Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 14 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 15 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
17 ಟಾಟಾ ನೆಕ್ಸಾನ್ ಇವಿಗಳನ್ನು ಖರೀದಿಸಿದ ಕೊಲ್ಕತ್ತಾ ಪೊಲೀಸರು: ಒಟ್ಟಾರೆ ಇವಿ ವಾಹನಗಳ ಸಂಖ್ಯೆ 226ಕ್ಕೆ ಏರಿಕೆ
ಕೋಲ್ಕತ್ತಾ ಪೊಲೀಸರು ತಮ್ಮ ಅಸ್ತಿತ್ವದಲ್ಲಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಬೈಕ್‌ಗಳಾಗಿ ಪರಿವರ್ತಿಸಲು ಸುಮಾರು 200 ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳ ಜೊತೆಗೆ ಇದೀಗ 17 ಹೊಸ ಟಾಟಾ ನೆಕ್ಸಾನ್ ಇವಿಗಳನ್ನು ಗುತ್ತಿಗೆ ಪಡೆದಿದ್ದಾರೆ. ಈ ಮೂಲಕ ಒಟ್ಟಾರೆಯಾಗಿ 226 ಇವಿಗಳನ್ನು ತಮ್ಮ ನಿತ್ಯ ಬಳಕೆಯ ವಾಹನಗಳ ಸಾಲಿಗೆ ಸೇರಿಸಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಿದ್ದಾರೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ಸಹ ನೀಡುತ್ತಿದೆ. ಇನ್ನು ರಾಜ್ಯ ಸರ್ಕಾರಗಳು ಸಹ ಇದಕ್ಕೆ ಸಾಥ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ಚಾಲಿತ ವಾಹನಗಳಿಗೆ ಎಲೆಕ್ಟ್ರಿಕ್ ವಾಹನಗಳ ತೀವ್ರ ಪೈಪೋಟಿ ಎದುರಾಗಲಿದೆ.

ಎಲೆಕ್ಟ್ರಿಕ್ ಪ್ರಮಾಣಿತ ವಾಹನಗಳ ಪೂರೈಕೆ ಮಾಡುವ ಮೂಲಕ ಗ್ರಾಹಕರಲ್ಲಿ ವಿಶ್ವಾಸ ಗಳಿಸಿರುವ ಟಾಟಾ ಎಲೆಕ್ಟ್ರಿಕ್ ವಾಹನಗಳು ಜನರಲ್ಲಿ ಮಾತ್ರವಲ್ಲದೆ ಸರ್ಕಾರಿ ಇಲಾಖೆಗಳಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಕೋಲ್ಕತ್ತಾ ಪೊಲೀಸರು 226 ಟಾಟಾ ನೆಕ್ಸಾನ್ ಇವಿಗಳನ್ನು ಗುತ್ತಿಗೆ ಪಡೆದಿದ್ದಾರೆ.

226 ಟಾಟಾ ನೆಕ್ಸಾನ್ EV ಗಳನ್ನು ತಮ್ಮ ಅಧಿಕೃತ ಫ್ಲೀಟ್‌ಗೆ ಪರಿಚಯಿಸುವ ಮೂಲಕ ವಿದ್ಯುದ್ದೀಕರಣ ಪ್ರಕ್ರಿಯೆಗೆ ಕೋಲ್ಕತ್ತಾ ಪೊಲೀಸರು ಉತ್ತೇಜನ ನೀಡುತ್ತಿದ್ದಾರೆ. ಎಲೆಕ್ಟ್ರಿಕ್ ಕಾರುಗಳು ಮಾತ್ರವಲ್ಲದೆ, ತಮ್ಮ ಅಸ್ತಿತ್ವದಲ್ಲಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಬೈಕ್‌ಗಳಾಗಿ ಪರಿವರ್ತಿಸಲು 200 ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳನ್ನು ಸಹ ಖರೀದಿಸಿದ್ದಾರೆ.

