ದೊಡ್ಡವರ ದೊಡ್ಡಗುಣ: ವಯೋವೃದ್ಧ ಬಡ ದಂಪತಿಯನ್ನು ನೋಡಿ 8 ಕೋಟಿ ರೂ. ಕಾರಿನ ಮಾಲೀಕ ಮಾಡಿದ್ದೇನು?

ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಬರುವವರು ಅಹಂಕಾರ ಹೊಂದಿರುತ್ತಾರೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಅವರು ಸಾಮಾನ್ಯ ಜನರನ್ನು ಗೌರವಿಸುವುದಿಲ್ಲ ಎಂದು ಭಾವಿಸುತ್ತಾರೆ. ನೀವು ಕೂಡ ಹಾಗೆ ಅಂದುಕೊಂಡರೆ ತಪ್ಪು. ಕೆಲವರು ಸಾಮಾನ್ಯ ಜನರಿಗೂ ಗೌರವವನ್ನು ನೀಡುತ್ತಾರೆ. ಇದಕ್ಕೆ ಅತ್ಯುತ್ತಮ ಉತ್ತಮ ಉದಾಹರಣೆಯ ಮಾಹಿತಿ ಇಲ್ಲಿದೆ.

ತೆಲಂಗಾಣ ರಾಜ್ಯದಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹಲವರ ಮನ ಗೆದ್ದಿದೆ. ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲಿ ವಯೋವೃದ್ಧರಾದ ಪುರುಷ ಮತ್ತು ಮಹಿಳೆ ರಸ್ತೆ ದಾಟಲು ಯತ್ನಿಸಿದ್ದರು. ಅವರು ಪತಿ-ಪತ್ನಿ ಎಂದು ಹೇಳಲಾಗುತ್ತಿದೆ. ಪುರುಷ ಮತ್ತು ಮಹಿಳೆ ರಸ್ತೆ ದಾಟಲು ಯತ್ನಿಸಿದ್ದರು. ಅವರು ಪತಿ-ಪತ್ನಿ ಎಂದು ಹೇಳಲಾಗಿದೆ. ಆಗ ಆ ಮಾರ್ಗವಾಗಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ (Bentley Continental GT) ಕಾರು ಬರುತ್ತೆ.

Bentley

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಬಹುಕೋಟಿ ವೆಚ್ಚದ ಕಾರು. ಹಾಗಾದ್ರೆ ಈ ಕಾರನ್ನು ನೋಡಿ ದಂಪತಿ ಬೆಚ್ಚಿ ಬಿದ್ದಿರಬೇಕು. ಅಷ್ಟರಲ್ಲಿ ಕಾರನ್ನು ನೋಡಿ ರಸ್ತೆ ದಾಟದೇ ವಾಪಸ್ ತೆಗೆದುಕೊಂಡರು. ಆಗ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಚಾಲಕ ಮಾಡಿದ್ದೇನು ಎಂಬುದು ಹೈಲೈಟ್ ಆಗಿದೆ. ದಂಪತಿ ನೋಡಿಯು ಈ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ನಿಲ್ಲಿಸದೇ ಮುಂದೆ ಬರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ.

ಆದರೆ ನಡೆದದ್ದೇ ಬೇರೆ. ದಂಪತಿಯನ್ನು ನೋಡಿದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಚಾಲಕ ಕಾರನ್ನು ನಿಲ್ಲಿಸಿದರು. ರಸ್ತೆ ದಾಟಲು ದಂಪತಿಗಳಿಗೆ ಸೂಚಿಸಿದರು. ಇದಾದ ಮೇಲೆ ದಂಪತಿ ಕೂಡ ರಸ್ತೆ ದಾಟಿದ್ದರು. ಅದರ ನಂತರ, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಪ್ರಯಾಣ ಮುಂದೆ ವರೆಸಿದೆ. ಬಹುಕೋಟಿ ಬೆಲೆ ಬಾಳುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ವಯೋವೃದ್ಧ ದಂಪತಿಗೆ ರಸ್ತೆ ದಾಟಲು ನಿಲ್ಲಿಸಿರುವುದರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ಶ್ಲಾಗಿಸಿದ್ದಾರೆ.

Bentley

ವೀಡಿಯೊದಲ್ಲಿರುವ ಕಾರು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಆಗಿದೆ. ಬ್ರಿಟನ್ನಿನ ಐಷಾರಾಮಿ ಕಾರು ತಯಾರಕ ಬೆಂಟ್ಲೆಯ ಈ ಎರಡು ಡೋರುಗಳ ಐಷಾರಾಮಿ ಕೂಪ್ ಆಗಿದೆ. ಈ ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಆರಂಭಿಕ ಬೆಲೆಯು ರೂ. 5.23 ಕೋಟಿ ರೂ ಆಗಿದೆ. ಈ ದುಬಾರಿ ಕಾರಿನ ವಿ12 ಎಂಜಿನ್ ಮಾದರಿಯ ಬೆಲೆಯು ರೂ.8.45 ಕೋಟಿ ಆಗಿದೆ.

ಈ ನಿರ್ದಿಷ್ಟ ಕಾರು ಮೊರೊಕನ್ ಬಣ್ಣವನ್ನು ಹೊಂದಿದೆ. ಈ ಐಷಾರಾಮಿ ಕಾರಿನ ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಈ ನಿರ್ದಿಷ್ಟ ಕಾರು 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 542 bhp ಪವರ್ ಮತ್ತು 770 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 8-ಸ್ಪೀಡ್ ZF ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತಿದೆ.

Bentley

ಈ ಕಾರಿನಲ್ಲಿ ವಿಶ್ವದರ್ಜೆಯ ಲೆದರ್ ವ್ಯಾರ್ಪ್ ಆಧರಿತ ಇಂಟಿರಿಯರ್ ಕುಷನ್, ಅಡ್ವಾನ್ಸ್ ಲೈಟಿಂಗ್ ಟೆಕ್ನಾಲಜಿ, ಸಾಂಪ್ರಾದಾಯಿಕ ಬೆಂಟ್ಲಿ ಗ್ರಿಲ್, 21 ಇಂಚಿನ ಫೈವ್ ಸ್ಪೋಕ್ ಚಕ್ರಗಳನ್ನು ಜೋಡಿಸಲಾಗಿದೆ. ಜಗತ್ತಿನ ಕೆಲವೇ ಕೆಲವು ಆಟೋ ಉದ್ಯಮ ಸಂಸ್ಥೆಗಳು ಮಾತ್ರವೇ ಇಂಟಿರಿಯರ್ ಡಿಸೈನ್ ಅಭಿವೃದ್ದಿ ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿದೆ. ಕಾಂಟಿನೆಂಟಲ್ ಜಿಟಿನಲ್ಲಿ ಅತ್ಯುತ್ತಮ ದರ್ಜೆಯ ವುಡ್ ಕ್ರೋಮ್ ನೀಡಿರುವುದು ಕಾರಿನ ಮೌಲ್ಯ ಹೆಚ್ಚಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 20, 2024, 19:21 [IST]
English summary
Bentley continental gt owner stops car to let couple cross the road details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+