ಬೆಂಗಳೂರು ವಾಹನ ಸವಾರರೇ ನೀವು ಸಿಗ್ನಲ್ ಜಂಪ್ ಮಾಡಿದ್ರೆ ದಂಡವಿಲ್ಲ... ಆದ್ರೆ ಒಂದು ಷರತ್ತು!

ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡುತ್ತಿದುವಾಗ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿ ದಂಡ ಪಾವತಿಸುವಂತೆ ಚಲನ್ ಬಂದರೆ ಭಯ ಪಡುವ ಅಗತ್ಯವಿಲ್ಲ. ಇನ್ಮೊಂದೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ವಿನಾಯಿತಿ ನೀಡಲಿದ್ದಾರೆ. ನಗರದ ಪ್ರಮುಖ ರಸ್ತೆ ಜಂಕ್ಷನ್, ಸಿಗ್ನಲ್‌ಗಳಲ್ಲಿ ತುರ್ತುವಾಹನ ಆಂಬುಲೆನ್ಸ್‌ಗೆ ಜಾಗ ಮಾಡಿಕೊಡುವುದ್ದಾಗಿ ಸಿಗ್ನಲ್ ಜಂಪ್ ಮಾಡಿದ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಹೇಳಿದ್ದಾರೆ. ಈ ಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು (Bengaluru) ಟ್ರಾಫಿಕ್ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ವಾಹನ ಚಾಲಕರು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲು ಸಿಗ್ನಲ್‌ಗಳನ್ನು ಜಂಪ್ ಮಾಡುವುದರ ಕುರಿತು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಮಾತನಾಡಿ, ವಾಹನ ಚಾಲಕರು ಆಂಬ್ಯುಲೆನ್ಸ್‌ಗಳಿಗೆ ಜಾಗ ಮಾಡಿಕೊಡಲು ಸಿಗ್ನಲ್‌ಗಳನ್ನು ಜಂಪ್ ಮಾಡಿರುತ್ತಾರೆ. ಈ ವೇಳೆ ಟ್ರಾಫಿಕ್ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿ ದಂಡ ವಿಧಿಸಲಾಗಿರುತ್ತದೆ. ಇದರಿಂದ ವಾಹನ ಸವಾರರು ಅನಗತ್ಯವಾಗಿ ದಂಡಕ್ಕೆ ಸಿಲುಕುತಾರೆ.

Bengaluru Traffic

ಇದಕ್ಕೆ ಭಯಪಡಬೇಕಾಗಿಲ್ಲ, ಫಿಕ್ ಕಂಟ್ರೋಲ್ ರೂಂನಲ್ಲಿ ಸಂಪೂರ್ಣವಾಗಿ ಕ್ಯಾಮರಾಗಳನ್ನು ಪರಿಶೀಲಿಸಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದ ವಾಹನಗಳಿಗೆ ವಿಧಿಸಲಾಗಿದ್ದ ದಂಡವನ್ನು ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನು ಜಿಪಿಎಸ್ ಅಳವಡಿಸಲಾಗಿರುವ ಆಂಬ್ಯುಲೆನ್ಸ್‌ಗಳನ್ನು ಗುರುತಿಸಲು ಮತ್ತು ಸ್ವಯಂಚಾಲಿತವಾಗಿ ಸಿಗ್ನಲ್​​ನಲ್ಲಿ ಹಸಿರು ಬಣ್ಣ ಪರಿವರ್ತನೆ ಮಾಡಲು 10 ಟ್ರಾಫಿಕ್ ಸಿಗ್ನಲ್ ಜಂಕ್ಷನ್‌ಗಳಲ್ಲಿ ಜಿಯೋಫೆನ್ಸಿಂಗ್ ಅಳವಡಿಸಲಾಗಿದೆ.

10 ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿತ್ಯ ಸಂಚರಿಸುವ ಸುಮಾರು 80 ಆಂಬುಲೆನ್ಸ್‌ಗಳಲ್ಲಿ ಜಿಪಿಎಸ್‌ ಅಳವಡಿಸಲಾಗಿದೆ. ಈ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಂಬ್ಯುಲೆಸ್ ಬರುವುದನ್ನು 100 ಮೀಟರ್ ದೂರದಲ್ಲಿಯೇ ಜಿಪಿಎಸ್ ತಂತ್ರಜ್ಞಾನದ ಮೂಲಕ ಗುರುತಿಸಿ ರೆಡ್ ಸಿಗ್ನಲ್ ಇದಲ್ಲಿ ಕೂಡಲೇ ಹಸಿರು ಬಣ್ಣಕ್ಕೆ ಬರುವಂತೆ ಮಾಡಲಾಗುತ್ತಿದೆ. ಇದರಿಂದ ಮುಂದೆ ನಿಂತ ವಾಹನಗಳು ಸರಾಗವಾಗಿ ಮುಂದೆ ಹೋದರೆ ಹಿಂದೆ ಬಂದ ಆಂಬ್ಯುಲೆಸ್‌ಗೆ ದಾರಿ ಬಿಡಲು ಸಹಕಾರಿಯಾಗಲಿದೆ.