ವಾಹನ ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ಪರಿಣಾಮಕಾರಿ ಕ್ರಮವನ್ನು ರೂಪಿಸಲು ಇದು ಉತ್ತಮ ಮಾರ್ಗವಾಗಿದೆ. EV ಗಳ ಸಾಮೂಹಿಕ ಅಳವಡಿಕೆಯು ಸಂಪೂರ್ಣ ಶಿಫ್ಟ್ ಆಗುವ ಮೊದಲು ಆಫ್ಟರ್ ಮಾರ್ಕೆಟ್ EV ಪರಿವರ್ತನೆ ಕಿಟ್‌ಗಳು ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳ ಮಾರ್ಗದ ಮೂಲಕ ಹೋಗಬಹುದು.

ಪಶ್ಚಿಮ ಬಂಗಾಳ ಸರ್ಕಾರವು 15 ವರ್ಷಗಳಿಗಿಂತಲೂ ಹಳೆಯದಾದ ಡೀಸೆಲ್ ವಾಹನಗಳನ್ನು ಇವಿ ಕಿಟ್‌ಗಳೊಂದಿಗೆ ಪರಿವರ್ತಿಸುವುದರ ಜೊತೆಗೆ 226 ಟಾಟಾ ನೆಕ್ಸಾನ್ ಹೊಸ ಇವಿಗಳನ್ನು 8 ವರ್ಷಗಳ ಕಾಲ ಗುತ್ತಿಗೆ ನೀಡಲು ಕೋಲ್ಕತ್ತಾ ಪೊಲೀಸರಿಗೆ 8.82 ಕೋಟಿ ರೂ. ಅನುದಾನ ಒದಗಿಸಿದೆ.

ಹಳೆಯ ಡೀಸೆಲ್ ಕಾರುಗಳನ್ನು ಸ್ಕ್ರ್ಯಾಪ್ ಮಾಡಿ ಹೊಸದನ್ನು ಖರೀದಿಸುವುದಿರಿಂದ ವೆಚ್ಚವು ಹೆಚ್ಚಾಗುತ್ತದೆ, ಹಾಗಾಗಿ EV ಗಳನ್ನು ಗುತ್ತಿಗೆಗೆ ಪಡೆದು ಅಸ್ತಿತ್ವದಲ್ಲಿರುವ ಮೋಟಾರ್‌ಸೈಕಲ್‌ಗಳನ್ನು ಆಫ್ಟರ್‌ಮಾರ್ಕೆಟ್ EV ಪರಿವರ್ತನೆ ಕಿಟ್‌ಗಳೊಂದಿಗೆ ಪರಿವರ್ತಿಸುವುದು ಸೂಕ್ತ ಪರಿಹಾರವಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಕೋಲ್ಕತ್ತಾ ಪೊಲೀಸ್ ಇಲಾಖೆಯು ಗೋಗೋವಾ1 ಅನ್ನು ಸಂಪರ್ಕಿಸಿದ್ದು ಇದು ಭಾರತದ ಪ್ರಮುಖ ಇವಿ ಪರಿವರ್ತನಾ ಕಂಪನಿಯಾಗಿದೆ. ಅವರು RTO-ಅನುಮೋದಿತ EV ಕಿಟ್‌ಗಳನ್ನು ಪೂರೈಸುತ್ತಾರೆ. ಇವುಗಳಿಂದ ಹಳೆಯ ಬೈಕುಗಳಲ್ಲಿ ಸುಲಭವಾಗಿ ಎಲೆಕ್ಟ್ರಿಕ್ ಕಿಟ್ ಅಳವಡಿಸಬಹುದಾಗಿದೆ. IC ಎಂಜಿನ್‌ಗಳಿಂದ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಿಗೆ ಪರಿವರ್ತನೆಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ಕೇರಳ ಸರ್ಕಾರದಿಂದ 65 ಇವಿ ಕಾರಿಗಳ ಖರೀದಿ
ಇತ್ತೀಚೆಗೆ ಕೇರಳ ರಾಜ್ಯ ಸರ್ಕಾರ ಟಾಟಾ ಕಂಪನಿಯ 65 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಕೇರಳದ ಸರ್ಕಾರದ ಕೆಲವು ಇಲಾಖೆಗಳಲ್ಲಿ ಈಗಾಗಲೇ ಟಾಟಾ ಕಂಪನಿಯ ನೆಕ್ಸನ್ ಇವಿ ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಾಗುತ್ತಿದೆ. ಇದರ ಹೊರತಾಗಿಯೂ ಕೇರಳ ಸರ್ಕಾರ 65 ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಇಲಾಖೆಯ ಹೆಚ್ಚಿನ ಬಳಕೆಗೆ ಉದ್ದೇಶಿಸಿರುವುದಾಗಿ ತಿಳಿದುಬಂದಿದೆ.

