರೆ. ಹೌದು, 71 ನಿಮಿಷಗಳ ಕಾಲ ಆಟೋಗಾಗಿ ಕಾದಿದ್ದಾರೆ. ಅನುಶಾಂಕ್‌ ಜೈನ್‌ ಎಂಬುವವರು ತಾವು ಬುಕ್‌ ಮಾಡಿದ ರೈಡ್‌ನ ಸ್ಕ್ರೀನ್‌ ಶಾಟ್‌ಅನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅನುಶಾಂಕ್ ಜೈನ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಉಬರ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ ಆಟೋ ರೈಡ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಪೀಕ್ ಅವರ್‌ನಲ್ಲೂ ಬುಕ್‌ ಮಾಡಿದಾಗ ಆಟೋ ಬುಕ್ ಆಗಿದಕ್ಕೆ ಖುಷಿ ಪಟ್ಟರು. ಆದರೆ ಆಟೋಗಾಗಿ ಕಾಯಬೇಕಾದ ಸಮಯವನ್ನು ನೋಡಿ ಅನುಶಾಂಕ್ ಜೈನ್ ಬೆಚ್ಚಿಬಿದ್ದಿದ್ದಾರೆ. ಜೈನ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ಬುಕ್ಕಿಂಗ್ ಸ್ವೀಕರಿಸಿದ ಆಟೋ 71 ಪಿಕ್ ಅಪ್ ಮಾಡಲು ನಿಮಿಷಗಳವರೆಗೆ ಕಾಯಬೇಕು. ಆಟೋ ನಿಖರವಾಗಿ 24 ಕಿಮೀ ದೂರದಲ್ಲಿದೆ. ಅನುಶಾಂಕ್‌ ಜೈನ್‌ ಅವರು #peakbengaluru ಎಂಬ ಶೀರ್ಷಿಕೆಯಡಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

uber auto

ದೀರ್ಘಾವಧಿಯ ಕಾಯುವಿಕೆ ಬೆಂಗಳೂರಿಗರಿಗೆ ಹೊಸತೇನಲ್ಲ. ಆದರೂ ಇಷ್ಟು ಹೊತ್ತು ಕಾಯುವುದು ಅಚ್ಚರಿ. ಇನ್ನು ರೈಡ್ ಬುಕ್ ಮಾಡಿದ ವ್ಯಕ್ತಿ, ಅನುಶಾಂಕ್‌ ಜೈನ್‌ ಅವರು ಆಟೋ ಚಾಲಕ ಸ್ಥಳಕ್ಕೆ ತಲುಪಿದರೆ ನಿಜವಾಗಿಯೂ ಅವರಿಗೆ ಅಪಾರ ಗೌರವ ಸಲ್ಲುತ್ತದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಪೋಸ್ಟ್ ಕೆಳಗೆ ಹಲವಾರು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವರು 'ನೀವು ಅದೃಷ್ಟವಂತರು, ಕಳೆದ ವಾರದಿಂದ ಬೆಂಗಳೂರಿನಲ್ಲಿ ಒಂದೇ ಒಂದು ಅನ್ನು ಸಹ ಬುಕ್ ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಅಷ್ಟು ಹೊತ್ತು ಕಾದಿರುವುದಕ್ಕೆ ನಿಮ್ಮ ಬಗ್ಗೆ ನಮಗೆ ಇನ್ನೂ ಹೆಚ್ಚು ಗೌರವ ಎಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆಟೋಗಾಗಿ ಇಷ್ಟು ಹೊತ್ತು ಕಾಯುವುದು ನಿಜಕ್ಕೂ ಶೋಚನೀಯ' ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬರು, ಪೀಕ್ ಅವರ್‌ಗಳಲ್ಲಿ ಓಲಾ, ಊಬರ್‌ಗಳ ಚಾಲಕರು ರೈಡ್ ರದ್ದುಗೊಳಿಸುವುದು ಸಾಮಾನ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇವತ್ತು ನಾನು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಯಾಣಿಕರು ಬೇಗ ಕ್ಯಾಬ್ ಸಿಗದೇ ಪರದಾಡುವುದು ಸಾಮಾನ್ಯವಾಗಿದೆ. ಚಾಲಕರು ಕ್ಯಾನ್ಸಲ್ ಮಾಡುವುದು ಅಥವಾ ಫೋನ್ ಮಾಡಿ ನೀವು ಕ್ಯಾನ್ಸಲ್ ಮಾಡಿ ಅಷ್ಟೇ ಹಣ ನೇರವಾಗಿ ನನಗೆ ಕೊಟ್ಟರೆ ಸಾಕು ಹೇಳಲು ಪ್ರಾರಂಭಿಸಿದ್ದಾರೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Thursday, May 18, 2023, 12:47 [IST]
English summary
Bengaluru man posts about uber auto 71 minutes wiating time details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+