ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸ ವ್ಯವಸ್ಥೆ, ಪೂರ್ತಿ ಕಣ್ಗಾವಲು.. ವಾಹನ ಸವಾರರೇ ಎಚ್ಚರವಿರಲಿ!

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru - Mysuru expressway)ಯಲ್ಲಿ ಅಪಘಾತಗಳ ತಡೆಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI), ಪಾದಚಾರಿ-ಸ್ನೇಹಿ ಸಂಚಾರ ನಿರ್ವಹಣಾ ಪರಿಹಾರ (pedestrian-friendly traffic management solutions) ಕ್ರಮಗಳನ್ನು ಜಾರಿಗೊಳಿಸಬೇಕೆಂದು ಪದೇ ಪದೇ ಮನವಿ ಮಾಡಿತ್ತು.

ಅಂತಿಮವಾಗಿ ರಾಜ್ಯ ಪೊಲೀಸ್ ಇಲಾಖೆ, ವರ್ಷಾಂತ್ಯದೊಳಗೆ ಇಂಟಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ (intelligent traffic system) ಅಳವಡಿಸಲು ತೀರ್ಮಾನ ಮಾಡಿದೆ. ಈ ಬಗ್ಗೆ ರಾಜ್ಯ ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು, ಖಾಸಗಿ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. 'ರಸ್ತೆ ಅಪಘಾತವನ್ನು ಕಡಿಮೆಗೊಳಿಸಲು ಇಂಟಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಹಾಕಲು ಶೀಘ್ರ ಟೆಂಡರ್ ಕರೆಯಲಾಗುವುದು' ಎಂದು ಹೇಳಿದ್ದಾರೆ.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸ ವ್ಯವಸ್ಥೆ, ಪೂರ್ತಿ ಕಣ್ಗಾವಲು.. ವಾಹನ ಸವಾರರೇ ಎಚ್ಚರವಿರಲಿ!

ಕಳೆದ ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡ 118 ಕಿಮೀ ಉದ್ದದ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ವರದಿಯಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ 29 ಜನ ಬಲಿಯಾಗಿದ್ದರು. ಆ ಬಳಿಕ ರಾಜ್ಯ ಪೊಲೀಸ್ ಇಲಾಖೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಅಪಘಾತಗಳ ಗಣನೀಯವಾಗಿ ಇಳಿಕೆಯಾಗಿದ್ದು, ಆಗಸ್ಟ್ ತಿಂಗಳಲ್ಲಿ 6 ಮಂದಿ ಸಾವನ್ನಪ್ಪಿದ್ದರು.

ಇಂಟಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಅಳವಡಿಕೆಯ ವೆಚ್ಚದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿದಿಲ್ಲ. ಇದು, ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಮ್ (ANPRS), ರೆಡ್ ಲೈಟ್ ವಾಯೊಲೆಶನ್ (RLV) ಕ್ಯಾಮೆರಾ, ಮತ್ತು ರಿಯಲ್ ಟೈಮ್ ಸ್ಪೀಡ್ ಇನ್ಸ್‌ಪೆಕ್ಟರ್‌ ಅನ್ನು ಒಳಗೊಂಡಿರುತ್ತದೆ.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸ ವ್ಯವಸ್ಥೆ, ಪೂರ್ತಿ ಕಣ್ಗಾವಲು.. ವಾಹನ ಸವಾರರೇ ಎಚ್ಚರವಿರಲಿ!

ಹೆಚ್ಚುವರಿ ಸೆಕ್ಷನಲ್ ಓವರ್‌ಸ್ಪೀಡ್ ಡಿಟೆಕ್ಷನ್ ಸಿಸ್ಟಮ್ ಹಾಗೂ ಸೆನ್ಸಾರ್ ಆಧಾರಿತ ಕರ್ಬ್ ಸ್ವೀಡಿಂಗ್ ಹೊಂದಿರಲಿದ್ದು, ಎಕ್ಸ್‌ಪ್ರೆಸ್‌ವೇಯ ವಿವಿಧ ಭಾಗಗಳಲ್ಲಿ ವಾಹನದ ವೇಗವನ್ನು ಪತ್ತೆ ಹಚ್ಚಲು ನೇರವಾಗುತ್ತದೆ. ಹೆದ್ದಾರಿಯ ಹಲವೆಡೆ ಈ ಸೇನಾರ್ಸ್ ಅಳವಡಿಕೆ ಮಾಡಲಾಗುತ್ತದೆ. ಚಾಲಕರು, ಯಾವುದೇ ರೀತಿಯಲ್ಲಿ ವೇಗ ಮಿತಿಯನ್ನು ಉಲ್ಲಂಘಿಸಿದರೆ, ಅವರಿಗೆ ದಂಡದ ಇ - ಚಲನ್ ಕಳುಹಿಸಲಾಗುತ್ತದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜುಲೈ 12 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಅದರ, ಪ್ರಕಾರ, ಸುರಕ್ಷತೆ ದೃಷ್ಟಿಯಿಂದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ (ಆಟೋ), ಟ್ರಾಕ್ಟರ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳ ಸಂಚಾರವನ್ನುಆಗಸ್ಟ್ 1 ಜಾರಿಗೆ ಬರುವಂತೆ ನಿಷೇಧ ಮಾಡಿತ್ತು.

ವಾಹನಗಳ ವೇಗ ಮಿತಿಯನ್ನು 80 kmph ನಿಂದ 100 kmphಗೆ ಸೀಮಿತಗೊಳಿತ್ತು. ಇದರೊಟ್ಟಿಗೆ ರಾಜ್ಯ ಪೊಲೀಸ್ ಇಲಾಖೆಯ ಸತತ ಪರಿಶ್ರಮದಿಂದ ಜುಲೈ ತಿಂಗಳಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಸುಮಾರು ರೂ.8172 ಕೋಟಿ ವೆಚ್ಚದಲ್ಲಿ ಕೈಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಈ ಹೆದ್ದಾರಿ ನಿರ್ಮಾಣ ಮಾಡಿದ್ದು, ಇದೊಂದು ದಶಪಥದ ರಸ್ತೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 21, 2023, 12:24 [IST]
English summary
Bengaluru mysuru expressway police set up intelligent traffic system year end
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+