60 ಟಾಟಾ ಟಿಗೋರ್ ಇವಿ ಮತ್ತು 5 ಟಾಟಾ ನೆಕ್ಸನ್ ಇವಿಗಾಗಿ ಆರ್ಡರ್ ನೀಡಲಾಗಿದೆ. ರಾಜ್ಯ ಸರ್ಕಾರವು ಕೇರಳವನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಹೊರಹೊಮ್ಮುತ್ತಿರುವ ಇಂಗಾಲವನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, 2030ರ ವೇಳೆಗೆ ಈ ಗುರಿಯನ್ನು ಸಾಧಿಸುವ ಯೋಜನೆ ಮಾಡಿಕೊಂಡಿದೆ.

ಈ ಯೋಜನೆಯ ಭಾಗವಾಗಿ, ಕೇರಳ ಸರ್ಕಾರವು ತನ್ನ ಸರ್ಕಾರಿ ಇಲಾಖೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ಈ ಮೂಲಕ ಸರ್ಕಾರವು ತನ್ನ ನಾಗರಿಕರನ್ನು ಇ-ವಾಹನಗಳ ಬಳಕೆಯತ್ತ ಸಾಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಒಂದು ಭಾಗವಾಗಿಯೇ ಜನರಿಗೆ ಮಾದರಿಯಾಗಲು ಕೇರಳ ಸರ್ಕಾರ ಟಾಟಾ ಮೋಟಾರ್ಸ್‌ಗೆ ದೊಡ್ಡ ಆರ್ಡರ್ ನೀಡಿದೆ.

ಕೇರಳ ಸರ್ಕಾರ ಆರ್ಡರ್ ಮಾಡಿರುವ ಎರಡು ಮಾದರಿಗಳು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳಾಗಿವೆ. ಇದೇ ಕಾರಣದಿಂದಲೇ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಈ ಮಾದರಿಗಳು ಮಾರಾಟವಾಗುತ್ತಿವೆ. ಅತಿ ಹೆಚ್ಚು ಆರ್ಡರ್‌ಗಳನ್ನು ಪಡೆದಿರುವ ಟಾಟಾ ಟಿಗೋರ್ ಇವಿ ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು ಎಂಬ ಖ್ಯಾತಿ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸಬ್ಸಿಡಿಗಳ ಜೊತೆಗೆ ಸರ್ಕಾರಿ ಸಂಸ್ಥೆಗಳ ಇಂತಹ ಉಪಕ್ರಮಗಳು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಈ ಮಧ್ಯೆ, ಅಸ್ತಿತ್ವದಲ್ಲಿರುವ ವಾಹನಗಳಲ್ಲಿ ಎಲೆಕ್ಟ್ರಿಕ್ ಕಿಟ್‌ಗಳನ್ನು ಮರುಹೊಂದಿಸುವುದು ಮತ್ತು ಸಾಮೂಹಿಕವಾಗಿ EV ಉತ್ಪನ್ನಗಳಾಗಿ ಬದಲಾಯಿಸುವುದರಿಂದ ವಾಯು ಮಾಲಿನ್ಯವನ್ನು ಬಹುತೇಕ ಕಡಿಮೆಗೊಳಿಸಬಹುದು.