ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕರೋನಾ ವೈರಸ್‌ನಿಂದಾಗಿ ಇಡೀ ಮನುಕುಲವೇ ತತ್ತರಿಸುವಂತಾಗಿದೆ. ಈ ಮಹಾಮಾರಿ ವೈರಸ್‌ನಿಂದ ಈಗಾಗಲೇ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಕರೋನಾ ವೈರಸ್ ಹರಡುವುದನ್ನು ತಡೆಯಲು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಇದರಿಂದ ಪ್ರತಿದಿನದ ಆದಾಯವನ್ನು ನಂಬಿಕೊಂಡಿದ್ದ ಜನರು ಪರದಾಡುವಂತಾಯಿತು. ಲಾಕ್‌ಡೌನ್ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿತು.

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಎಲ್ಲಾ ಉದ್ಯಮಗಳ ರೀತಿಯಲ್ಲಿ ಆಟೋಮೊಬೈಲ್ ಉದ್ಯಮವು ಸಹ ಕುಸಿತವನ್ನು ಅನುಭವಿಸಿತು. 2020ರ ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಒಂದೇ ಒಂದು ವಾಹನವು ಸಹ ಮಾರಾಟವಾಗಿರಲಿಲ್ಲ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಇದು ಆಟೋಮೊಬೈಲ್ ಉದ್ಯಮದ ಕತೆಯಾದರೆ ಜೀವನ ನಿರ್ವಹಣೆಗಾಗಿ ಇತರ ರಾಜ್ಯಗಳಿಗೆ ವಲಸೆ ಹೋದವರು ಲಾಕ್‌ಡೌನ್'ನಿಂದಾಗಿ ಸಂಕಷ್ಟಕ್ಕೆ ಸಿಲುಕಿದರು. ದಕ್ಷಿಣ ಭಾರತದಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದ ಉತ್ತರ ಭಾರತೀಯರು ಮುಂದೆ ಏನು ಮಾಡಬೇಕೆಂದು ತೋಚದೇ ಕಂಗೆಟ್ಟಿದ್ದರು.

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಲಾಕ್‌ಡೌನ್ ಅವಧಿಯಲ್ಲಿ ಬಸ್, ರೈಲು ಸೇರಿದಂತೆ ಎಲ್ಲಾ ರೀತಿಯ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿತ್ತು. ಕೆಲವರು ಸಾವಿರಾರು ಕಿ.ಮೀ ನಡೆದು ತಮ್ಮ ಊರು ಸೇರಿದರು.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಇನ್ನೂ ಕೆಲವರು ಲಭ್ಯವಿದ್ದ ವಾಹನಗಳಲ್ಲಿಯೇ ತಮ್ಮ ಸ್ವಂತ ಊರುಗಳಿಗೆ ಮರಳಿದರು. ಇವರಲ್ಲಿ ಜ್ಯೋತಿ ಕುಮಾರಿ ಸಹ ಸೇರಿದ್ದಾರೆ. ಈಕೆ ಸುಮಾರು 1200 ಕಿ.ಮೀಗಳಷ್ಟು ದೂರ ಸೈಕಲ್'ನಲ್ಲಿ ತನ್ನ ತಂದೆಯನ್ನು ಕರೆದೊಯ್ಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಈ ಮೂಲಕ ಸೈಕಲ್ ಹುಡುಗಿ ಎಂದೇ ಜನಪ್ರಿಯರಾಗಿದ್ದರು.

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಆಗ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್'ರವರ ಪುತ್ರಿ ಇವಾಂಕಾ ಟ್ರಂಪ್ ಸಹ ಜ್ಯೋತಿ ಕುಮಾರಿರವರ ಕಾರ್ಯವನ್ನು ಶ್ಲಾಘಿಸಿದ್ದರು. ಸೈಕಲ್ ಮೂಲಕ1,200 ಕಿ.ಮೀ ಸಾಗಿದ್ದ ಜ್ಯೋತಿ ಕುಮಾರಿರವರ ತಂದೆ ಮೋಹನ್ ಪಾಸ್ವಾನ್ ಇತ್ತೀಚಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜ್ಯೋತಿ ಕುಮಾರಿರವರ ತಂದೆಯ ನಿಧನದ ಸುದ್ದಿ ತಿಳಿದ ಸಾರ್ವಜನಿಕರು ಸಂತಾಪ ಸೂಚಿಸುತ್ತಿದ್ದಾರೆ. ಜ್ಯೋತಿ ಕುಮಾರಿ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಗುರುಗ್ರಾಮದಲ್ಲಿ ಇ -ರಿಕ್ಷಾ ಚಾಲನೆ ಮಾಡುತ್ತಿದ್ದ ಮೋಹನ್ ಪಾಸ್ವಾನ್ ಸಣ್ಣ ಅಪಘಾತಕ್ಕೀಡಾಗಿದ್ದರು.

ಹೃದಯಾಘಾತದಿಂದ ನಿಧನರಾದ ಸೈಕಲ್ ಹುಡುಗಿಯ ತಂದೆ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದ ಕಾರಣ ಜ್ಯೋತಿ ಕುಮಾರಿ ತನ್ನ ತಂದೆಯನ್ನು ಕರೆತರಲು ಬಿಹಾರದಿಂದ ಗುರುಗ್ರಾಮಕ್ಕೆ ತೆರಳಿದ್ದರು. 2020ರ ಮೇ 10ರಂದು ಗುರುಗ್ರಾಮದಲ್ಲಿ ಆರಂಭವಾದ ಅವರ ಸೈಕಲ್ ಪ್ರಯಾಣವು 6 ದಿನಗಳ ನಂತರ ಅಂದರೆ ಮೇ 16ರಂದು ಕೊನೆಗೊಂಡಿತ್ತು.

Most Read Articles

Kannada
English summary
Bicycle girl's father dies due to cardiac arrest. Read in Kannada.
Story first published: Wednesday, June 2, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X