ಶೀಘ್ರದಲ್ಲೇ ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಯಾದ ಬೆಸ್ಟ್ ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಬಸ್ಸುಗಳನ್ನು ನಿರ್ವಹಿಸುತ್ತದೆ. ಬೆಸ್ಟ್ ಶೀಘ್ರದಲ್ಲೇ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲಿದೆ ಎಂದು ವರದಿಯಾಗಿದೆ.

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ ಸದ್ಯಕ್ಕೆ 75 ಡಬಲ್ ಡೆಕ್ಕರ್ ಬಸ್ಸುಗಳನ್ನು ಹೊಂದಿದೆ. ಈ 75 ಹಳೆಯ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು 2021ರ ಮಾರ್ಚ್ ನಲ್ಲಿ ಸ್ಥಗಿತಗೊಳಿಸಲಾಗುವುದು. ಈ ಕಾರಣಕ್ಕೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಹೊಸ ಡಬಲ್ ಡೆಕ್ಕರ್ ಬಸ್ಸುಗಳು ಹಿಂದಿನ ಮಾದರಿಗಳಿಗಿಂತ ಭಿನ್ನವಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಡೋರುಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ.

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ ಅಧಿಕಾರಿಗಳ ಪ್ರಕಾರ, ಹೊಸ ಡಬಲ್ ಡೆಕ್ಕರ್ ಬಸ್‌ಗಳು ಸಿಸಿಟಿವಿ ಕ್ಯಾಮೆರಾ, ಕಂಡಕ್ಟರ್‌ಗಳಿಗಾಗಿ ಕಮ್ಯೂನಿಕೇಷನ್ ಪ್ಯಾಕೇಜ್ ಸೇರಿದಂತೆ ವಿವಿಧ ಫೀಚರ್ ಗಳನ್ನು ಹೊಂದಿರಲಿವೆ. ಈ ಡಬಲ್ ಡೆಕ್ಕರ್ ಬಸ್‌ಗಳು ಎಸಿ ಸೌಲಭ್ಯವನ್ನು ಹೊಂದಿರುವುದಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಹೊಸ ಬಸ್ಸುಗಳಿಗಾಗಿ ನವೆಂಬರ್ 11ರಂದು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಮಾತನಾಡಿರುವ ಬೆಸ್ಟ್ ಅಧಿಕಾರಿಗಳು ಹೊಸ ಡಬಲ್ ಡೆಕ್ಕರ್ ಬಸ್ಸುಗಳು ಇನ್ನೂ ತಲುಪಿಲ್ಲ. ಹೊಸ ಬಸ್ಸುಗಳು ಬರುವವರೆಗೊ ಹಳೆಯ ಬಸ್ಸುಗಳನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಇದೇ ವೇಳೆ ಡಬಲ್ ಡೆಕ್ಕರ್ ಬಸ್ಸುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಲು ಬೆಸ್ಟ್ ಮ್ಯಾನೇಜ್ ಮೆಂಟ್ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಸುಮಾರು 15 ವರ್ಷಗಳ ನಂತರ ಹೊಸ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದು ಹೇಳಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ 120 ಡಬಲ್ ಡೆಕ್ಕರ್ ಬಸ್ಸುಗಳನ್ನು ಹೊಂದಲು ಬಯಸಿದೆ. ಈ ಪೈಕಿ 100 ಡಬಲ್ ಡೆಕ್ಕರ್ ಬಸ್‌ಗಳನ್ನು ಶೀಘ್ರದಲ್ಲೇ ಖರೀದಿಸಲಾಗುವುದು. ಉಳಿದ 20 ಡಬಲ್ ಡೆಕ್ಕರ್ ಬಸ್ಸುಗಳು ಖರೀದಿಗೆ ಲಭ್ಯವಿದೆ.

ರಸ್ತೆಗಿಳಿಯಲಿವೆ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ ಒಟ್ಟು 896 ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಲು ಮುಂದಾಗಿದೆ. ಇವುಗಳಲ್ಲಿ 75 ಡಬಲ್ ಡೆಕ್ಕರ್ ಬಸ್ಸುಗಳು ಸಹ ಸೇರಿವೆ. ಈ ಬಸ್‌ಗಳು 15 ವರ್ಷಕ್ಕೂ ಹಳೆಯದಾಗಿವೆ. ಅವಧಿ ಮೀರಿದ ಬಸ್ಸುಗಳನ್ನು ಸ್ಕ್ರಾಪ್ ಮಾಡಲು ನಿರ್ಧರಿಸಲಾಗಿದೆ.

120 ಡಬಲ್ ಡೆಕ್ಕರ್ ಬಸ್ಸುಗಳನ್ನು ಮೊದಲು ಓಡಿಸಿದ ಏಕೈಕ ಸಂಸ್ಥೆ ಬೆಸ್ಟ್. ಕೆಲವು ವರ್ಷಗಳಿಂದೀಚಿಗೆ ಇವುಗಳ ಸಂಖ್ಯೆ 75ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬೆಸ್ಟ್ ತನ್ನ ಡಬಲ್ ಡೆಕ್ಕರ್ ಬಸ್ಸುಗಳ ಸಂಖ್ಯೆಯನ್ನು ಮತ್ತೆ 120ಕ್ಕೆ ಏರಿಸಲು ಮುಂದಾಗಿದೆ.

Most Read Articles

Kannada
English summary
Best to have 100 new double decker buses soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X