ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಮಹತ್ವಾಕಾಂಕ್ಷೆಯ ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆಯು ಅಕ್ಟೋಬರ್ 2022 ರೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಎರಡು ನಗರಗಳನ್ನು ಸಂಪರ್ಕಿಸುವ 10 ಪಥಗಳ ಹೆದ್ದಾರಿಯು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 90 ನಿಮಿಷಗಳಿಗೆ ಇಳಿಸಲಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಮಾಧ್ಯಮ ವರದಿಗಳ ಪ್ರಕಾರ 117 ಕಿಮೀ ಉದ್ದದ ಹೆದ್ದಾರಿ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಈ ಎರಡು ಪ್ಯಾಕೇಜ್‌ಗಳ ಕಾಮಗಾರಿಗಳು ಕ್ರಮವಾಗಿ 2019 ರ ಮೇ ಹಾಗೂ 2019 ರ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದವು. ಈ ಎರಡು ನಗರಗಳ ನಡುವಿನ ರಸ್ತೆ ಯೋಜನೆಯನ್ನು ಭಾರತ್ ಮಾಲಾ ಪರಿಯೋಜನಾ ಹಂತ 1 ರ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಈ ಯೋಜನೆಯ ಮೊದಲ ಪ್ಯಾಕೇಜ್‌ನಲ್ಲಿ 56 ಕಿ.ಮೀ ಉದ್ದದ ಕಾಮಗಾರಿಯನ್ನು ಬೆಂಗಳೂರಿನಿಂದ ನಿಡಘಟ್ಟದವರೆಗೆ ನಿರ್ಮಿಸಲಾಗುತ್ತಿದ್ದರೆ, ಎರಡನೇ ಪ್ಯಾಕೇಜ್‌ನಲ್ಲಿ ನಿಡಘಟ್ಟದಿಂದ ಮೈಸೂರುವರೆಗೆ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಮಾಹಿತಿಗಳ ಪ್ರಕಾರ 2021 ರ ಏಪ್ರಿಲ್ ಅಂತ್ಯದ ವೇಳೆಗೆ, ಮೊದಲ ಪ್ಯಾಕೇಜ್‌ನ ಸುಮಾರು 67.5%ನಷ್ಟು ಹಾಗೂ ಎರಡನೇ ಪ್ಯಾಕೇಜ್‌ನ ಸುಮಾರು 50% ನಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಬೆಂಗಳೂರು-ಮೈಸೂರು ಆರ್ಥಿಕ ಕಾರಿಡಾರ್ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಸೇರಿದಂತೆ ಎರಡು ನಗರಗಳ ನಡುವೆ ಹಲವು ಬೈಪಾಸ್ ರಸ್ತೆಗಳನ್ನು ಒಳಗೊಂಡಿರಲಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

10 ಪಥಗಳ ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆಯು ಸಂಚಾರಕ್ಕಾಗಿ ಆರು ಪಥಗಳ ಪ್ರವೇಶ ನಿಯಂತ್ರಿತ ಕ್ಯಾರೇಜ್ ವೇ ಹಾಗೂ ಸ್ಥಳೀಯ ಸಂಚಾರಕ್ಕೆ ಬಳಸಬಹುದಾದ ಎರಡು ಪಥಗಳ ಸರ್ವೀಸ್ ರಸ್ತೆಯನ್ನು ಒಳಗೊಂಡಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಈ ಹೆದ್ದಾರಿಯಿಂದಾಗಿ ಮೂರು ಗಂಟೆಯ ಪ್ರಯಾಣವು ಒಂದೂವರೆ ಗಂಟೆಗಳಿಗೆ ಇಳಿಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಹೆದ್ದಾರಿ ಕಾಮಗಾರಿಯ ಬಗ್ಗೆ ಟ್ವೀಟ್ ಮಾಡಿರುವ ಅವರು ಹೆದ್ದಾರಿಯಲ್ಲಿ ಕೆಲಸಗಳು ಸರಾಗವಾಗಿ ನಡೆಯುತ್ತಿವೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಈ ಹೆದ್ದಾರಿ ಕಾಮಗಾರಿಗಾಗಿ ರೂ. 8,172 ಕೋಟಿ ಖರ್ಚು ಮಾಡಲಾಗುತ್ತಿದೆ. ಈಗ ಜನರು ಈ ಎರಡು ನಗರಗಳ ನಡುವೆ ಪ್ರಯಾಣಿಸಲು 180 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಈ ಹೆದ್ದಾರಿಯ ಕಾಮಗಾರಿ ಪೂರ್ತಿಯಾದ ನಂತರ ಈ ಅವಧಿಯು ಕೇವಲ 90 ನಿಮಿಷಗಳಿಗೆ ಇಳಿಯಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಭಾರತ್ ಮಾಲಾ ಯೋಜನೆ ಬಗ್ಗೆ:

