ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಭಾರತದಲ್ಲಿ ತನ್ನ ಅಟ್ಟಹಾಸವನ್ನು ತೋರಿದ್ದ ಕರೋನಾ ವೈರಸ್ ಎರಡನೇ ಅಲೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಡಿಮೆಯಾಗಿದೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್ ಅನ್ನು ಸಡಿಲಿಸಲಾಗಿದೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಈ ಹಿನ್ನೆಲೆಯಲ್ಲಿ ಜನರು ಮತ್ತೆ ಓಡಾಟವನ್ನು ಆರಂಭಿಸಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ಮನೆಯೊಳಗೆ ಬಂಧಿಯಾಗಿದ್ದ ಜನರು ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಕರೋನಾ ವೈರಸ್ ಮೂರನೇ ಅಲೆ ಎದುರಾಗಬಹುದೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಜನರು ಪ್ರವಾಸಿ ತಾಣಗಳಿಗೆ ಮುಗಿ ಬೀಳುತ್ತಿದ್ದಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರವಾಸಿ ತಾಣಗಳು ಸಹ ಜನರಿಂದ ತುಂಬಿ ತುಳುಕುತ್ತಿವೆ. ಪ್ರವಾಸಿ ತಾಣಗಳಿಗೆ ತೆರಳುವ ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಹಜ. ಜನರು ರಸ್ತೆ ಮೇಲೆ ಕಸ ಎಸೆದಾಗ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿರೋಧಿಸುತ್ತಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಲಡಾಖ್‌ಗೆ ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ತೆರಳಿದ್ದ ಕುಟುಂಬವೊಂದು ತಾವು ಬಳಸಿದ ಪ್ಲಾಸ್ಟಿಕ್ ಬಾಟಲಿಯನ್ನು ರಸ್ತೆಯ ಮೇಲೆ ಎಸೆದಿತ್ತು. ಆಗ ಆ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಫಾರ್ಚೂನರ್ ಕಾರ್ ಅನ್ನು ಅಡ್ಡ ಗಟ್ಟಿದ್ದಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಲಡಾಖ್, ಬೈಕ್ ಸವಾರರ ನೆಚ್ಚಿನ ತಾಣಗಳಲ್ಲಿ ಒಂದು. ಲಡಾಖ್‌ಗೆ ದೂರದ ಊರುಗಳಿಂದ ಬೈಕ್ ಸವಾರರು ತೆರಳುತ್ತಾರೆ. ಅದರಲ್ಲೂ ಉತ್ತರ ಭಾರತದ ಬೈಕ್ ಸವಾರರು ಲಡಾಖ್‌ಗೆ ಭೇಟಿ ನೀಡುತ್ತಲೇ ಇರುತ್ತಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಇಂತಹ ನೆಚ್ಚಿನ ತಾಣದಲ್ಲಿ ಯಾರಾದರೂ ಕಸ ಎಸೆದರೆ ಬೈಕ್ ಸವಾರರು ಕೋಪಗೊಳ್ಳುವುದು ಸಹಜ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಫಾರ್ಚೂನರ್ ಕಾರ್ ಅನ್ನು ಬೈಕ್ ಸವಾರರೊಬ್ಬರು ತಡೆದು ನಿಲ್ಲಿಸಿರುತ್ತಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಆ ವೇಳೆ ಮತ್ತೊಂದು ಬೈಕಿನಲ್ಲಿ ಬರುವವರು ರಸ್ತೆ ಮೇಲೆ ಬಿದ್ದಿದ್ದ ಬಾಟಲ್ ಅನ್ನು ತರುತ್ತಾರೆ. ಕಾರ್ ಅನ್ನು ತಡೆದ ನಂತರ ಇಷ್ಟು ದೊಡ್ಡ ಕಾರಿನಲ್ಲಿ ಸಂಚರಿಸುತ್ತಿರುವ ನಿಮಗೆ ರಸ್ತೆ ಮೇಲೆ ಬಾಟಲ್ ಎಸೆಯಬಾರದು ಎಂಬುದು ತಿಳಿಯುವುದಿಲ್ಲವೇ ಎಂದು ಬೈಕ್ ಸವಾರರು ಕೇಳುತ್ತಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ನಂತರ ಕಾರಿನಲ್ಲಿದ್ದವರಿಗೆ ಅವರು ರಸ್ತೆ ಮೇಲೆ ಎಸೆದಿದ್ದ ಬಾಟಲ್ ಅನ್ನು ನೀಡುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಲಡಾಖ್ ಸಂಸದರಾದ ಜಮ್ಯಾಂಗ್ ತೆಸ್ರೀಂಗ್'ರವರು ಲಡಾಖ್‌ಗೆ ಬರುವವರು ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಮನವಿ ಮಾಡಿದ್ದಾರೆ.

ಕೆಲವೊಮ್ಮೆ ಕಸ ಎಸೆದಿರುವವರು ಪ್ರಶ್ನಿಸುವವರ ಮೇಲೆಯೇ ಜಗಳಕ್ಕೆ ತೆರಳುವ ಸಾಧ್ಯತೆಗಳಿರುತ್ತವೆ. ಆದರೆ ಈ ಘಟನೆಯಲ್ಲಿ ಕಾರಿನಲ್ಲಿದ್ದವರು ಬಾಟಲಿಯನ್ನು ವಾಪಸ್ ಪಡೆದು ತಮ್ಮ ತಪ್ಪನ್ನು ಅರಿತು ಕೊಂಡಿದ್ದಾರೆ.

ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು

ಈ ವೀಡಿಯೊದಲ್ಲಿ ಕಾರಿನಲ್ಲಿದ್ದವರು ಎರಡು ಮೂರು ಬಾರಿ ಕ್ಷಮಿಸಿ ಎಂದು ಹೇಳುವುದನ್ನು ಕೇಳಬಹುದು. ಈ ಘಟನೆಯ ನಂತರ ಕಾರಿನಲ್ಲಿದ್ದವರು ಮತ್ತೊಮ್ಮೆ ರಸ್ತೆಯ ಮೇಲೆ ಕಸ ಎಸೆಯುವ ಸಾಧ್ಯತೆಗಳು ಕಡಿಮೆ.

Most Read Articles

Kannada
English summary
Bike riders gives back bottle to car passengers who threw that on road. Read in Kannada.
Story first published: Saturday, July 17, 2021, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X