ಲೀಟರ್‌ಗೆ 3 ಕಿ.ಮೀ ಮೈಲೇಜ್ ಕೂಡ ಇಲ್ಲ! ಹ್ಯುಂಡೈ ಕಾರು ಮಾಲೀಕರು ಹೇಳಿದ ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ
ಕಾಲ ಬದಲಾಗಿದೆ, ಟೆಕ್ನಾಲಜಿ ಊಹಿಸದಷ್ಟು ಬೆಳೆದುನಿಂತಿದೆ. ಮುಖ್ಯವಾಗಿ ವಾಹನ ವಲಯದಲ್ಲಿ ಹಿಂದಿನ ಕಾಲದ ಕಾರುಗಳಿಗೆ ಹೋಲಿಸಿದರೆ ಹೊಸ ಟೆಕ್ ಹಾಗೂ ಸುಧಾರಿಸಿದ ಎಂಜಿನ್‌ಗಳಿಂದಾಗಿ ಹೊಸ ಕಾರುಗಳ ಮೈಲೇಜ್ ಪ್ರಶಂಸನೀಯವಾಗಿ ಹೆಚ್ಚಾಗಿದೆ. ಆದ್ರೆ ಇತ್ತೀಚೆಗೆ ನಂಬಲಾಗದಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು ಮಾಲೀಕ ಬೆಚ್ಚಿಬಿದ್ದಿದ್ದಾನೆ.
ಹೌದು ಹ್ಯುಂಡೈ ವೆನ್ಯೂ ಕಾರು ಮಾಲೀಕನಿಗೆ ತನ್ನ ಕಾರು ಕೊಟ್ಟ ಮೈಲೇಜ್ ಕಂಡು ಬೆರಗಾಗಿದ್ದಾನೆ. ನಿಧಾನವಾಗಿ ಚಲಿಸುವ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ಹೆಚ್ಚಿನ ಮೈಲೇಜ್ ಸಿಗೋದಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದ್ರೆ 18 ಕಿ.ಮೀ ಮೈಲೇಜ್ ನೀಡುವ ಕಾರು ಆಶ್ಚರ್ಯಕರವಾಗಿ ಕೇವಲ 2 ಕಿ.ಮೀ ಮೈಲೇಜ್ ನೀಡುವುದಾಗಿ ತೋರಿಸಿದ್ರೆ ಯಾರು ತಾನೆ ಬೆಚ್ಚಿಬೀಳುವುದಿಲ್ಲ ಹೇಳಿ?

ವಾಸ್ತವವಾಗಿ, ಬೆಂಗಳೂರು 2022 ರಲ್ಲೇ ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರ ಎಂದು ಗುರ್ತಿಸಿಕೊಂಡಿದೆ. ಈಗ ನಾವು ಹೇಳುವುದನ್ನು ಕೇಳಿದ್ರೆ ನಿಜ ಬಿಡಿ ಎನ್ನುತ್ತೀರ. ಬೆಂಗಳೂರಿನ ಟ್ರಾಫಿಕ್ (Bengaluru Traffic) ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಹ್ಯುಂಡೈ ವೆನ್ಯೂ ಮಾಲೀಕರು ಬೆಂಗಳೂರಿನಲ್ಲಿ ತಮ್ಮ ಚಾಲನಾ ಅನುಭವವನ್ನು ಹಂಚಿಕೊಂಡಿದ್ದಾರೆ. ನಗರದ ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿದ ಹ್ಯುಂಡೈ ವೆನ್ಯೂ ಮಾಲೀಕರಿಗೆ ಲೀಟರ್‌ಗೆ ಕೇವಲ 2 ಕಿ.ಮೀ ಮೈಲೇಜ್ ತೋರಿಸಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿಯೇ ಟ್ರಾಫಿಕ್ ಹೆಚ್ಚಾಗಿರುತ್ತದೆ. ಇನ್ನು ನಿರ್ಮಾಣ ಹಂತದ ಕಾರ್ಯಗಳು, ಅಗೆಯುವಿಕೆ ಅಥವಾ ರಸ್ತೆ ದುರಸ್ತಿ ಕೆಲಸ ನಡೆಯುತ್ತಿರುವಾಗ ಟ್ರಾಫಿಕ್ ಜಾಮ್ ಮಿತಿ ಮೀರುತ್ತದೆ. ಇಂತಹ ಸಂದರ್ಭಗಳಲ್ಲಿ ಒಂದು ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತದೆ. ಹ್ಯುಂಡೈ ವೆನ್ಯೂ ಮಾಲೀಕರು ಕೂಡ ಇಂತಹದ್ದೇ ಜಾಮ್‌ನಲ್ಲಿ ಸಿಲುಕಿದ್ದಾಗ ತನ್ನ ಕಾರು ಕೊಟ್ಟ ಮೈಲೇಜ್ ಕುರಿತು ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಾಲೀಕ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು 52 ನಿಮಿಷಗಳಲ್ಲಿ ಕೇವಲ 2.9 ಕಿ.