ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಹಲವು ವೀಡಿಯೊಗಳು ವೈರಲ್ ಆಗುತ್ತವೆ. ಈಗ ಇದೇ ರೀತಿಯ ವೀಡಿಯೊವೊಂದು ವೈರಲ್ ಆಗುತ್ತಿದೆ. ಈ ವೀಡಿಯೊ ನೋಡುಗರಲ್ಲಿ ಭಯವನ್ನುಂಟು ಮಾಡುತ್ತದೆ.

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಈ ವೀಡಿಯೊದಲ್ಲಿರುವ ಘಟನೆ ನಡೆದಿರುವುದು ಬ್ರೆಜಿಲ್ ದೇಶದಲ್ಲಿ. ಈ ಘಟನೆಯಲ್ಲಿ ಲಾರಿ ಬೈಕಿಗೆ ಡಿಕ್ಕಿ ಹೊಡೆದಿರುವ ಕಾರಣಕ್ಕೆ ಬೈಕ್ ಲಾರಿಯಲ್ಲಿಯೇ ಸಿಲುಕಿಕೊಂಡಿದೆ. ಈ ಘಟನೆಯನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ವ್ಯಕ್ತಿಯೊಬ್ಬ ಲಾರಿಯ ಕಿಟಕಿ ಹಿಡಿದು ನೇತಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಲಾರಿ ಗುದ್ದಿದ ಬೈಕ್ ಸವಾರನೇ ಹೀಗೆ ಲಾರಿಯ ಕಿಟಕಿ ಹಿಡಿದುನೇತಾಡುತ್ತಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಲಾರಿಯ ಮುಂದೆ ಬೈಕ್ ಸಿಲುಕಿಕೊಂಡಿರುವುದನ್ನು ಸಹ ಈ ವೀಡಿಯೊದಲ್ಲಿ ಕಾಣಬಹುದು. ಆದರೂ ಲಾರಿ ಚಾಲಕ ಏನೂ ಆಗಿಲ್ಲವೆಂಬಂತೆ ವೇಗವಾಗಿ ಲಾರಿ ಚಾಲನೆ ಮಾಡಿಕೊಂಡು ಸಾಗುತ್ತಿದ್ದಾನೆ.

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಈ ಘಟನೆ ನಡೆದಿರುವುದು ಬ್ರೆಜಿಲ್‌ನ ಸಾಂತಾ ಕ್ಯಾಟರೀನಾ ನಗರದಲ್ಲಿ. ಹೆದ್ದಾರಿಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಸಾಗುತ್ತಿದ್ದ ವ್ಯಕ್ತಿಗೆ ಈ ಲಾರಿ ಹಿಂದಿನಿಂದ ಗುದ್ದಿದೆ. ಬೈಕ್ ಸವಾರ ಲಾರಿಯಲ್ಲಿ ಸಿಲುಕಿಕೊಂಡರೆ ಹಿಂಬದಿಯ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಅಪಘಾತದ ನಂತರ ಸಿಕ್ಕಿ ಬೀಳಬಹುದೆಂಬ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಬೈಕ್ ಸವಾರ ಲಾರಿಯ ಬಾಗಿಲು ಹಿಡಿದು 19 ಮೈಲಿ ಅಂದರೆ ಸುಮಾರು 40 ಕಿ.ಮೀ ಸಾಗಿದ್ದಾನೆ.

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಕೊನೆಗೆ ಹೆದ್ದಾರಿಯಲ್ಲಿ ಸಾಗುವ ಕೆಲವು ಚಾಲಕರು ನೆರವಿಗೆ ಧಾವಿಸಿ ಲಾರಿಯನ್ನು ನಿಲ್ಲಿಸಿದ್ದಾರೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬೈಕ್ ಸವಾರನಿಂದ ಇಡೀ ಪ್ರಕರಣದ ಮಾಹಿತಿಯನ್ನು ಪಡೆದಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಾರಿ ಹಿಂಭಾಗದಿಂದ ಗುದ್ದಿದ ಕಾರಣಕ್ಕೆ ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ಹಿಂಬದಿ ಸವಾರ 47 ವರ್ಷದ ಸಾಂಡ್ರಾ ಪೆರೆರಾ ತಲೆಗೆ ತೀವ್ರವಾದ ಗಾಯಗಳಾಗಿದ್ದವು. ಆತ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.

ಲಾರಿ ಕಿಟಿಕಿ ಹಿಡಿದು 40 ಕಿ.ಮೀ ಸಾಗಿದ ಬೈಕ್ ಸವಾರ

ಲಾರಿ ಚಾಲಕ ಕುಡಿದು ಲಾರಿ ಚಾಲನೆ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಕಂಡುಬಂದಿದೆ. ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles
 

Kannada
English summary
Bike rider moves 40 kms by holding lorry window. Read in Kannada.
Story first published: Wednesday, March 10, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X