ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೇರಿದ ಕಾರು

ಅತ್ಯಾಧುನಿಕ ತಂತ್ರಜ್ಞಾನವನ್ನು ಹೇರಳವಾಗಿ ಬಳಕೆ ಮಾಡುವ ವಲಯಗಳಲ್ಲಿ ಆಟೋ ಮೊಬೈಲ್ ಉದ್ಯಮ ಕೂಡ ಒಂದು. ಎಲೆಕ್ಟ್ರಿಕ್ ಎಂಜಿನ್‌ನಿಂದ ಹಿಡಿದು ಪವರ್ ಸ್ಟೀರಿಂಗ್ ಮತ್ತು ಬ್ರೇಕಿಂಗ್ ಸಿಸ್ಟಮ್‌ಗಳು ಸೇರಿದಂತೆ ಇದೀಗ ಹೆಚ್ಚಾಗಿ ಜನಪ್ರಿಯವಾಗುತ್ತಿರುವ ಕಂಪ್ಯೂಟರೀಕೃತ ಡ್ರೈವಿಂಗ್ ಅಸಿಸ್ಟೆಂಟ್ ಪ್ರೋಗ್ರಾಂಗಳು ಆಧುನಿಕ ಕಾರುಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಇತ್ತೀಚಿನ ವರ್ಷಗಳಲ್ಲಿ ದೆಹಲಿ, ಬೆಂಗಳೂರು, ಚೆನ್ನೈನಂತಹ ಮೆಗಾಸಿಟಿಗಳಲ್ಲಿ ಬಂಪರ್-ಟು-ಬಂಪರ್ ಟ್ರಾಫಿಕ್‌ನಲ್ಲಿ ಕಾರುಗಳನ್ನು ಓಡಿಸುವುದು ದೊಡ್ಡ ಸಾಹಸ ಮಾಡಿದಷ್ಟೇ ಶ್ರಮವೆನಿಸುತ್ತದೆ. ಹಾಗಾಗಿ ಟ್ರಾಫಿಕ್‌ನಲ್ಲಿ ಡ್ರೈವಿಂಗ್ ಅನ್ನು ಸುಲಭಗೊಳಿಸಲು ಕಾರು ಕಂಪನಿಗಳು ಹಲವು ಫೀಚರ್ಸ್ ನೀಡುತ್ತಿವೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಇದರಲ್ಲಿ ಪ್ರಮುಖವಾಗಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ಕಾರುಗಳು ಸಾಮಾನ್ಯವಾಗಿ ಡ್ರೈವಿಂಗ್ ಸೌಕರ್ಯವನ್ನು ಒದಗಿಸುತ್ತವೆ, ಡ್ರೈವರ್ ಆಗಾಗ ಕ್ಲಚ್ ಪೆಡಲ್ ಮತ್ತು ಶಿಫ್ಟ್ ಗೇರ್ ಲಿವರ್ ಅನ್ನು ಒತ್ತುವ ಅಗತ್ಯವಿಲ್ಲ. ಡ್ರೈವರ್ ಪ್ರಮೆಯವಿಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಕಾರು ತಾನಾಗಿಯೇ ಕಾರ್ಯನಿರ್ವಹಿಸುತ್ತದೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಆದರೆ ಸ್ವಯಂಚಾಲಿತ ಕಾರುಗಳಿಗೆ ನಿರ್ದಿಷ್ಟ ರೀತಿಯ ಚತುರತೆ ಅಗತ್ಯವಿರುತ್ತದೆ, ವಿಶೇಷವಾಗಿ ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರು ಈ ಬಗ್ಗೆ ತಿಳಿದಿರಲೇಬೇಕು. ಇಲ್ಲದಿದ್ದರೇ ಕಾರುಗಳಿಂದಾಗುವ ಅನಾಹುತಗಳನ್ನು ಎದರಿಸಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇತ್ತೀಚೆಗೆ ಮೆಕ್ಯಾನಿಕ್ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಘಟನೆಯಲ್ಲಿ ಕಾರನ್ನು ಸ್ವಯಂಚಾಲಿತ ರೂಪಾಂತರವೆಂದು ಹೇಳಲಾಗುತ್ತಿದೆ. ಮೆಕ್ಯಾನಿಕ್ ಡ್ರೈವರ್ ಕ್ಯಾಬಿನ್ ಒಳಗಿನಿಂದ ಕಾರಿನ ಬಾನೆಟ್ ಅನ್ನು ತೆರೆದು ಅದನ್ನು ಪರಿಶೀಲಿಸಲು ಹಿಂತಿರುಗುತ್ತಾನೆ. ಕೆಲವು ಸೆಕೆಂಡುಗಳ ನಂತರ ಎಂಜಿನ್ ವಿಭಾಗದಲ್ಲಿ ಕೆಲವು ಭಾಗಗಳನ್ನು ಸರಿಪಡಿಸಲು ಮುಂದಾಗಿದ್ದಾನೆ. ಆಗ ಕಾರು ಇದ್ದಕ್ಕಿದ್ದಂತೆ ಮೆಕ್ಯಾನಿಕ್ ಮೇಲೆರಗಿದೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ವೇಗವನ್ನು ಹೆಚ್ಚಿಸಿಕೊಂಡು ತಾನಾಗಿಯಿಯೇ ಮೆಕ್ಯಾನಿಕ್ ಅನ್ನು ಡಿಕ್ಕಿ ಹೊಡೆದಿದೆ. ಮೆಕ್ಯಾನಿಕ್ ಹಿಂದೆ ಮುಚ್ಚಲಾಗಿದ್ದ ಶೆಟರ್ ಇದ್ದು, ಶೆಟರ್ ಹಾಗೂ ಕಾರಿನ ನಡುವೆ ಸಿಲುಕಿ ಮೆಕ್ಯಾನಿಕ್ ಕೆಲವು ನಿಮಿಷಗಳ ಕಾಲ ನರಳಾಡಿದ್ದಾನೆ. ಬಳಿಕ ಅಕ್ಕ-ಪ್ಕದಲ್ಲಿದ್ದವರು ಸಹಾಯಕ್ಕೆ ಧಾವಿಸಿದ್ದಾರೆ. ಈ ಅಪಘಾತದಿಂದಾಗಿ ಮೆಕ್ಯಾನಿಕ್ ತೀವ್ರವಾಗಿ ಗಾಯಗೊಂಡಿದ್ದಾನೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಈ ಕುರಿತ ವಿಡಿಯೋವನ್ನು @ragiing_bull ಹೆಸರಿನ ಖಾತೆಯಿಂದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. "ಸ್ವಯಂಚಾಲಿತ ವಾಹನ ಕೆಟ್ಟು ಹೋದರೆ, ವಾಹನದ ಮುಂದೆ ಎಂದಿಗೂ ನಿಲ್ಲಬೇಡಿ. ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಎಚ್ಚರಿಕೆ ನೀಡಿ. ಈ ಸಂದೇಶವನ್ನು ಉದಾಹರಣೆಯಾಗಿ ಹಂಚಿಕೊಳ್ಳಿ" ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ವಿಡಿಯೋ 1,87,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸುಮಾರು 4,300 ಲೈಕ್‌ಗಳನ್ನು ಹೊಂದಿದೆ. ಈ ವಿಡಿಯೋ ವೀಕ್ಷಕರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ. ವಿಡಿಯೋದಲ್ಲಿ ಟ್ವಿಟರ್ ಬಳಕೆದಾರರು ಮಾಡಿರುವ ಕಾಮೆಂಟ್‌ಗಳಲ್ಲಿ ಅಪಘಾತದ ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗಿದೆ, ಜೊತೆಗೆ ವ್ಯಕ್ತಿಯು ತೆಗೆದುಕೊಳ್ಳಬೇಕಾದ ಸುರಕ್ಷತೆಗಳನ್ನು ವಿವರಿಸಿದ್ದಾರೆ. ಕೆಲವರು ಬಳಕೆದಾರರು ಯಾವಾಗಲೂ ಹ್ಯಾಂಡ್‌ಬ್ರೇಕ್ ಅನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಒಬ್ಬ ಬಳಕೆದಾರ ಮಾತ್ರ ವಿವರಣಾತ್ಮಕವಾಗಿ ಈ ಬಗ್ಗೆ ಕಮೆಂಟ್ ಮಾಡಿದ್ದಾನೆ. ವಾಹನವು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದ್ದರೂ, ಸುರಕ್ಷತಾ ವೈಶಿಷ್ಟ್ಯಗಳ ಕಾರಣದಿಂದಾಗಿ ಹೆಚ್ಚಿನ ಜನರು ಸ್ವಯಂಚಾಲಿತ ವಾಹನಗಳಿಗೆ ಆದ್ಯತೆ ನೀಡುತ್ತಾರೆ. "ಈ ಕಾರು ಆಟೋಮ್ಯಾಟಿಕ್ ಅಲ್ಲ, ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೂಡ ಆಗಿರಬಹುದು.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಅನೇಕ ಜನರು ತಮ್ಮ ಮ್ಯಾನುವಲ್ ಕಾರುಗಳನ್ನು 1 ನೇ ಗೇರ್‌ನಲ್ಲಿ ನಿಲ್ಲಿಸುವಾಗ ಹ್ಯಾಂಡ್‌ಬ್ರೇಕ್ ಅನ್ನು ಹಾಕುವುದಿಲ್ಲ. ಈ ವೇಳೆ ಕಾರನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವಾಗ ಕಾರು ಗೇರ್‌ನಲ್ಲಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಎಲ್ಲಾ ಆಧುನಿಕ ಆಟೋಮ್ಯಾಟಿಕ್ ಕಾರುಗಳು ಇಂತಹ ಘಟನೆಗಳನ್ನು ತಡೆಯಲು ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಆತ ವಿವರಿಸಿದ್ದಾನೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಈ ದೃಶ್ಯಾವಳಿಯು ಒಬ್ಬ ವೀಕ್ಷಕನನ್ನು ಗೊಂದಲಗೊಳಿಸಿದ್ದು ಆತ ಹೇಳುವಂತೆ, "ನಾನು ಇದು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಡುತ್ತಿದ್ದೇನೆ? ಲಿವರ್ ನ್ಯೂಟ್ರಲ್‌ನಲ್ಲಿ ಇಲ್ಲದಿದ್ದರೆ ಸ್ವಯಂಚಾಲಿತ ಕಾರುಗಳು ಪ್ರಾರಂಭವಾಗುವುದಿಲ್ಲ. ನೀವು ಅದನ್ನು ಡ್ರೈವ್ ಅಥವಾ ರಿವರ್ಸ್ ಮೋಡ್‌ನಲ್ಲಿ ಇರಿಸಿದ್ದರೂ ಸಹ ಆಗುವುದಿಲ್ಲ. ಹಾಗೆಯೇ ತಟಸ್ಥವಾಗಿದ್ದರೂ ಸಹ ನಾನು ಬ್ರೇಕ್ ಅನ್ನು ಹಿಡಿದಿಟ್ಟುಕೊಳ್ಳದ ಹೊರತು ಅದು ಪ್ರಾರಂಭವಾಗುವುದಿಲ್ಲ ಎಂದಿದ್ದಾನೆ.

ಆಟೋಮ್ಯಾಟಿಕ್ ಕಾರಿನ ಬಗ್ಗೆ ಇರಲಿ ಎಚ್ಚರ: ತಾನಾಗಿಯೇ ಚಲಿಸಿ ಮೆಕ್ಯಾನಿಕ್ ಮೇಲೆರಿದ ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಾರ್ ಮೆಕ್ಯಾನಿಕ್‌ಗಳಿಗೇ ಇಂತಹ ಪರಿಸ್ಥಿತಿ ಇದ್ದರೇ ಸಾಮಾನ್ಯ ಜನರು ಇನ್ನೆಷ್ಟು ಎಚ್ಚರಿಕೆಯಿಂದ ಇರಬೇಕು ನೀವೆ ಊಹಿಸಿ. ಹಾಗಾಗಿ ಆಟೋಮ್ಯಾಟಿಕ್ ಕಾರುಗಳನ್ನು ಬಳಸುತ್ತಿರುವವರು ಕಾರಿನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಹೊಸ ಫೀಚರ್ಸ್ ಆಗಿರುವುದರಿಂದ ಕಂಪನಿ ಕೂಡ ಮಾಹಿತಿ ಬುಕ್‌ನಲ್ಲಿ ಎಲ್ಲವನ್ನು ವಿವರವಾಗಿ ತಿಳಿಸಿರುತ್ತದೆ. ಗ್ರಾಹಕರು ಇವನ್ನು ನಿರ್ಲಕ್ಷಿಸದೇ ತಿಳಿದುಕೊಳ್ಳಬೇಕು.

Most Read Articles

Kannada
English summary
Beware of an automatic car mechanic injured by car that moves itself
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X