ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್‌ನ ಆಟೋ ಚಾಲಕರಾದ ಜಾವೇದ್ ಖಾನ್ ರವರ ಬಗ್ಗೆ ವರದಿ ಮಾಡಲಾಗಿತ್ತು. ಅವರು ತಮ್ಮ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿ ತಮ್ಮ ಆಟೋವನ್ನು ಕರೋನಾ ಸೋಂಕಿತರಿಗಾಗಿ ಉಚಿತ ಆಂಬ್ಯುಲೆನ್ಸ್ ಆಗಿ ಬದಲಿಸಿದ್ದರು.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಕರೋನಾ ಸೋಂಕಿತರಿಗೆ ಈ ಆಟೋದಲ್ಲಿ ಆಕ್ಸಿಜನ್ ವ್ಯವಸ್ಥೆ ಸಹ ಮಾಡಿದ್ದರು. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಲೇ ಹಲವಾರು ಜನರು ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಈಗ ಅವರಿಗೆ ಭೋಪಾಲ್ ಪೊಲೀಸರು ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ಕಳೆದ ಶನಿವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಅವರ ಮೇಲೆ ಕರ್ಫ್ಯೂ ವೇಳೆ ಆಟೋ ಚಾಲನೆ ಹಾಗೂ ಅನುಮತಿಯಿಲ್ಲದೆ ಆಕ್ಸಿಜನ್ ಸಿಲಿಂಡರ್ ಸಾಗಿಸಿದ ಆರೋಪ ಮಾಡಲಾಗಿದೆ. ಈ ಬಗ್ಗೆ ವರದಿಯಾಗುತ್ತಿದ್ದಂತೆ ಭೋಪಾಲ್ ಪೊಲೀಸರು ಜಾವೇದ್ ಖಾನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈ ಬಿಟ್ಟಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಈಗ ಭೋಪಾಲ್ ಪೊಲೀಸರು ಅವರಿಗೆ ವಿಶೇಷ ಅನುಮತಿ ನೀಡಿದ್ದಾರೆ. ಜಾವೇದ್ ಖಾನ್ ಆಕ್ಸಿಜನ್ ಅಗತ್ಯವಿರುವವರಿಗೆ ಹಾಗೂ ಆಸ್ಪತ್ರೆಗೆ ಹೋಗಬೇಕಾದವರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಕರೋನಾ ಸೋಂಕಿತರೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಪೊಲೀಸರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ಕಾರಣಕ್ಕೆ ಅಮೂಲ್ಯ ಸಮಯ ವ್ಯರ್ಥವಾಯಿತು ಎಂದು ಜಾವೇದ್ ಖಾನ್ ಹೇಳಿದ್ದಾರೆ. ಯಾರೋ ಒಬ್ಬರು ತಮಗೆ ಕರೆ ಮಾಡಿ ಆಕ್ಸಿಜನ್ ಬೇಕೆಂದು ಹೇಳಿದರು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ನಾನು ಪನ್ಪುರ್ ಪ್ರದೇಶವನ್ನು ತಲುಪಿದಾಗ ನನ್ನನ್ನು ತಡೆದು ನಿಲ್ಲಿಸಲಾಯಿತು. ನಾನು ತುರ್ತಾಗಿ ಹೊರಡಬೇಕಾಗಿರುವುದರಿಂದ ನನ್ನನ್ನು ಬಿಡುವಂತೆ ಪೊಲೀಸರನ್ನು ಕೇಳಿಕೊಂಡೆ. ಆದರೆ ಪೊಲೀಸರು ತನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಬದಲಿಗೆ ಕರ್ಪ್ಯೂ ವೇಳೆ ಆಟೋ ಏಕೆ ಚಾಲನೆ ಮಾಡುತ್ತಿರುವೆ ಎಂದು ಕೇಳಿದರು. ನಾನು ಅವರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತೋರಿಸಿದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದವು.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಆದರೂ ಪೊಲೀಸರು ದಂಡ ವಿಧಿಸಿದರು ಎಂದು ಹೇಳಿದರು. ಜಾವೇದ್ ಖಾನ್ ಅವರು ತಮ್ಮ ಆಟೋವನ್ನು ಉಚಿತ ಆಂಬ್ಯುಲೆನ್ಸ್ ಆಗಿ ಬದಲಿಸಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಆದರೆ ಅವರು ನನ್ನನ್ನು ಬೆಂಬಲಿಸುವ ಬದಲು ನನ್ನ ಮೇಲೆ ಪ್ರಕರಣ ದಾಖಲಿಸಿದರು. ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವಾಗ ಸಹಾಯ ಮಾಡುವುದು ಅಪರಾಧವೇ ಎಂದು ಜಾವೇದ್ ಖಾನ್ ಪ್ರಶ್ನಿಸಿದ್ದಾರೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಪೊಲೀಸರು ಯಾವುದೇ ಕಾರಣವಿಲ್ಲದೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಜಾವೇದ್ ಖಾನ್ ಹೇಳಿದರು. ಜಾವೇದ್ ಖಾನ್ ರವರಿಗೆ ದಂಡ ವಿಧಿಸಿರುವ ಬಗ್ಗೆ ತಿಳಿದು ಸಾರ್ವಜನಿಕರು ಪ್ರತಿಭಟಿಸಿದ ನಂತರ ಭೋಪಾಲ್ ಪೊಲೀಸರು ಜಾವೇದ್ ಖಾನ್ ವಿರುದ್ಧದ ಎಲ್ಲಾ ಕ್ರಮಗಳನ್ನು ಕೈಬಿಡುವುದಾಗಿ ತಿಳಿಸಿದ್ದಾರೆ.

ಕರೋನಾ ಸೋಂಕಿತರ ಬೆಂಬಲಕ್ಕೆ ಬಂದ ಆಟೋ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಭೋಪಾಲ್ ಪೊಲೀಸರು ಈಗ ಆಟೋ ಚಾಲಕ ಜಾವೇದ್ ಖಾನ್ ಅವರ ಸಂಚಾರಕ್ಕೆ ವಿಶೇಷ ಅನುಮತಿ ನೀಡಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಈ ಘಟನೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
Bhopal cops takes action against auto ambulance driver. Read in Kannada.
Story first published: Monday, May 3, 2021, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X