ದೇಶದ ಆರ್ಥಿಕತೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಭಾರತ್ ಮಾಲಾ ಯೋಜನೆಯನ್ನು ಆರಂಭಿಸಲಾಗಿದೆ. ಭಾರತ್ ಮಾಲಾ ಯೋಜನೆ ಕೇಂದ್ರ ಸರ್ಕಾರದ ರಸ್ತೆ ಸಾರಿಗೆಗೆ ಸಂಬಂಧಿಸಿದ ಮಹತ್ವದ ಯೋಜನೆಯಾಗಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು 7 ಹಂತಗಳಲ್ಲಿ 34,800 ಕಿ.ಮೀ ರಸ್ತೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಈ ಯೋಜನೆ ಅಡಿಯಲ್ಲಿ ಹೊಸ ಹೆದ್ದಾರಿಗಳನ್ನು ನಿರ್ಮಿಸುವುದರ ಜೊತೆಗೆ ಅಪೂರ್ಣವಾಗಿರುವ ಹೆದ್ದಾರಿ ಕಾಮಗಾರಿಗಳನ್ನು ಸಹ ಪೂರ್ಣಗೊಳಿಸಲಾಗುವುದು.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಬಂದರು, ರಸ್ತೆಗಳು, ರಾಷ್ಟ್ರೀಯ ಕಾರಿಡಾರ್‌ಗಳನ್ನು ಸುಧಾರಿಸುವುದು ಹಾಗೂ ರಾಷ್ಟ್ರೀಯ ಕಾರಿಡಾರ್‌ಗಳನ್ನು ನಿರ್ಮಿಸುವುದು ಸಹ ಈ ಯೋಜನೆಯಲ್ಲಿ ಸೇರಿದೆ. ಇದರ ಹೊರತಾಗಿ ಹಿಂದುಳಿದ ಪ್ರದೇಶಗಳು, ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಹ ನಿರ್ಮಿಸಲಾಗುವುದು.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಜೊತೆಗೆ ಚಾರ್ ಧಾಮ್ ಯಾತ್ರಾ ಸ್ಥಳಗಳಾದ ಕೇದಾರನಾಥ, ಬದರಿನಾಥ್, ಯಮುನೋತ್ರಿ ಹಾಗೂ ಗಂಗೋತ್ರಿ ನಡುವೆ ಸಂಪರ್ಕ ಕಲ್ಪಿಸಲಾಗುವುದು. ರಸ್ತೆಗಳ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಉದ್ದೇಶಿಸಿರುವ ರೂ. 10 ಲಕ್ಷ ಕೋಟಿಗಳ ಭಾರತ್ ಮಾಲಾ ಪರಿ ಯೋಜನೆಯು 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಿಂದ ಆರಂಭವಾದ ಹಲವಾರು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ.

ಬೆಂಗಳೂರು - ಮೈಸೂರು ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಾರಿಗೆ ಸಚಿವ

ಭಾರತ್ ಮಾಲಾ ಯೋಜನೆಗಾಗಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಸಿದ್ಧಪಡಿಸಿರುವ ಕರಡು ಯೋಜನೆಯನ್ನು 2017 ರ ಅಕ್ಟೋಬರ್ 24 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ . 2022 ರ ವೇಳೆಗೆ ಈ ಯೋಜನೆಯ ಮೊದಲ ಹಂತವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Bengaluru mysuru economic corridor to be completed by october 2022 details
Story first published: Saturday, August 14, 2021, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X