Flyover: ಬೆಂಗಳೂರು-ತುಮಕೂರು ಮೇಲ್ಸೇತುವೆ ಇಂದು ರಾತ್ರಿಯಿಂದ ಬಂದ್, ಪರ್ಯಾಯ ಮಾರ್ಗಗಳಿವು

ಅರ್ಧ ಕರ್ನಾಟಕ (Karnataka)ದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಲೋಡ್ ಟೆಸ್ಟ್ ಸಲುವಾಗಿ ಇಂದು ರಾತ್ರಿಯಿಂದ 3 ದಿನಗಳ ಕಾಲ ಬಂದ್ ಆಗಲಿದೆ. ಪರ್ಯಾಯ ಮಾರ್ಗಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು - ತುಮಕೂರು (ಪೀಣ್ಯ) ಮೇಲ್ಸೇತುವೆ ಪಿಲ್ಲರ್​ಗಳಲ್ಲಿ ಕೇಬಲ್ ಅಳವಡಿಕೆ ಕಾರ್ಯ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ. ಲೋಡ್ ಟೆಸ್ಟ್ ನಡೆಸುವ ಸಲುವಾಗಿ ಇವತ್ತು (ಜ.16) ರಾತ್ರಿ 11ರಿಂದ ಶುಕ್ರವಾರ (ಜ.19) ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಿ, ಫ್ಲೈಓವರ್ ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತೀರ್ಮಾನ ಮಾಡಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ (Traffic jam) ಉಂಟಾಗಬಹುದು.

Bengaluru-Tumakuru Flyover

ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಬಂದ್ ಆಗಿರುವುದರಿಂದ ಈ ಪರ್ಯಾಯ ಮಾರ್ಗ (Alternative Routes)ಗಳನ್ನು ಬಳಸಿ, ನಗರಕ್ಕೆ ಬಂದು, ಹೋಗಬಹುದು. ನೆಲಮಂಗಲ (Nelamangala)ದಿಂದ ಬೆಂಗಳೂರು (Bengaluru) ನಗರಕ್ಕೆ ಪ್ರಯಾಣಿಸುತ್ತಿದ್ದರೆ, ರಾಷ್ಟ್ರೀಯ ಹೆದ್ದಾರಿ (NH4) ಅಥವಾ 8ನೇ ಮೈಲಿವರೆಗೆ ಸರ್ವಿಸ್ ರಸ್ತೆಯನ್ನು ಬಳಸಿ ಸಂಚರಿಸಬಹುದು.

ಗೊರಗುಂಟೆಪಾಳ್ಯಕ್ಕೆ ಬರುವ ವಾಹನಗಳು ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಅಥವಾ ಎಸ್‌ಆರ್‌ಎಸ್ ಜಂಕ್ಷನ್ ಮೂಲಕ ತಲುಪಬಹುದು. ಪಾರ್ಲೆ - ಜಿ ಟೋಲ್ (Parle - G Toll)ಗೆ ಬರಲು ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಹೋಗುತ್ತಿದ್ದರೆ ರಾಷ್ಟ್ರೀಯ ಹೆದ್ದಾರಿ (NH4) ಸರ್ವೀಸ್ ರಸ್ತೆಯನ್ನು ಉಪಯೋಗ ಮಾಡಬಹುದು.

Bengaluru-Tumakuru Flyover

ಸುಮಾರು 4 ಕಿಲೋಮೀಟರ್ ಉದ್ದವಿರುವ ಬೆಂಗಳೂರು - ತುಮಕೂರು ಮೇಲ್ಸೇತುವೆ ಪೀಣ್ಯದಲ್ಲಿ ಆರಂಭವಾಗಿ, ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. ಇದು ಕರ್ನಾಟಕದ 14 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. 2021ರ ಡಿಸೆಂಬರ್ ತಿಂಗಳಲ್ಲಿ 8ನೇ ಮೈಲಿ ಸಮೀಪ ಮೇಲ್ಸೇತುವೆಯ ಒಂದೆರಡು ಪ್ಲಿಲರ್‌ ಮಧ್ಯೆ ಬಿರುಕು ಕಾಣಿಸಿಕೊಂಡ ಹಿನ್ನೆಲೆ, ಎಲ್ಲ ವಿಧದ ವಾಹನ ಓಡಾಟವನ್ನು ನಿಷೇಧಿಸಲಾಗಿತ್ತು.

ಕೆಲವು ತಿಂಗಳ ನಂತರ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಓಡಾಡಕ್ಕೆ ಅವಕಾಶ ಕೊಡಲಾಗಿತ್ತು. ಆದರೆ, ಬಸ್ ಸೇರಿದಂತೆ ಭಾರೀ ವಾಹನಗಳಿಗೆ ನಿರ್ಬಂಧವನ್ನು ಮುಂದುವರಿಸಲಾಗಿತ್ತು. ಪರಿಣಾಮ ವಾರಾಂತ್ಯ ಮತ್ತು ಹಬ್ಬಗಳ ಋತುವಿನಲ್ಲಿ ಫ್ಲೈಓವರ್ ಕೆಳಗೆ ವಾಹನ ಸವಾರರು ಗಂಟೆ ಗಂಟಲೇ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಈಗಲೂ ಇದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಸಂದರ್ಭದಲ್ಲಿ 32 ಟನ್‌ ಭಾರ ಹೊತ್ತಿರುವ 8 ಟ್ರಕ್‌ಗಳು, 48 ಗಂಟೆಗಳಿಗೂ ಹೆಚ್ಚು ಕಾಲ ಮೇಲ್ಸೇತುವೆ ಮೇಲೆ ಸಂಚರಿಸಲಿವೆ. ಸಂಪೂರ್ಣ ಸೇತುವೆಯನ್ನು ಪರೀಕ್ಷಿಸಲು ಹೆಚ್ಚಿನ ಸಮಯಾವಕಾಶ ಬೇಕಾಗಿರುವುದರಿಂದ ಲೋಡ್ ಟೆಸ್ಟ್ ಗಾಗಿ ಕೆಲವೊಂದು ಸ್ಥಳಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುತಿಸಿದೆ.

ಈ ಫ್ಲೈಓವರ್ ಮೇಲೆ ಲೋಡ್ ಪರೀಕ್ಷೆ ಯಶಸ್ವಿಯಾದ ಬಳಿಕ, ಬಸ್ ಸೇರಿದಂತೆ ದೊಡ್ಡ ವಾಹನಗಳ ಸಂಚಾರಕ್ಕೆ ಕೆಲವೇ ದಿನಗಳಲ್ಲಿ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಮುಖ್ಯವಾಗಿ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ 14 ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಬೆಂಗಳೂರನ್ನು ಸುಲಭವಾಗಿ ಪ್ರವೇಶಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 16, 2024, 12:39 [IST]
English summary
Bengaluru tumakuru flyover shut today night to 3 days here the alternative routes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+