ಬೆಂಗಳೂರು: ಕಲ್ಲು ಹೊಡೆದು ದರೋಡೆಗೆ ಮುಂದಾದ ಕಳ್ಳ.. ಕಾರಿನ ಈ ಸೇಫ್ಟಿ ಫೀಚರ್ ನೋಡಿ ಸುಮ್ಮನಾದ! ವಿಡಿಯೋ

ಇವತ್ತಿನ ದಿನಮಾನದಲ್ಲಿ ಹೊಸ ಕಾರು ಖರೀಸುವವರೂ ಬೆಲೆಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ತಾವು ಕೊಂಡುಕೊಳ್ಳುವ ವಾಹನ ಸೇಫ್ಟಿ ದೃಷ್ಟಿಯಿಂದ ಅತ್ಯುತ್ತಮವಾಗಿರಬೇಕು ಎಂದು ಭಾವಿಸುತ್ತಾರೆ. ಪ್ರಮುಖವಾಗಿ ಡ್ಯಾಶ್‌ಕ್ಯಾಮ್ (dashcam) ಅನ್ನು ಉತ್ತಮ ಸುರಕ್ಷತಾ ಸಾಧನೆವೆಂದು ಪರಿಗಣಿಸಿ, ಅದಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ.

ಸದ್ಯ, ಬೆಂಗಳೂರಿನಲ್ಲಿ (Bangalore) ನಡೆದ ಘಟನೆಯೊಂದರಲ್ಲಿ ಅದೇ ಡ್ಯಾಶ್‌ಕ್ಯಾಮ್ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು ಮಾಡಿದೆ. ಈ ವೀಡಿಯೋವನ್ನು ಸಿಟಿಜನ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು (Citizens Movement, East Bengaluru) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಕರಣ ಅಕ್ಟೋಬರ್ 9 ರಂದು ನಡೆದಿದೆ ಎಂದು ವರದಿಯಾಗಿದೆ.

ಬೆಂಗಳೂರು: ಕಲ್ಲು ಹೊಡೆದು ದರೋಡೆಗೆ ಮುಂದಾದ ಕಳ್ಳ.. ಕಾರಿನ ಈ ಸೇಫ್ಟಿ ಫೀಚರ್ ನೋಡಿ ಸುಮ್ಮನಾದ! ವಿಡಿಯೋ

'ಸಂಜೆ 6:40ರ ಸುಮಾರಿಗೆ ಸರ್ಜಾಪುರದಿಂದ (Sarjapur) 3 ಕಿಮೀ ದೂರದಲ್ಲಿರುವ ದೊಡ್ಡಕನ್ನೆಲ್ಲಿ- ಚಿಕ್ಕನಾಯಕನಹಳ್ಳಿ ರಸ್ತೆಯ (Doddakanahalli - Chikkanayakanahalli Road) ಪ್ರೈಮಸ್ ಶಾಲೆ ಸಮೀಪದ ನಿವಾಸಿಯೊಬ್ಬರು, ಕಳ್ಳರು ತನನ್ನು ದೋಚಲು ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದ್ದು, ಕಲ್ಲು ಹಿಡಿದು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದರು' ಎಂದು ಟ್ವಿಟರ್ ನಲ್ಲಿ ಬರೆಯಲಾಗಿದೆ.

ಮುಂದುವರಿದು, 'ಡ್ಯಾಶ್‌ಕ್ಯಾಮ್ ಅನ್ನು ಗಮನಿಸಿದ ದುಷ್ಕರ್ಮಿ, ಕಾರಿನೊಳಗಿರುವ ಯಾರನ್ನು ಮುಟ್ಟಿಲ್ಲ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಯಮಾಡಿ ಶೀಘ್ರ ಆರೋಪಿಗಳನ್ನು ಬಂಧಿಸಿ, ಜೊತೆಗೆ ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸರ ಗಸ್ತು ಹೆಚ್ಚಿಸಿ ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ, ಸಿಟಿಜನ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಸಂಘಟನೆ ಟ್ಯಾಗ್ ಮಾಡಿತ್ತು.

ಬೆಂಗಳೂರು: ಕಲ್ಲು ಹೊಡೆದು ದರೋಡೆಗೆ ಮುಂದಾದ ಕಳ್ಳ.. ಕಾರಿನ ಈ ಸೇಫ್ಟಿ ಫೀಚರ್ ನೋಡಿ ಸುಮ್ಮನಾದ! ವಿಡಿಯೋ

ಜೊತೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಟ್ಯಾಗ್ ಮಾಡಲಾಗಿದ್ದು, ಸರ್.. ಇಂತಹ ರಸ್ತೆಗಳಲ್ಲಿ ಬೀದಿ ದೀಪಗಳು ಹಾಳಾಗಿದ್ದು, ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸರು (Bengaluru City Police), ಅಕ್ಟೋಬರ್ 10 ರಂದು ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಬಗ್ಗೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದು, 'ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಸರಿ ಸುಮಾರು 300 ಮೀಟರ್ ದೂರದಲ್ಲಿ ಇದು ನಡೆದಿದೆ' ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, 'ಕಾರಿನಲ್ಲಿ ಡ್ಯಾಶ್‌ಕ್ಯಾಮ್ ಇಲ್ಲದಿದ್ದರೆ, ಕಳ್ಳರು, ಬೇರೆ ರೀತಿಯಾಗಿಯೇ ವರ್ತಿಸುತ್ತಿದ್ದರು. ಸಂಜೆ 6:40ಕ್ಕೆ ಈ ಘಟನೆ ಸಂಭವಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಪ್ರದೇಶದಲ್ಲಿ ಕಳೆದ ವರ್ಷವೂ ಇಂತಹ ಕಳ್ಳತನಗಳು ನಡೆದಿವೆ' ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಕಳ್ಳರು, ಮಹಿಳೆಯರು ಓಡಿಸುವ ಕಾರುಗಳನ್ನು ಹೆಚ್ಚಿಗೆ ಟಾರ್ಗೆಟ್ ಮಾಡುತ್ತಾರೆ. ಆದರೆ, ಬೆಂಗಳೂರಿನ ಈ ಘಟನೆಯಲ್ಲಿ ಕಾರಿನ ಡ್ಯಾಶ್‌ಕ್ಯಾಮ್ ನಿಂದ ಅದರಲ್ಲಿದ್ದವರೂ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ. ಸುರಕ್ಷತೆಯ ದೃಷ್ಟಿಯಿಂದ ಡ್ಯಾಶ್‌ಕ್ಯಾಮ್ ಕಾರಿನಲ್ಲಿದ್ದರೆ ಇಂತಹ ಅಪಾಯಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಸೇಫ್ಟಿ ದೃಷ್ಟಿಯಿಂದ ನಿಮ್ಮ ಕಾರಿನಲ್ಲೂ ಡ್ಯಾಶ್‌ಕ್ಯಾಮ್ ಅಳವಡಿಸುವುದನ್ನು ಮರೆಯದಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 12, 2023, 10:54 [IST]
English summary
Bengaluru thief who started the robbery by pelting stones stop after seeing the car dashcam video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+