ನೀವೊಬ್ಬ ಉತ್ತಮ ಡ್ರೈವರ್ ಆಗಿದ್ದರೆ ಈ ಕೆಳಗಿನ ಅಂಶಗಳನ್ನು ಪಾಲಿಸದೇ ಇರುವುದಿಲ್ಲ
ಸದಾ ಸುತ್ತಮುತ್ತ ಸ್ಥಳಗಳ ಕುರಿತಾಗಿ ಎಚ್ಚರದಿಂದ ಇರುವುದು ಡ್ರೈವ್ ಮಾಡುವವರಿಗೆ ಅಥವಾ ವಾಹನ ಚಾಲಕರಿಗೆ ಇರಬೇಕಾದ ಅತೀ ಅಗತ್ಯವಾದ ಗುಣ. ಎಲ್ಲರು ವಾಹನ ಚಲಾಯಿಸುವಾಗ ಪಾಲಿಸಬೇಕಾದ ಅಗತ್ಯವಾದ ವಿಷಯಗಳು ಏನು ಎಂಬುದನ್ನು ಇಂದಿನ ಈ ಲೇಖನದಲ್ಲಿ ಒಂದೊಂದಾಗಿ ನಾವು ನೋಡೋಣ ಬನ್ನಿ.
ಬ್ಲೈಂಡ್ ಸ್ಪಾಟ್‌ಗಳ ಪರಿಶೀಲನೆ: ನೀವೊಬ್ಬ ಉತ್ತಮ ಡ್ರೈವರ್ ಆಘಬೇಕಾದರೆ ಚಲಾವಣೆಯ ಸಮಯದಲ್ಲಿ ತಮ್ಮ ಕಾರಿನ ಬ್ಲೈಂಡ್ ಸ್ಪಾಟ್‌ಗಳು ಯಾವುದೆಂದು ತಿಳಿದುಕೊಂಡು ಆ ಸ್ಥಳದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ವಾಹನ ಚಲಾಯಿಸುವಾಗ ಬ್ಲೈಂಡ್ ಸ್ಪಾಟ್ಗಳನ್ನು ಆಗಾಗ ಪರಿಶೀಲನೆ ಮಾಡುವುದರಿಂದ ಕೆಲವೊಂದು ಸಂಧರ್ಭದಲ್ಲಿ ನಡೆಯಬಹುದಾದ ಅಪಘಾತವನ್ನು ಕಡಿಮೆ ಮಾಡಬಹುದು.

ಇತಿಮಿತಿಯಲ್ಲಿ ಡ್ರೈವ್ ಮಾಡುವುದು: ಹೌದು, ನೀವು ವಾಹನ ಚಲಾಯಿಸುವಾಗ ನಿಮಗೆ ನೀವೇ ಒಂದು ಇತಿ ಮಿತಿಯನ್ನು ಸೃಷ್ಟಿಸಿಕೊಂಡು ಅದಕ್ಕೆ ಅನುಗುಣವಾಗಿ ಡ್ರೈವ್ ಮಾಡಬೇಕು. ನೀವು ಡ್ರೈವ್ ಮಾಡುವಾಗ ಈ ವಿಧಾನ ಅಳವಡಿಸುವುದರಿಂದ ಹಿಂದೆ ಬರುವಂತಹ ಇತರ ವಾಹನಗಳು ಯಾವುದೇ ಗೊಂದಲವಿಲ್ಲದೇ ಸುಲಭವಾಗಿ ರಸ್ತೆಯಲ್ಲಿ ಚಲಿಸಬಹುದು.
ಇತರ ವಾಹನಗಳಿಗೂ ಅವಕಾಶ ಮಾಡಿಕೊಡಿ: ನೀವು ವಾಹನ ಚಲಾಯಿಸುವಾಗ ರಸ್ತೆ ನಮಗೆ ಮಾತ್ರ ಎಂಬ ಮನೋಭಾವವನ್ನು ಇಟ್ಟುಕೊಂಡು ಡ್ರೈವ್ ಮಾಡುವುದರಿಂದ ಇತರ ವಾಹನಗಳು ಚಲಿಸಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಎದುರಾಗಬಹುದು. ನಿಮ್ಮೊಂದಿಗೆ ಇತರ ವಾನಹನಗಳಿಗೂ ಅವಕಾಶ ಮಾಡಿಕೊಡುವುದರಿಂದ ಅವಸರದಲ್ಲಿ ಅಥವಾ ಏನಾದರೂ ಎಮೆರ್ಜೆನ್ಸಿ ಇರುವವರು ಸುಲಭವಾಗಿ ಹೋಗಬಹುದಾಗಿದೆ.

