ಬೆಂಗಳೂರಿನ ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಿಗ್ನಲ್ ಲೈಟ್'ಗಳು ಪ್ರಮುಖ ಪಾತ್ರವಹಿಸುತ್ತವೆ. ಸಿಗ್ನಲ್ ಲೈಟ್'ಗಳು ಟ್ರಾಫಿಕ್ ಪೊಲೀಸರ ಅನುಪಸ್ಥಿತಿಯಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳುತ್ತವೆ.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಈ ಸಿಗ್ನಲ್ ಲೈಟ್'ಗಳು ವಾಹನವು ನಿಲುಗಡೆ ಮಾಡಲು ಅಥವಾ ಚಲಿಸಲು ಅಥವಾ ನಿರ್ಗಮಿಸಲು ಸಿದ್ಧವಾಗಿದೆಯೇ ಎಂಬುದನ್ನು ನಿರ್ಧರಿಸುತ್ತವೆ. ಈ ಸಿಗ್ನಲ್ ಲೈಟ್'ಗಳಲ್ಲಿ ಟೈಮರ್ ಅಳವಡಿಸಲಾಗಿರುತ್ತದೆ. ಈ ಹಿಂದೆ ಸಂಚಾರ ಪೊಲೀಸರು ಸಿಗ್ನಲ್ ಲೈಟ್'ಗಳನ್ನು ಬಟನ್'ಗಳಿಂದ ಕಂಟ್ರೋಲ್ ಮಾಡುತ್ತಿದ್ದರು.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಈಗ ಸಿಗ್ನಲ್ ಲೈಟ್'ಗಳು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ. ಸಿಗ್ನಲ್ ಲೈಟ್'ಗಳು ಟ್ರಾಫಿಕ್ ಪೊಲೀಸರಿಗೆ ವರದಾನವಾಗಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು ನಗರ ಪೊಲೀಸರು ಸಿಗ್ನಲ್ ಕಂಬಕ್ಕೆ ಗೌರವ ಸಲ್ಲಿಸಿದ ಘಟನೆ ವರದಿಯಾಗಿದೆ. ಈ ಸಿಗ್ನಲ್ ಲೈಟ್'ಗಳನ್ನು ಮೊದಲು ಬೆಂಗಳೂರು ನಗರದಲ್ಲಿ ಬಳಕೆಗೆ ತರಲಾಯಿತು.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಈ ಕಾರಣಕ್ಕಾಗಿಯೇ ಬೆಂಗಳೂರು ನಗರ ಪೊಲೀಸರು ಸಿಗ್ನಲ್ ಕಂಬಕ್ಕೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮೊಟ್ಟ ಮೊದಲು ಬಳಕೆಯಾದ ಸಿಗ್ನಲ್ ಲೈಟ್ ಕಂಬವು ಎನ್ಆರ್ ಜಂಕ್ಷನ್‌ನಲ್ಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಈ ಕಂಬವು ಸುಮಾರು 60 ವರ್ಷಗಳಿಂದ ಬಳಕೆಯಲ್ಲಿದೆ. ಈ ಸವಿನೆನಪಿಗಾಗಿ ಬೆಂಗಳೂರು ನಗರ ಪೊಲೀಸರು ಕಳೆದ ಸೋಮವಾರ ಈ ಸಿಗ್ನಲ್ ಕಂಬಕ್ಕೆ ವಿಶೇಷ ಗೌರವ ಸಲ್ಲಿಸಿದರು.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಈ ಸಿಗ್ನಲ್ ಲೈಟ್ ಕಂಬವನ್ನು 1963ರಲ್ಲಿ ಬಳಕೆಗೆ ತರಲಾಯಿತು ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ವರ್ಷ ಸಿ ಚಾಂಡಿ ನಗರ ಪೊಲೀಸ್ ಆಯುಕ್ತರಾಗಿದ್ದರೆ, ಬಿ.ಎನ್.ಗರುಡಾಚಾರ್ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

60 ವರ್ಷಗಳ ಹಿಂದೆ, ಎನ್ಆರ್ ಜಂಕ್ಷನ್ ತುಂಬಾ ಬಿಜಿ ರಸ್ತೆಯಾಗಿತ್ತು. ಈ ಕಾರಣಕ್ಕೆ ಈ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಆಗಿನ ಪೊಲೀಸ್ ಆಯುಕ್ತರು ಈ ಪ್ರದೇಶದಲ್ಲಿ ಸಿಗ್ನಲ್ ಕಂಬವನ್ನು ಅಳವಡಿಸಿದರು.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಸಿಗ್ನಲ್ ಕಂಬ ಅಳವಡಿಸಿದ ನಂತರ ಸಂಚಾರ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಯಿತು ಎಂದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಶಾಸಕ ಉದಯ್ ಗರುಡಾಚಾರ್ ಅವರ ತಂದೆ ಬಿ.ಎನ್.ಗರುಡಾಚಾರ್ ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಬೆಂಗಳೂರಿನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಚೆನ್ನೈನಿಂದ ಕೆಲವು ಪ್ರಮುಖ ವಸ್ತುಗಳನ್ನು ತರಲಾಗಿತ್ತು ಎಂದು ಅವರು ಹೇಳಿದರು. ನಂತರ ಹಂತ ಹಂತವಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ನಗರದ ಹಲವು ಪ್ರಮುಖ ಭಾಗಗಳಲ್ಲಿ ಅಳವಡಿಸಲಾಯಿತು.

ಮೊಟ್ಟ ಮೊದಲ ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ಪೊಲೀಸರು

ಸಿಗ್ನಲ್ ಲೈಟ್ ಕಂಬಕ್ಕೆ ಗೌರವ ಸಲ್ಲಿಸಿದ ಬೆಂಗಳೂರು ನಗರ ಸಂಚಾರ ಪೊಲೀಸರ ಕಾರ್ಯವನ್ನು ಬೆಂಗಳೂರಿನ ಜನರು ಶ್ಲಾಘಿಸುತ್ತಿದ್ದಾರೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ವರದಿ ಮಾಡಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Bengaluru Police commemorate city's first ever traffic signal pole. Read in Kannada.
Story first published: Wednesday, March 17, 2021, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X