Ambulance In Bengaluru

ಇನ್ನು ಟ್ರಾಫಿಕ್ ಸುದ್ದಿಗೆ ಸಂಬಂಧಿಸಿದಂತೆ, ಹೆಬ್ಬಾಳದ ಫ್ಲೈಓವರ್ ಮೇಲೆ ಬಿಎಂಡಬ್ಲ್ಯು ಕಾರಿನಲ್ಲಿ ಇಂಧನ ಖಾಲಿಯಾಗಿ ನಿಂತಿತ್ತು, ಸದಾ ಟ್ರಾಫಿಕ್‌ನಿಂದ ಕೂಡಿರುವ ಈ ಸೇತುವೆ ಮೇಲೆ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಾಲೀಕನಿಗೆ ಈಗ ದಂಡ ವಿಧಿಸಲಾಗಿದೆ. ಈ ಬಿಎಂಡಬ್ಲ್ಯು Z4ನ ಚಿತ್ರವನ್ನು ಇತ್ತೀಚೆಗೆ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ, ಬಿಳಿ ಬಿಎಂಡಬ್ಲ್ಯು Z4 ಜನನಿಬಿಡ ರಸ್ತೆಯ ಬದಿಯಲ್ಲಿ ನಿಂತಿತು.

"ಇಂಧನ ಖಾಲಿಯಾಗಿದೆ.... ಉದ್ದೇಶಪೂರ್ವಕ ಸಂಚಾರ ಅಡಚಣೆಗಾಗಿ ಬುಕ್ ಮಾಡಲಾಗಿದೆ ಹೆಬ್ಬಾಳ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ನಮ್ಮ ಪ್ರಕಾರ ಈ ನಿರ್ದಿಷ್ಟ ಸ್ಪೋರ್ಟ್ಸ್ ಕಾರು ಭಾರೀ ಟ್ರಾಫಿಕ್ ಇರುವ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು, ಕಾರು ಸ್ಥಗಿತಗೊಂಡ ಬಳಿಕ ದುಪ್ಪಟ್ಟು ಟ್ರಾಫಿಕ್ ಜಾಮ್‌ಗೆ ಕಾರಣವಾಗಿರಬೇಕು. ಇದು ಕಾನೂನುಬದ್ಧವೇ?: ಕಾರಿನಲ್ಲಿ ಇಂಧನ ಖಾಲಿಯಾಗಿದ್ದಕ್ಕೆ ದಂಡ ವಿಧಿಸುವ ಕಾನೂನು ಇದೆಯೇ? ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ ಇದನ್ನು ಎತ್ತಿ ತೋರಿಸಲಾಗಿದೆ.

Ambulance In Bengaluru

ಇದರಡಿ ಅಪಾಯ ಅಥವಾ ಸಾರ್ವಜನಿಕ ಮಾರ್ಗ ಅಥವಾ ಸಂಚಾರ ಮಾರ್ಗದಲ್ಲಿ ಅಡಚಣೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಹಾಗೆಯೇ ಪೊಲೀಸರು 500 ರೂ.ಗಳ ದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದ್ದಾರೆ. ಈ ನಿರ್ದಿಷ್ಟ ನಿಯಮವನ್ನು ಸಾಮಾನ್ಯವಾಗಿ ಎಲ್ಲೆಡೆ ಅನ್ವಯಿಸಲಾಗುವುದಿಲ್ಲ. ಇದು ಹೆಚ್ಚಿನ ಟ್ರಾಫಿಕ್ ದಟ್ಟಣೆಯನ್ನು ಹೊಂದಿರುವ ರಸ್ತೆಗಳಲ್ಲಿ ನಡೆಯಬಹುದು. ವಾಹನವನ್ನು ಹೆಚ್ಚಿನ ಟ್ರಾಫಿಕ್ ಜಾಮ್ ಇರುವ ರಸ್ತೆಗಳಿಗೆ ತರುವಾಗ ತಮ್ಮ ನಿರ್ಲಕ್ಷ್ಯತನದಿಂದ ಇತರರಿಗೆ ಅಡ್ಡಿಯಾಗದಂತೆ ಜಾಗರೂಕರಾಗಿರಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 16, 2024, 17:07 [IST]
English summary
Bengaluru traffic police cancel fines if you jump signal to make way for ambulance
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+