ಇಂಡಿಕೇಟರ್‌ಗಳನ್ನು ಬಳಸಿ: ನೀವೊಂದು ಒಳ್ಳೆಯ ಡ್ರೈವರ್ ಅಥವಾ ಸುರಕ್ಷಿತವಾಗಿ ವಾಹನವನ್ನು ಚಲಾಯಿಸುವವರಾಗಿದ್ದರೆ ನೀವು ಇಂಡಿಕೇಟರ್‌ಗಳನ್ನು ಅಗತ್ಯ ಬಿದ್ದಾಗ ತಪ್ಪದೇ ಬಳಸುತ್ತೀರಿ. ನಿಮ್ಮ ಈ ಒಂದು ಸಣ್ಣ ಹೆಜ್ಜೆಯಿಂದ ಹಿಂಬದಿ ಬರುವ ವಾಹನ ಚಾಲಕರಿಗೆ ನೀವು ಯಾವ ಕಡೆ ಮತ್ತು ಎತ್ತ ಸಾಗುತ್ತಿದ್ದೀರಿ ಎಂದು ತಿಳಿದು ಅದಕ್ಕೆ ಅನುಸಾರವಾಗಿ ಡ್ರೈವ್ ಮಾಡಲು ಈ ಪುಟ್ಟ ಇಂಡಿಕೇಟರ್‌ಗಳು ಸಾಕಷ್ಟು ಸಹಾಯ ಮಾಡುತ್ತದೆ.
ನಡುವೆ ಅಂತರವಿರಲಿ: ಈ ಹೆಸರನ್ನು ಕೇಳಿದರೆ ಕೆಲವು ವರ್ಷಗಳ ಹಿಂದೆ ಹೊರಬಂದ ಕನ್ನಡ ಚಲನಚಿತ್ರ ನೆನಪಾಗುವುದಂತೂ ಖಂಡಿತ. ಇಲ್ಲಿ ಮಾತನಾಡುತ್ತಿರುವುದು, ನೀವು ವಾಹನ ಚಲಾಯಿಸುವಾಗ ನಿಮ್ಮ ಮುಂದೆ ಚಲಿಸುತ್ತಿರುವ ವಾಹನದ ನಡುವೆ ಕೊಂಚ ಅಂತರವನ್ನು ಯಾವಾಗಲೂ ಕಾಪಾಡಿಕೊಳ್ಳಿ. ಇದರಿಂದ ಎಮೆರ್ಜೆನ್ಸಿ ಸಮಯಗಳಲ್ಲಿ ನಡೆಯಬುದಾದ ಅಪಘಾತವನ್ನು ತಪ್ಪಿಸಬಹುದಾಗಿದೆ.
ಕಾರನ್ನು ಸರಿಯಾಗಿ ನಿಭಾಯಿಸಿ: ಅಂದರೆ ಕಾಲ ಕಾಲಕ್ಕೆ ನೀವು ನಿಮ್ಮ ಕಾರನ್ನು ಸರಿಯಾದ ರೀತಿಯಲ್ಲಿ ಸರ್ವೀಸ್ ಮತ್ತು ಇನ್ನಿತರ ರೀತಿಯಲ್ಲಿ ಮೈಂಟೈನ್ ಮಾಡಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ. ಹೀಗೆನ್ನಲು ಪ್ರಮುಖ ಕಾರಣವೇನು ಎಂದರೆ ಕಳಪೆ ಗುಣಮಟ್ಟದ ಕಾರುಗಳನ್ನು ಚಲಾಯಿಸಿಕೊಂಡು ಹೋಗುವುದರಿಂದ ಅಪಘಾತಗಳಾಗುವ ಸಾಧ್ಯತೆಗಳು ಸಹ ಹೆಚ್ಚು.
ಈ ಮೇಲೆ ತಿಳಿಸಿರುವ ಕ್ರಮಗಳನ್ನು ನೀವು ಡ್ರೈವ್ ಮಾಡುವಾಗ ಕೈಗೊಂಡರೆ ನೀವೊಬ್ಬ ಉತ್ತಮ ಡ್ರೈವರ್ ಆಗುವಲ್ಲಿ ಎರಡು ಮಾತಿಲ್ಲ. ಇದು ಮಾತ್ರವಲ್ಲದೇ ರಸ್ತೆಯಲ್ಲಿ ಚಲಿಸುವಾಗ ಸುರಕ್ಷಿತವಾಗಿರಲು ಇನ್ನೂ ಹಲವಾರು ನಿಯಮಗಳನ್ನು ಪಾಲಿಸಬೇಕಾಗಿದೆ. ಅವೆಲ್ಲವನ್ನೂ ಪಾಲಿಸುತ್ತಾ ನಡೆದರೆ ನೀವು ಮತ್ತು ನಿಮ್ಮ ಜೊತೆಗಾರರು ಸುರಕ್ಷಿತವಾಗಿ ಗುರಿ ಸೇರುವುದಂತೂ ಖಂಡಿತ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications