ಈಗಾಗಲೇ 1.61 ಲಕ್ಷ ರೂ. ದಂಡವಿದೆ... ಆದ್ರೂ ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ: ಯಾರೀತ?
ಬೆಂಗಳೂರಿನಲ್ಲಿ ಕಳೆದ ವರ್ಷವಿದ್ದ ವಾಹನಗಳ ಸಂಖ್ಯೆ ವರ್ಷ ಕಳೆದಂತೆ ದುಪ್ಪಟ್ಟು ಆಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ನಿಂದ ನಲುಗುತ್ತಿವೆ, ಈ ಹಿಂದೆ ದಂಡ ವಿಧಿಸುವಲ್ಲಿ ಬಿಸಿಯಾಗಿದ್ದ ಟ್ರಾಫಿಕ್ ಪೊಲೀಸರು ಈಗ ಸಂಚಾರ ದಟ್ಟಣೆ ಕಡಿಮೆಯಾದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ನಗರದ ಬಿಗಿ ರಸ್ತೆಗಳಲ್ಲಿ ಬೇಗನೆ ಗಮ್ಯವನ್ನು ತಲುಪಲು ಯತ್ನಿಸುವ ಹಲವರು ಮನಬಂದತೆ ಸಿಗ್ನಲ್ ಜಂಪ್, ರಾಂಗ್ ರೂಟ್, ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನಗರದಾದ್ಯಂತ ಕ್ಯಾಮರಾಗಳನ್ನು ಅಳವಡಿಸಿದ್ದರು ಹಲವರು ಇದನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಯಾವುದೇ ಭಯವಿಲ್ಲದೆ ತಾನು ಓಡಿಸುತ್ತಿದ್ದ ವಾಹನದ ಬೆಲೆಗಿಂತ ದುಪ್ಪಟ್ಟು ದಂಡವನ್ನು ಟ್ರಾಫಿಕ್ ನಿಯಮಗಳ ಉಲ್ಲಂಘಿಸಿ ಪಡೆದುಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈತನ ಬಗ್ಗೆ ವ್ಯಕ್ತಿಯೊಬ್ಬರು ಮಾಡಿದ ಪೋಸ್ಟ್‌ನಿಂದ ಎಚ್ಚೆತ್ತ ಪೊಲೀಸರು ಕೂಡಲೆ ಆತನ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿ ವಾಹನವನ್ನು ಸೀಜ್ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೊಲೀಸರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತವಾಗಿದೆ.

ಆಗಿದ್ದೇನು?: X (ಟ್ವಿಟರ್) ನಲ್ಲಿ ಶಿಬಮ್ ಎಂಬಾತ ನಿತ್ಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾ ಹೆಲ್ಮೆಟ್ ಇಲ್ಲದೆ ನಗರವೆಲ್ಲಾ ಓಡಾಡುತ್ತಿದ್ದ ಸ್ಕೂಟರ್ ಸವಾರನ ಬಗ್ಗೆ ಪೋಸ್ಟ್ ಮಾಡಿದ್ದರು. ವಾಹನದ ಮಾಲೀಕರ ವಿರುದ್ಧ ಸಂಗ್ರಹವಾಗಿರುವ ಒಟ್ಟು ದಂಡದ ಸ್ಕ್ರೀನ್‌ಶಾಟ್ ಅನ್ನು ಮತ್ತು ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.
ಕಳೆದ ಹಲವು ದಿನಗಳಿಂದ ಈ ವ್ಯಕ್ತಿಯನ್ನು ನೋಡುತ್ತಿದ್ದೇನೆ, ಯಾವುದೇ ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ರಾಜಾರೋಷವಾಗಿ ಸಂಚರಿಸುತ್ತಿದ್ದಾನೆ. ಯಾವ ಮಟ್ಟಿಗೆ ಅಂದರೆ ಕಳೆದ ವರ್ಷ 1 ಲಕ್ಷವಿದ್ದ ಈತನ ದಂಡ ಇಂದು 1 ಲಕ್ಷ 60 ಸಾವಿರಕ್ಕೆ ಏರಿದೆ. ಇಷ್ಟು ನಿಯಮಗಳ ಉಲ್ಲಂಘನೆಯಾದರೂ ಪೊಲೀಸರು ಈತನನ್ನು ಹಿಡಿಯದಿರುವುದು ಅಥವಾ ವಾಹನವನ್ನು ಸೀಜ್ ಮಾಡದಿರುವುದು ನನಗೆ ಅಚ್ಚರಿಗೊಳಿಸಿದೆ ಎಂದು ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದರು.

ಈ ವೈರಲ್ ಪೋಸ್ಟ್ ಪೊಲೀಸರ ಗಮನಕ್ಕೆ ಬರುವ ಮುನ್ನವೆ ನಗರದಲ್ಲಿ ಸಂಚಾರ ನಿಯಮ ಜಾರಿ ಕುರಿತು ಚರ್ಚೆಗೆ ನಾಂದಿ ಹಾಡಿತ್ತು. ಅಧಿಕಾರಿಗಳು ಇನ್ನೂ ಸ್ಕೂಟರ್ ಅನ್ನು ಏಕೆ ವಶಪಡಿಸಿಕೊಳ್ಳಲಿಲ್ಲ ಎಂದು ಹಲವಾರು ಬಳಕೆದಾರರು ಟ್ರಾಫಿಕ್ ಪೊಲೀಸರನ್ನು ಪ್ರಶ್ನಿಸಿದ್ದರು. ಸಂಚಾರ ದಂಡವು 1.61 ಲಕ್ಷ ರೂ. ಎಂಬ ವ್ಯಕ್ತಿಯ ಬಹಿರಂಗಪಡಿಸುವಿಕೆ ಗೊತ್ತಾಗುತ್ತಿದ್ದಂತೆ ಕೂಡಲೆ ಪೋಲಿಸರು ಎಚ್ಚೆತ್ತುಕೊಂಡರು.
ಅಷ್ಟೊತ್ತಿಗಾಗಲೇ ವಿಷಯವನ್ನು ತಣ್ಣಗಾಗಿಸಲು ಪೊಲೀಸರು ಆ ವಾಹನ ಮಾಲೀಕನಿಗೆ ಬಲೆ ಬೀಸಿದ್ದರು. ಕೊನೆಗೂ ಆತನನ್ನು ಕರೆತಂದು ವಾಹನವನ್ನು ಸೀಜ್ ಮಾಡಿದ್ದಾರೆ. ಸದರಿ ವಾಹನವನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಟಿ ಮಾರ್ಕೆಟ್ ಸಂಚಾರ ಪೋಲೀಸರು ಫೋಟೋ ಸಮೇತ X ನಲ್ಲಿ ಶಿಬಮ್‌ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ. 1.61 ಲಕ್ಷ ರೂ. ದಂಡವಿರುವ ವಾಹನವನ್ನು ಇಷ್ಟು ದಿನ ಏಕೆ ಸುಮ್ಮನೆ ಬಿಟ್ಟಿದ್ದಾರೆ? ಎಂದು ಹಲವರು ಕಿಡಿಕಾರಿದರೆ, ಇನ್ನೂ ಕೆಲವರು ಪೊಲೀಸರ ತ್ವರಿತ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications