ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ದೇಶದೆಲ್ಲೆಡೆ ಕರೋನಾ ವೈರಸ್ ಎರಡನೇ ಅಲೆ ತನ್ನ ರುದ್ರ ರೂಪವನ್ನು ತೋರುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿ ದಿನ 3.50 ಲಕ್ಷ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಬಾರಿ ಕರೋನಾದಲ್ಲಿ ಹೊಸ ರೋಗಲಕ್ಷಣ ಕಾಣಿಸಿಕೊಂಡಿದೆ.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಈ ಬಾರಿ ಜನರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಇದರಿಂದಾಗಿ ದೇಶಾದ್ಯಂತ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಕರೋನಾ ವೈರಸ್ ಸೋಂಕಿತರು ಸಕಾಲಕ್ಕೆ ಆಕ್ಸಿಜನ್ ಸಿಲಿಂಡರ್ ದೊರೆಯದೇ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಈ ವೇಳೆ ಕೆಲವು ಮಹನೀಯರು ಕರೋನಾ ಸೋಂಕಿತರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಈಗ ಭೋಪಾಲ್‌ನ ಆಟೋ ಚಾಲಕ ಜಾವೇದ್ ಖಾನ್ ಕೂಡ ಇದೇ ಹಾದಿಯಲ್ಲಿ ನಡೆದಿದ್ದಾರೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

34 ವರ್ಷದ ಜಾವೇದ್ ಖಾನ್ ತಮ್ಮ ಆಟೋವನ್ನು ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಿಸಿದ್ದು, ಆಟೋದಲ್ಲಿ ಆಕ್ಸಿಜನ್ ಯುನಿಟ್ ಸಹ ಅಳವಡಿಸಿದ್ದಾರೆ. ಜಾವೇದ್ ತಮ್ಮ ಹಾಗೂ ತಮ್ಮ ಹೆಂಡತಿಯ ಉಳಿತಾಯದ ಹಣದಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಈ ಮೂಲಕ ಕರೋನಾ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಪ್ರಮುಖ ಮಾಧ್ಯಮ ವರದಿಯ ಪ್ರಕಾರ, ಜಾವೇದ್ ತಮ್ಮ ಆಟೋ ಆಂಬ್ಯುಲೆನ್ಸ್ ಮೂಲಕ ಕಳೆದ ಮೂರು ದಿನಗಳಲ್ಲಿ ಭೋಪಾಲ್ ನಗರದಲ್ಲಿ 10 ಜನರಿಗೆ ಸಹಾಯ ಮಾಡಿದ್ದಾರೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಭೋಪಾಲ್ ನಗರದಲ್ಲಿ ಕರೋನಾ ವೈರಸ್ ಪ್ರಕರಣಗಳ ಹೆಚ್ಚಾದಾಗ ಜಾವೇದ್ ಜನರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂದು ಕೊಂಡರು. ತಮ್ಮ ಕುಟುಂಬದವರ ಸಲಹೆಯ ಮೇರೆಗೆ ತಮ್ಮ ಆಟೋರಿಕ್ಷಾವನ್ನು ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಿಸಿದರು.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಅವರ ಸಣ್ಣ ಮೊಬೈಲ್ ಆಂಬ್ಯುಲೆನ್ಸ್‌ನಲ್ಲಿ ಅಗತ್ಯ ವಸ್ತುಗಳ ಜೊತೆಗೆ ಆಕ್ಸಿಜನ್, ಸ್ಯಾನಿಟೈಜರ್‌ ಹಾಗೂ ಔಷಧಿಗಳನ್ನು ಇಡಲಾಗಿದೆ. ಈ ಬಗ್ಗೆ ಮಾತನಾಡಿರುವ ಜಾವೇದ್, ನಾನು ಕಳೆದ 18 ವರ್ಷಗಳಿಂದ ಆಟೋ ಓಡಿಸುತ್ತಿದ್ದೇನೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ನನ್ನ ಕುಟುಂಬದಲ್ಲಿ ಯಾರೊಬ್ಬರು ಕರೋನಾ ಸೋಂಕಿಗೆ ಒಳಗಾಗಿಲ್ಲ. ಆದರೆ ಕರೋನಾ ವೈರಸ್'ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕರೋನಾ ವೈರಸ್ ಸೋಂಕಿತರಿಗೆ ನನ್ನ ಕೈಲಾದ ನೆರವು ನೀಡುವ ಉದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದೇನೆ.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ನನ್ನ ಆಟೋದಲ್ಲಿ ಸ್ಯಾನಿಟೈಜರ್, ಔಷಧಿ ಹಾಗೂ ಆಕ್ಸಿಜನ್ ಸಿಲಿಂಡರ್'ಗಳನ್ನು ಇಟ್ಟಿದೇನೆ. ಕಳೆದ ಮೂರು ದಿನಗಳಲ್ಲಿ ಆಸ್ಪತ್ರೆಗೆ ತಲುಪುವ ಅವಶ್ಯಕತೆಯಿದ್ದ 10 ಜನರಿಗೆ ನಾನು ಸಹಾಯ ಮಾಡಿದ್ದೇನೆ ಎಂದು ಹೇಳಿದರು.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಆಟೋದಲ್ಲಿರುವ ಆಕ್ಸಿಜನ್ ಸಿಲಿಂಡರ್‌ ರೀಫಿಲ್ ಮಾಡಿಸಲು ಜಾವೇದ್ ಪ್ರತಿದಿನ ಸುಮಾರು ರೂ.600 ಖರ್ಚು ಮಾಡುತ್ತಾರೆ. ಆಕ್ಸಿಜನ್'ಗೆ ಬೇಡಿಕೆ ಹೆಚ್ಚಾಗಿರುವುದರಿಂದ ದುಬಾರಿ ಮೊತ್ತ ತೆರಬೇಕಾಗಿದೆ ಎಂದು ಅವರು ಹೇಳುತ್ತಾರೆ.

ಕರೋನಾ ಸೋಂಕಿತರಿಗಾಗಿ ಮೊಬೈಲ್ ಆಂಬ್ಯುಲೆನ್ಸ್ ಆಗಿ ಬದಲಾದ ಆಟೋ ರಿಕ್ಷಾ

ಸಿಲಿಂಡರ್ ರೀಫಿಲ್ ಮಾಡಿಸಲು 4-5 ಗಂಟೆಗಳ ಕಾಲ ಕಾಯಬೇಕಾಗಿದೆ ಎಂದು ಅವರು ಹೇಳಿದರು. ಜಾವೇದ್ ತಮ್ಮ ಆಟೋದಲ್ಲಿ ಇತರ ಪ್ರಯಾಣಿಕರಿಗೆ ಸೇವೆ ನೀಡುವುದನ್ನು ನಿಲ್ಲಿಸಿ, ಅನಾರೋಗ್ಯ ಪೀಡಿತರಿಗೆ ಮಾತ್ರ ಸೇವೆ ನೀಡುತ್ತಿದ್ದಾರೆ.

Most Read Articles

Kannada
English summary
Bhopal auto driver converts his auto rickshaw into mobile ambulance. Read in Kannada.
Story first published: Friday, April 30, 2021, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X