ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಸುಮಾರು ನಾಲ್ಕು ಗಂಟೆಗಳ ತೀವ್ರ ತಪಾಸಣೆ ನಡೆಸಿದ ಪೊಲೀಸರು ಈ ಹಿಂದೆ ಕಳುವಾಗಿದ್ದ ಕಾರುಗಳು ವಶಕ್ಕೆ ಪಡೆದು, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಸಿಕ್ಕಿಬಿದ್ದ ಅಪರಾಧಿಗಳನ್ನು ಹಾಗೂ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ ಇದೊಂದು ರಾಷ್ಟ್ರವ್ಯಾಪಿ ಜಾಲದಂತೆ ಕಂಡು ಬರುತ್ತದೆ. ಈ ತಪಾಸಣೆಯನ್ನು ಬಿಹಾರದಲ್ಲಿ ನಡೆಸಲಾಗಿದೆ. 4 ಗಂಟೆಗಳ ಕಾಲ ನಡೆದ ತಪಾಸಣೆಯಲ್ಲಿ 65 ಜನರನ್ನು ಬಂಧಿಸಿ, 67 ಕಳುವು ಮಾಡಲಾಗಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಹಾರ ಪೊಲೀಸರ ಈ ಕಾರ್ಯಾಚರಣೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರಲ್ಲಿ ನಡುಕ ಉಂಟಿಸಿದೆ.

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಸೆರೆ ಸಿಕ್ಕಿರುವ ಆರೋಪಿಗಳು ಅಪಹರಣ, ಅಪಹರಣ ಯತ್ನ, ದರೋಡೆಯಂತಹ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಆರೋಪಿಗಳು ಅಪರಾಧ ಕೃತ್ಯಗಳಿಗೆ ಬಳಸಿದ್ದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಕೇವಲ ನಾಲ್ಕು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸರು ಇಷ್ಟೊಂದು ಸಂಖ್ಯೆಯ ವಾಹನಗಳನ್ನು ವಶಕ್ಕೆ ಪಡೆದು, ಈ ಪ್ರಮಾಣದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪೊಲೀಸರ ಈ ಕ್ರಮವು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದೆ. ಕಾನೂನುಬಾಹಿರವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಮದ್ಯದ ಬಾಟಲಿ, 3,570 ಲೀಟರ್'ನಷ್ಟು ಮದ್ಯ ಹಾಗೂ 159 ಕೆ.ಜಿ ಡ್ರಗ್ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಇದರ ಜೊತೆಗೆ ರೂ.92,000 ನಗದು ವಶಕ್ಕೆ ಪಡೆಯಲಾಗಿದೆ. ಇವೆಲ್ಲವೂ ಬಿಹಾರ ರಾಜ್ಯದ 38 ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ. ನಮ್ಮ ರಾಜ್ಯಗಳಲ್ಲೂ ಈ ರೀತಿಯ ಕಾರ್ಯಾಚರಣೆ ನಡೆಯಲಿ ಎಂದು ಹಲವು ರಾಜ್ಯಗಳ ಜನರು ಒತ್ತಾಯಿಸುತ್ತಿದ್ದಾರೆ.

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಕಾರುಗಳ್ಳರ ಹಾವಳಿಯಿಂದ ದೇಶಾದ್ಯಂತವಿರುವ ಕಾರು ಮಾಲೀಕರು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟ. ಎಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೂ ವಾಹನ ಕಳ್ಳತನಗಳ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ವಾಹನಗಳ್ಳರು ಹೊಸ ಹೊಸ ತಂತ್ರಜ್ಞಾನಗಳ ಮೂಲಕ ವಾಹನಗಳುವು ಮಾಡುತ್ತಿದ್ದಾರೆ. ಒಂದು ರಾಜ್ಯಗಳಲ್ಲಿ ಕದ್ದ ವಾಹನಗಳನ್ನು ಮತ್ತೊಂದು ರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವುದು ಸಹ ಪೊಲೀಸರ ತನಿಖೆಗೆ ಹಿನ್ನಡೆಯುಂಟು ಮಾಡುತ್ತಿದೆ.

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಕೆಲವು ಕಡೆ ಸಿಸಿಟಿವಿಗಳ ಕೊರತೆಯಿದ್ದರೆ, ಇನ್ನೂ ಕೆಲವೆಡೆ ಸಿಸಿಟಿವಿಗಳ ಅಸಮರ್ಪಕ ನಿರ್ವಹಣೆಯು ಸಹ ಪ್ರಕರಣಗಳನ್ನು ಪತ್ತೆ ಹಚ್ಚುವ ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಲು ವಾಹನಗಳಲ್ಲಿ ಜಿಪಿಎಸ್ ಹಾಗೂ ನ್ಯಾವಿಗೇಷನ್ ಬಳಸ ಬೇಕೆಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 67 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಇವುಗಳನ್ನು ಅಳವಡಿಸಿ ಕೊಂಡರೆ ಕದ್ದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಕದ್ದ ವಾಹನಗಳು ಎಲ್ಲಿವೆ ಎಂಬುದನ್ನು ಈ ಉಪಕರಣಗಳ ಮೂಲಕ ಪತ್ತೆ ಹಚ್ಚಬಹುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Bihar police seize 67 stolen vehicles in 4 hours operation. Read in Kannada.
Story first published: Monday, December 21, 2020, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X