BMTC: ಬಿಎಂಟಿಸಿಗೆ ಕಾಮಧೇನುವಾದ ವಾಯು ವಜ್ರ ಬಸ್.. ಫುಲ್ ಡಿಮ್ಯಾಂಡ್!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ - BMTC) ಬಸ್‌ಗಳು ಉದ್ಯಾನ ನಗರಿ ನಿವಾಸಿಗಳ ಜೀವನಾಡಿಯಾಗಿವೆ. ಪ್ರಯಾಣಿಕರನ್ನು ಕಡಿಮೆ ಖರ್ಚಿನಲ್ಲಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ಸುರಕ್ಷಿತವಾಗಿ ತಲುಪಿಸಲು ಹೆಸರುವಾಸಿಯಾಗಿವೆ. ಈ ಬೇಸಿಗೆಯಲ್ಲಿ ವಾಯುವಜ್ರ ಬಸ್‌ಗಳು ಸಾರಿಗೆ ಸಂಸ್ಥೆಗೆ ಕಾಮಧೇನುವಾಗಿ ಮಾರ್ಪಟ್ಟಿವೆ.

ಬಿಸಿಲಿನ ಝಳ ಹೆಚ್ಚಿದ್ದರಿಂದ ಏಪ್ರಿಲ್‌ನಲ್ಲಿ ಬಿಎಂಟಿಸಿಯ ಹವಾನಿಯಂತ್ರಿತ (ಎಸಿ) ವೋಲ್ವೋ ಬಸ್‌ಗಳಲ್ಲಿ ಶೇಕಡ 10% ಹೆಚ್ಚು ಪ್ರಯಾಣಿಕರು ಓಡಾಟ ನಡೆಸಿದ್ದಾರೆ. ಕಳೆದ ವರ್ಷದ ಇದೇ ಏಪ್ರಿಲ್‌ಗೆ ಹೋಲಿಸಿದರೆ, ಈ ಬಾರಿ ದಿನದ ಆದಾಯದ ಪ್ರಮಾಣವು ಹೆಚ್ಚಳಗೊಂಡಿದೆ. ಸಾಮಾನ್ಯವಾಗಿ, ವಿಮಾನ ನಿಲ್ದಾಣ ಹಾಗೂ ಐಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಸಂಚರಿಸುವ ವೋಲ್ವೋ ಬಸ್‌ಗಳು ಕೋವಿಡ್ ನಂತರ ಸಾಕಷ್ಟು ನಷ್ಟವನ್ನು ಅನುಭವಿಸಿದ್ದವು.

Bengaluru Summer Heat Bmtc Volvo Buss Have Huge Demand Revenue Increase

ಈ ಏಪ್ರಿಲ್‌ನಲ್ಲಿ ಬಿಎಂಟಿಸಿಯು ಪ್ರತಿದಿನ ಸರಾಸರಿ 457 ವೋಲ್ವೋ (ವಾಯು ವಜ್ರ & ವಜ್ರ) ಬಸ್‌ಗಳ ಸೇವೆಯನ್ನು ಒದಗಿಸಿತ್ತು. ದೈನಂದಿನ ಪ್ರಯಾಣಿಕರ ಸಂಖ್ಯೆ 1.15 ಲಕ್ಷದಿಂದ 1.27 ಲಕ್ಷಕ್ಕೆ ಏರಿಕೆಯಾಗಿದ್ದು, ದಿನವೊಂದರ ಆದಾಯವು ರೂ.62.54 ಲಕ್ಷದಿಂದ ರೂ.66.05 ಲಕ್ಷಕ್ಕೆ ಅಧಿಕಗೊಂಡಿದೆ. ಮೇ ತಿಂಗಳಲ್ಲಿಯೂ ಪ್ರಯಾಣಿಕರ ದಟ್ಟಣೆ ಮುಂದುವರಿದಿದ್ದು, ಬಿಎಂಟಿಸಿಯ ಒಟ್ಟು 575 ವೋಲ್ವೋ ಬಸ್‌ಗಳಲ್ಲಿ 484 ಬಸ್‌ಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು, 'ವಾಯು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ಜನಸಾಮಾನ್ಯರು ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆ, ತಮ್ಮ ಓಡಾಟಕ್ಕಾಗಿ ವೋಲ್ವೋ ಬಸ್‌ಗಳನ್ನು ಆಯ್ದುಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ. ಕಳೆದ ವರ್ಷ ಪ್ರಯಾಣಿಕರನ್ನು ಆಕರ್ಷಿಸಲು ವಾಯು ವಜ್ರ ಬಸ್‌ಗಳ ಟಿಕೆಟ್ ದರವನ್ನು ಶೇಕಡ 54% ಇಳಿಕೆ ಮಾಡಲಾಗಿತ್ತು.

Bengaluru Summer Heat Bmtc Volvo Buss Have Huge Demand Revenue Increase

ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು ಬಿಎಂಟಿಸಿಗೆ ಪ್ರತಿದಿನ ಬರುತ್ತಿದ್ದ ಒಟ್ಟು ರೂ.4 ಕೋಟಿ ಆದಾಯದಲ್ಲಿ ವಾಯು ವಜ್ರ ಬಸ್‌ಗಳ ಪಾಲು ರೂ.50.37 ಲಕ್ಷವಿತ್ತು. ಆ ಬಳಿಕ, ಸಾರಿಗೆ ಸಂಸ್ಥೆಯ ಲಾಭಂಶವು ರೂ.4.6 ಕೋಟಿಗೆ ಏರಿಕೆಯಾದರೂ ನಾನಾ ಕಾರಣಗಳಿಗೆ ವಜ್ರ ಬಸ್‌ಗಳ ಗಳಿಕೆ ರೂ.28.57 ಲಕ್ಷಕ್ಕೆ ಕುಸಿತ ಕಂಡಿದೆ.

ವಾಯು ವಜ್ರ ಬಸ್‌ಗಳು (ಪಾಸ್‌ ಹೊರತುಪಡಿಸಿ) ಪ್ರತಿ ಕಿಲೋಮೀಟರ್‌ಗೆ ರೂ.50.81 ಆದಾಯವನ್ನು ಗಳಿಸುತ್ತಿವೆ. ಆದರೆ, ನಿರ್ವಹಣಾ ವೆಚ್ಚವು ರೂ.90-100 ಇದೆ. ಈಚೆಗೆ ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಪ್ರತಿ ಕಿಲೋಮೀಟರ್‌ ಆದಾಯ ಪ್ರಮಾಣದಲ್ಲಿ ಏರಿಕೆಯಾಗುವವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ವಾಯು ವಜ್ರ ಬಸ್‌ಗಳನ್ನು ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.

Bengaluru Summer Heat Bmtc Volvo Buss Have Huge Demand Revenue Increase

ಬೆಂಗಳೂರಿನ ವಿವಿಧ ಭಾಗಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುವ ವಾಯು ವಜ್ರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 17,921 ಜನರು ಪ್ರಯಾಣಿಸುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 16,260 ಮಂದಿ ಓಡಾಟವನ್ನು ನಡೆಸಿದ್ದರು. ದೈನಂದಿನ ಆದಾಯದ ಪ್ರಮಾಣವು ರೂ.33.31 ಲಕ್ಷದಿಂದ ರೂ.33.62 ಲಕ್ಷಕ್ಕೆ ಅಧಿಕಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 16, 2024, 17:33 [IST]
English summary
Bengaluru summer heat bmtc volvo buss have huge demand revenue increase
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+