ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ರಸ್ತೆ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆ ಮಾಡಲು ಬೆಂಗಳೂರು ನಗರ ಸಂಚಾರಿ ಪೊಲೀಸರು ದ್ವಿಚಕ್ರ ವಾಹನಗಳ ತೀವ್ರ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ತಪಾಸಣೆಯಲ್ಲಿ ರೇರ್ ವೀವ್ ಮಿರರ್ ಹಾಗೂ ಇಂಡಿಕೇಟರ್'ಗಳನ್ನು ಹೊಂದಿರದ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ.

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಟರ್ನ್ ಮಾಡುವಾಗ ರೇರ್ ವೀವ್ ಮಿರರ್'ಗಳನ್ನು ನೋಡದೇ ಇರುವುದು ಹಾಗೂ ಟರ್ನ್ ಇಂಡಿಕೇಟರ್'ಗಳನ್ನು ಬಳಸದೇ ಇರುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೇರ್ ವೀರ್ ಮಿರರ್ ಹಾಗೂ ಇಂಡಿಕೇಟರ್'ಗಳನ್ನು ಹೊಂದಿಲ್ಲದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಇನ್ನು ಮುಂದೆ ರೇರ್ ವೀವ್ ಮಿರರ್ ಹಾಗೂ ಇಂಡಿಕೇಟರ್'ಗಳನ್ನು ಹೊಂದಿಲ್ಲದ ವಾಹನಗಳಿಗೆ ರೂ.500ಗಳ ದಂಡ ವಿಧಿಸಲಾಗುತ್ತದೆ. ಇದರಿಂದ ರೇರ್ ವೀವ್ ಮಿರರ್ ಹಾಗೂ ಇಂಡಿಕೇಟರ್'ಗಳ ಬಳಕೆ ಹೆಚ್ಚಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಬೆಂಗಳೂರು ನಗರ ಸಂಚಾರಿ ಪೊಲೀಸರ ಹೊಸ ಆದೇಶದಿಂದಾಗಿ ಬೆಂಗಳೂರಿನ ದ್ವಿಚಕ್ರ ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ. ಸದ್ಯಕ್ಕೆ ಬಳಕೆಯಲ್ಲಿರುವಬಹುತೇಕ ದ್ವಿಚಕ್ರ ವಾಹನಗಳು ರೇರ್ ವೀವ್ ಮಿರರ್ ಹೊಂದದೇ ಇರುವುದೇ ಇದಕ್ಕೆ ಪ್ರಮುಖ ಕಾರಣ.

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಅಂತಹ ದ್ವಿಚಕ್ರ ವಾಹನಗಳು ಪೊಲೀಸರ ತಪಾಸಣೆ ವೇಳೆ ಕಂಡು ಬಂದರೆ ದಂಡ ಪಾವತಿಸದೇ ಬೇರೆ ದಾರಿಯಿಲ್ಲ. ಇದರ ಜೊತೆಗೆ ಕೆಲವರು ದಿನ ನಿತ್ಯದ ಓಡಾಟಕ್ಕಾಗಿ ಬೈಕ್ ಶೇರಿಂಗ್ ಆ್ಯಪ್'ಗಳನ್ನು ಅವಲಂಬಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಈ ಸನ್ನಿವೇಶದಲ್ಲಿ ಬೈಕ್'ಗಳನ್ನು ಬಾಡಿಗೆಗೆ ನೀಡುವ ಕಂಪನಿಯ ಬದಲು, ಅವುಗಳನ್ನು ಬಳಸುವ ಗ್ರಾಹಕರು ದಂಡ ತೆರಬೇಕಾಗುತ್ತದೆ. ಬೈಕುಗಳನ್ನು ಬಾಡಿಗೆಗೆ ಪಡೆದ ವ್ಯಕ್ತಿಯ ಬದಲು ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ಕಂಪನಿಗಳಿಗೆ ಪೊಲೀಸರು ದಂಡ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಸಾರಿಗೆ ಇಲಾಖೆಯ ಪ್ರಕಾರ, ಕಳೆದ ವರ್ಷದ ಜನವರಿ ತಿಂಗಳ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳಿವೆ.ಈ ಪೈಕಿ 64 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ಅಪಘಾತ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು ದ್ವಿಚಕ್ರ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಿದ್ದಾರೆ. ಅನೇಕ ದ್ವಿಚಕ್ರ ವಾಹನ ಸವಾರರು ದ್ವಿಚಕ್ರ ವಾಹನಗಳ ರೇರ್ ವೀವ್ ಮಿರರ್'ಗಳನ್ನು ತೆಗೆದುಹಾಕುತ್ತಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ರೇರ್ ವೀವ್ ಮಿರರ್'ಗಳಿಲ್ಲದೆ ಟರ್ನ್ ಮಾಡುವಾಗ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು. ಇದನ್ನು ಅರಿಯದ ಜನರು ಶೋಕಿಗಾಗಿ ದ್ವಿಚಕ್ರ ವಾಹನಗಳಿಂದ ರೇರ್ ವೀವ್ ಮಿರರ್'ಗಳನ್ನು ತೆಗೆದು ಹಾಕುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

ದುಷ್ಕರ್ಮಿಗಳು ಬೈಕ್'ಗಳನ್ನು ಪಾರ್ಕ್ ಮಾಡಿರುವ ಜಾಗಗಳಿಂದ ರೇರ್ ವೀವ್ ಮಿರರ್'ಗಳನ್ನು ಕದಿಯುತ್ತಾರೆ ಎಂದು ಕೆಲವು ದ್ವಿಚಕ್ರ ವಾಹನ ಮಾಲೀಕರು ದೂರಿದ್ದಾರೆ. ಪೊಲೀಸರು ಮೊದಲು ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

Most Read Articles

Kannada
English summary
Bengaluru traffic police to impose Rs.500 fine for two wheelers without rear view mirrors. Read in Kannada.
Story first published: Monday, April 12, 2021, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X