ಲಾಕ್‌ಡೌನ್ ಉಲ್ಲಂಘಿಸಿ ತಿರುಗುತ್ತಿದ್ದ ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಜನದಟ್ಟಣೆ ತಗ್ಗಿಸುವ ಉದ್ದೇಶದಿಂದ ಲಾಕ್‌ಡೌನ್ ವಿಧಿಸಲಾಗಿದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಹೆಚ್ಚುತ್ತಿರುವ ಕರೋನಾ ವೈರಸ್ ಎರಡನೇ ಅಲೆ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಸಹ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಠಿಣ ನಿರ್ಬಂಧಗಳನ್ನು ಒಳಗೊಂಡ ಲಾಕ್‌ಡೌನ್ ಜಾರಿಗೊಳಿಸಿದ್ದು, ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ಬಂದ್ ಮಾಡಲಾಗಿದ್ದು, ಕಠಿಣ ಕ್ರಮ ಜಾರಿ ನಡುವೆಯೂ ಖಾಸಗಿ ವಾಹನ ಮಾಲೀಕರು ನಿಯಮ ಉಲ್ಲಂಘಿಸುತ್ತಿರುವುದು ಸೋಂಕು ಹರಡುವಿಕೆಗೆ ಪ್ರಮುಖ ಕಾರಣವಾಗಿದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳಿಗೆ, ಸರಕು ಸಾಗಣೆ ವಾಹನಗಳಿಗೆ ಮತ್ತು ಆರೋಗ್ಯ ಸೇವೆಯ ವಾಹನಗಳಿಗೆ ಮಾತ್ರ ಅವಕಾಶ ನೀಡಿರುವ ಸರ್ಕಾರವು ಇತರೆ ಎಲ್ಲಾ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಬೆಂಗಳೂರು ಒಂದರಲ್ಲೇ ಪೊಲೀಸ್ ಇಲಾಖೆಯು ಇದುವರೆ ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಂದ ಸುಮಾರು ರೂ.4 ಕೋಟಿಯಷ್ಟು ದಂಡ ವಸೂಲಿ ಮಾಡಿದ್ದು, ಗಂಭೀರ ಪ್ರಕರಣಗಳಲ್ಲಿ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ನಿನ್ನೆಯಷ್ಟೇ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲೂ ಅನಗತ್ಯವಾಗಿ ಓಡಾಡುತ್ತಿದ್ದ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರನ್ನು ಸೀಜ್ ಮಾಡಲಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ಹೊರೆಗೆ ಊಟಕ್ಕೆ ಹೋಗಿದ್ದಾಗಿ ನೆಪ ಹೇಳಿದ ಯುವಕನಿಗೆ ಶಾಕ್ ನೀಡಿದ ಪೊಲೀಸರು ಕಾರನ್ನು ಜಪ್ತಿ ಮಾಡಿ ಠಾಣೆ ಕರೆದೊಯ್ದದಿದ್ದಾರೆ.

ಮತ್ತೊಂದು ಪ್ರಕಣದಲ್ಲೂ ಕೂಡಾ ಅನಾವಶ್ಯಕವಾಗಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕಾರಿನಲ್ಲಿ ಬಂದಿದ್ದ ಯುವಕರ ಗುಂಪೊಂದನ್ನು ಲಾಕ್ ಮಾಡಿದ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಿರುವ ಸಾಧ್ಯತೆಗಳಿವೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಇಷ್ಟು ದಿನಗಳ ಕಾಲ ಲಾಕ್‌ಡೌನ್ ಉಲ್ಲಂಘಿಸುವ ವಾಹನ ಮಾಲೀಕರಿಗೆ ಸಾಮಾನ್ಯ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರು ಇದೀಗ ಕಠಿಣ ಕಾನೂನು ಕ್ರಮಗಳನ್ನು ಒಳಗೊಂಡ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳ ಅಡಿ ಸಾವಿರಾರು ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಪ್ರಕರಣಗಳಲ್ಲಿ ವಾಹನ ಮಾಲೀಕರು ಕಡ್ಡಾಯವಾಗಿ ಕೋರ್ಟ್‌ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಸಾಮಾನ್ಯ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದರೆ ಸ್ಥಳದಲ್ಲೇ ದಂಡ ಪಾವತಿಸಿ ನಿಯಮ ಉಲ್ಲಂಘನೆ ಪ್ರಕರಣವನ್ನು ಹಿಂಪಡೆಯಬಹುದಾಗಿದ್ದು, ಆದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳ ಇತ್ಯರ್ಥಕ್ಕಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ.

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಇದಕ್ಕಾಗಿ ನೀವು ವಕೀಲರನ್ನು ಸಹ ನೇಮಕ ಮಾಡಿಕೊಳ್ಳಬೇಕಿದ್ದು, ನಿರ್ಬಂಧದ ಅವಧಿಯಲ್ಲಿ ವಾಹನವನ್ನು ಬಳಕೆ ಮಾಡಿದ್ದಕ್ಕೆ ಸೂಕ್ತ ಕಾರಣ ಮತ್ತು ದಾಖಲೆಗಳನ್ನು ಹಾಜರುಪಡಿಸಬೇಕು. ಒಂದು ವೇಳೆ ಕೋರ್ಟ್ ವಿಚಾರಣೆಯಲ್ಲಿ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅಡಿ ಕನಿಷ್ಠ 7 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಮರ್ಸಿಡಿಸ್ ಕಾರುಗಳನ್ನು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

ಇಷ್ಟು ದಿನ ಕಾಲ ಲಾಕ್‌ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ವಿರುದ್ದ ಕೇವಲ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಿ ಕೈಬಿಡುತ್ತಿದ್ದ ಪೊಲೀಸರು ಇದೀಗ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

More from DriveSpark

Article Published On: Wednesday, May 26, 2021, 18:37 [IST]
English summary
Bengaluru Police Seized Two Mercedes-Benz Cars For Lockdown Violation. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+