ಮೀ ಪ್ರಯಾಣವನ್ನು ಮಾಡಿರುವುದನ್ನು ತೋರಿಸುತ್ತಿದೆ. ಟ್ರಿಪ್ ಇಂಧನ ದಕ್ಷತೆಯನ್ನು 2.8 kmpl ನಲ್ಲಿ ಪ್ರದರ್ಶಿಸುತ್ತಿರುವುದನ್ನು ಇಲ್ಲಿ ನಾವು ನೋಡಬಹುದು. ಮಾಲೀಕ ಇಕೋ ಮೋಡ್‌ನಲ್ಲಿ ವಾಹನ ಚಲಾಯಿಸುತ್ತಿದ್ದುದ್ದಾಗಿ ತಿಳಿಸಿದ್ದಾರೆ. ನಾರ್ಮಲ್ ಮತ್ತು ಸ್ಟೋರ್ಟ್ ಎಂಬ ಎರಡು ರೈಡ್ ಮೋಡ್‌ಗಳನ್ನು ಈ ಕಾರು ಹೊಂದಿದೆ.
ಈ ಎರಡರಲ್ಲಿ ಯಾವುದಾದರೂ ಆಕ್ಟಿವೇಟ್ ಆಗಿದ್ದರೆ ಮೈಲೇಜ್ ಇನ್ನೂ ಕಡಿಮೆಯಾಗುತ್ತಿತ್ತು. ಹ್ಯುಂಡೈ ವೆನ್ಯೂ ಇಕೋ ಮೋಡ್‌ನ ಜೊತೆಗೆ ಇತರ ಇಂಧನ ಉಳಿತಾಯ ವ್ಯವಸ್ಥೆಯನ್ನು ಸಹ ಹೊಂದಿದೆ. ಉದಾಹರಣೆಗೆ, SUV ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಅನ್ನು ಹೊಂದಿದೆ. ಈ ವೈಶಿಷ್ಟ್ಯವು ಟಾಪ್-ಸ್ಪೆಕ್ SX ಮತ್ತು SX(O) ರೂಪಾಂತರಗಳೊಂದಿಗೆ ಲಭ್ಯವಿದೆ.

ಹ್ಯುಂಡೈ ವೆನ್ಯೂ ಎಂಜಿನ್ ಸಹ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಮಾಲೀಕರು ಪೆಟ್ರೋಲ್ ರೂಪಾಂತರಗಳೊಂದಿಗೆ ಸುಮಾರು 18 ಕಿ.ಮೀ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 23 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಭಾರೀ ನಿಧಾನವಾಗಿ ಚಲಿಸುವ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಇಂಧನ ಉಳಿತಾಯ ಕ್ರಮಗಳು ಕೂಡ ವಿಫಲವಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
EV ಕಾರುಗಳು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಪೆಟ್ರೋಲ್ ಚಾಲಿತ ಕಾರುಗಳಂತೆಯೇ ಸಮಯವನ್ನು ತೆಗೆದುಕೊಳ್ಳುತ್ತವೆ. ಆದರೆ ಅವು ಆಫ್‌ನಲ್ಲಿ ಇದ್ದಾಗ ಕಡಿಮೆ ಶಕ್ತಿಯನ್ನು ಬಳಸುವುದರಿಂದ ರೇಂಜ್‌ನಲ್ಲಿ ಹೆಚ್ಚಾಗಿ ಬದಲಾವಣೆಗಳು ಇರುವುದಿಲ್ಲ. ಇದಲ್ಲದೆ, EV ಗಳು ರೀಜನ್ ಬ್ರೇಕಿಂಗ್‌ನಿಂದ ತುಸು ಹೆಚ್ಚಿನ ರೇಂಜ್ ಪಡೆಯುತ್ತವೆ. ಮೇಲೆ ತಿಳಿದಿಸಿದಂತೆ ಕಾರು ಕೊಟ್ಟ ಮೈಲೇಜ್ ಹಾಗೂ ಬೆಂಗಳೂರು ಟ್ರಾಫಿಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications