ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಬಸ್, ಟ್ರಕ್ ಹಾಗೂ ಇನ್ನಿತರ ಖಾಸಗಿ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ವಚ್ವಗೊಳಿಸಲಾಗುತ್ತಿದೆ. ಬಹುತೇಕ ವಾಹನ ಕಂಪನಿಗಳು ತಮ್ಮ ಸರ್ವೀಸ್ ಸೆಂಟರ್‌ಗಳಲ್ಲಿ ಗ್ರಾಹಕರಿಗೆ ವಾಹನಗಳನ್ನು ಸ್ವಚ್ವಗೊಳಿಸುವ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿವೆ.

ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ವಾಹನಗಳನ್ನು ಸಾಕಷ್ಟು ಮುನ್ನೆಚ್ಚರಿಕೆ ವಹಿಸದೇ ಸ್ವಚ್ವಗೊಳಿಸಿದರೆ ಅನಾಹುತಗಳು ಸಂಭವಿಸಬಹುದು. ಇತ್ತೀಚಿಗೆ ಬಿಡುಗಡೆಯಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಬೈಕ್ ಅನ್ನು ಸ್ವಚ್ವಗೊಳಿಸುವಾಗ ಬೆಂಕಿಗಾಹುತಿಯಾಗುತ್ತದೆ. ಈ ಘಟನೆಯ ನಂತರ, ವಾಹನಗಳನ್ನು ಸ್ವಚ್ವಗೊಳಿಸುವಾಗ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಸರ್ವೀಸ್ ಸೆಂಟರ್‌ಗಳಲ್ಲಿನ ಸುರಕ್ಷತೆಯ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ.

ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ಈ ವೀಡಿಯೊದಲ್ಲಿ, ಬೈಕ್ ಚಾಲಕನು ಬೈಕ್‌ನಲ್ಲಿ ಕುಳಿತಿರುವಾಗಲೇ ಸ್ಯಾನಿಟೈಜರ್ ಸಿಂಪಡಿಸುವುದನ್ನು ಕಾಣಬಹುದು. ಸ್ಯಾನಿಟೈಜರ್ ಸಿಂಪಡಿಸುವಾಗ ಬೈಕ್ ಆನ್ ಆಗಿರುತ್ತದೆ. ಕೆಲವು ಸೆಕೆಂಡುಗಳ ನಂತರ, ಬೈಕಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಸ್ಯಾನಿಟೈಜರ್ ಬೈಕ್ ಚಾಲಕನ ಮೇಲೂ ಬಿದ್ದಿದ್ದ ಕಾರಣ ಆತನ ಕಾಲುಗಳಿಗೂ ಬೆಂಕಿ ಬಿದ್ದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ಬೈಕ್ ಸವಾರನು ಬೈಕ್‌ನಿಂದ ಹಾರಿ ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ. ರಸ್ತೆಯ ಮೇಲಿದ್ದ ಬೈಕಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂತರ ನಂದಿಸಲಾಗುತ್ತದೆ. ಈ ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯು ವಾಹನಗಳಿಗೆ ಸ್ಯಾನಿಟೈಜರ್ ಸಿಂಪಡಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ವಾಹನಗಳನ್ನು ಸ್ವಚ್ವಗೊಳಿಸಲು ಬಳಸಲಾಗುವ ಸ್ಯಾನಿಟೈಜರ್ ಐಸೊಪ್ರೊಪಿಲ್ / ಎಥೆನಾಲ್ ಆಲ್ಕೋಹಾಲ್‌ಗಳನ್ನು ಹೊಂದಿರುತ್ತದೆ. ಇದು ಹೆಚ್ಚು ಸುಡುವ ವಸ್ತುಗಳಾಗಿದ್ದು, ಸಣ್ಣ ಕಿಡಿ ಅಥವಾ ಬಿಸಿ ವಸ್ತುಗಳು ತಾಗಿದಾಗ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೀಡಿಯೊದಲ್ಲಿ ಸ್ಯಾನಿಟೈಜರ್ ಸಿಂಪಡಿಸುವಾಗ ಬೈಕ್ ಚಾಲನೆಯಲ್ಲಿರುತ್ತದೆ. ಈ ಕಾರಣಕ್ಕೆ ಎಂಜಿನ್‌ನ ಶಾಖದಿಂದ ಬೆಂಕಿಯನ್ನು ಹೊತ್ತಿಕೊಂಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬೈಕ್ ಆನ್ ಆಫ್ ಮಾಡಿದ ತಕ್ಷಣವೇ ಸ್ಯಾನಿಟೈಜರ್ ಸಿಂಪಡಿಸಿದರೂ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಬೈಕ್‌ನ ಎಂಜಿನ್ ಹಾಗೂ ಸೈಲೆನ್ಸರ್‌ಗಳು ಇನ್ನೂ ಬಿಸಿಯಾಗಿರುತ್ತವೆ. ಇದರಿಂದ ಬೆಂಕಿ ಹೊತ್ತಿಕೊಳ್ಳುತ್ತದೆ.

ಸ್ಯಾನಿಟೈಜರ್ ಸಿಂಪಡಿಸುವಾಗಲೇ ಬೆಂಕಿಗಾಹುತಿಯಾದ ಬೈಕ್

ವಾಹನಗಳಿಗೆ ಸ್ಯಾನಿಟೈಜರ್ ಸಿಂಪಡಿಸುವಾಗ ವಾಹನಗಳು ಆಫ್ ಆಗಿವೆ ಎಂಬುದನ್ನು ಖಚಿತಪಡಿಕೊಳ್ಳುವುದು ಉತ್ತಮ. ವಾಹನವು ಬಿಸಿಯಾಗಿದ್ದರೆ ತಣ್ಣಗಾಗುವವರೆಗೂ ಕಾಯುವುದು ಒಳಿತು. ಇಲ್ಲದಿದ್ದರೆ ಈ ರೀತಿಯ ಘಟನೆಗಳು ಪುನರಾವರ್ತನೆಯಾಗುವುದು ಖಚಿತ.

Article Published On: Wednesday, June 3, 2020, 13:01 [IST]
English summary
Bike being improperly sanitised catches fire caught in video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+