Viral video: ಅನ್ಯಾಯವಾಗಿ ಲಾರಿಯನ್ನು ಬಲಿಪಡೆದ ಬೈಕ್ ಸವಾರ... ಇಂಥವರನ್ನು ಕನಸಲ್ಲೂ ನೋಡಿರೋದಿಲ್ಲ!
ಅತಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವು ಒಂದು. ಇದಕ್ಕೆ ಮುಖ್ಯ ಕಾರಣ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದೆ. ನಗರ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಹಾಗೂ ಪೊಲೀಸರಿಂದಾಗಿ ನಿಯಮಗಳ ಪಾಲನೆ ಮಾಡುತ್ತಾರೆ. ಆದರೆ ನಗರ ಹೊರವಲಯ ಹಾಗೂ ಹೆದ್ದಾರಿಗಳಲ್ಲಿ ಕ್ಯಾಮರಾಗಳು ಇರುತ್ತವಾದ್ರೂ ನಿಯಮಗಳನ್ನು ಪಾಲಿಸುವವರೇ ಇರೋದಿಲ್ಲ.
ಭಾರತೀಯ ರಸ್ತೆಗಳಲ್ಲಿ ವಾಹನಕ್ಕೆ ಮುಂದೆ ಏನಾಗಬಹುದು ಎಂದು ಯಾರಿಗೂ ತಿಳಿದಿಲ್ಲ. ಈ ಕಾರಣಕ್ಕಾಗಿಯೇ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಯಾವಾಗಲೂ ಜಾಗರೂಕರಾಗಿರಬೇಕು ಎಂಬುದನಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಇತ್ತೀಚೆಗೆ ತೆಲಂಗಾಣ ರಾಜ್ಯದ ಟ್ರಕ್ ಚಾಲಕನೊಬ್ಬ ಅಜಾಗರೂಕವಾಗಿ ಚಾಲನೆ ಮಾಡುತ್ತಾ ಬಂದ ದ್ವಿಚಕ್ರವಾಹನ ಸವಾರನ ಜೀವ ಉಳಿಸಿದ್ದಾನೆ.

ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಪೂರ್ಣ ದೃಶ್ಯಗಳು ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಸ್ತೆಯ ಎಡಭಾಗದ ಮೂಲೆಯಿಂದ ಒಬ್ಬ ಬೈಕ್ ಸವಾರ ರಸ್ತೆಗೆ ಪ್ರವೇಶಿಸಿ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರಿಯದೇ ಏಕಾಏಕಿ ಮುಂದೆ ಸಾಗುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಅಲ್ಲದೇ ಈತ ಕೇವಲ ಮುಂದೆ ಸಾಗುತ್ತಿರಲಿಲ್ಲ, ಬದಲಾಗಿ ದಿಢೀರನೆ ಲೇನ್ ಬದಲಾಯಿಸಿದ್ದ.
ದೂರದ ಎಡ ಲೇನ್‌ನಿಂದ ಪ್ರಾರಂಭಿಸಿ, ಬಲಭಾಗದಲ್ಲಿ ಯು-ಟರ್ನ್ ಲೇನ್ ಕಡೆಗೆ ಹೋಗುತ್ತಿದ್ದ. ಹಿಂದಿನಿಂದ ಬರುವ ವಾಹನಗಳನ್ನು ಪರಿಶೀಲಿಸದೆ ನಿರ್ಲಕ್ಷ್ಯ ಮಾಡಿದ್ದಾನೆ. ಇದೇ ವೇಳೆ ಕಂಟೈನರ್ ಟ್ರಕ್ ಬೈಕ್ ಸವಾರನತ್ತ ಬಂದಿದೆ. ಅದೃಷ್ಟವಶಾತ್, ಟ್ರಕ್ ಚಾಲಕ ಗಮನಹರಿಸಿ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಬ್ರೇಕ್ ಹಾಕಿ ಬೈಕನಿಂದ ಟ್ರಕ್ ಅನ್ನು ವೇಗವಾಗಿ ಬೇರೆಗೆ ಓಡಿಸಿದ್ದಾನೆ.

ಚಾಲಕ ಸ್ವಲ್ಪ ಮಟ್ಟಿಗೆ ಇದನ್ನು ನಿರ್ವಹಿಸಿ, ಬೈಕ್ ಸವಾರನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಈ ವೇಳೆ ಟ್ರಕ್‌ನ ನಿಯಂತ್ರಣ ತಪ್ಪಿದ್ದು, ಕಂಟೈನರ್ ಟ್ರಕ್ ಆಗಿರುವುದರಿಂದ, ಹೆಚ್ಚಿನ ತೂಕವನ್ನು ಹೊಂದಿತ್ತು. ಟ್ರಕ್ ಮೀಡಿಯನ್‌ಗೆ ಡಿಕ್ಕಿ ಹೊಡೆದಿದ್ದು, ಕಂಟೈನರ್ ಸಿಸಿಟಿವಿ ಅಳವಡಿಸಿದ್ದ ಕಂಬಕ್ಕೆ ಅಪ್ಪಳಿಸಿದೆ. ಮತ್ತೊಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಲಾರಿ ಅದರ ಬದಿಗೆ ಉರುಳಿದೆ.
ವೀಡಿಯೊದ ಪ್ರಕಾರ, ಟ್ರಕ್ ಬೈಕ್ಗ ತಾಗಿದೆ, ಆದರೆ ಬೈಕ್ ಸವಾರನು ಹಾನಿಗೊಳಗಾಗದೆ ಬದುಕುಳಿದಿದ್ದಾನೆ. ಟ್ರಕ್ ಚಾಲಕನಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಬೈಕ್ ಸವಾರನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ರಸ್ತೆಗೆ ಪ್ರವೇಶಿಸುವ ಮೊದಲು ಟ್ರಾಫಿಕ್ ಅನ್ನು ವೀಕ್ಷಿಸಲು ಸಮಯ ತೆಗೆದುಕೊಂಡಿದ್ದರೆ, ಈ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂಬುದು ನಮ್ಮ ಅಭಿಪ್ರಾಯ.
ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಲಿಲ್ಲ, ಈ ಘಟನೆಯು ಪ್ರತಿ ದ್ವಿಚಕ್ರ ವಾಹನ ಚಾಲಕರು ತಮ್ಮ ವಾಹನಗಳನ್ನು ಓಡಿಸುವಾಗ ತಿಳಿದಿರಬೇಕಾದ ಕೆಲವು ನಿರ್ಣಾಯಕ ಅಂಶಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ದ್ವಿಚಕ್ರ ವಾಹನವನ್ನು ಓಡಿಸುವಾಗ ಅನಗತ್ಯವಾಗಿ ತಿರುಗುವುದರಿಂದಾಗುವ ಅನಾಹುತಗಳು ತಪ್ಪಿದ್ದಲ್ಲ. ನಿಯಮಗಳ ಬಗ್ಗೆ ಅರಿವು ಇದ್ದವರು ಯಾರು ಕೂಡ ಹೀಗೆ ಮಾಡೋದಿಲ್ಲ.
ಹಿಂಬರುವ ವಾಹನಗಳನ್ನು ನೋಡುವುದು, ಇಂಡಿಕೇಟರ್ ಬಳಸಿ ತಿರುವು ಪಡೆಯುವುದು, ಬಹು ಮುಖ್ಯವಾಗಿ ತಿರುವು ಪಡೆಯುವ ಮುನ್ನ ತಿರುವು ಇರುವ ಕಡೆಗೆ ಸಂಪೂರ್ಣವಾಗಿ ಬರುವುದು ವಾಹನ ಸವಾರರಿಗೆ ಇರಬೇಕಾದ ಸಾಮಾನ್ಯ ಜ್ಞಾನವಾಗಿದೆ. ಆದರೆ ವಿಡಿಯೋದಲ್ಲಿ ನಾವು ನೋಡಿದ ಸವಾರ ಇಲ್ಲಿ ತಿಳಿಸಲಾದ ಯಾವುದನ್ನು ಪಾಲಿಸಿಲ್ಲ. ಜೊತೆಗೆ ಇದರಲ್ಲಿ ಸಂಪೂರ್ಣ ತಪ್ಪು ಬೈಕ್ ಸವಾರನದ್ದಾಗಿದೆ.
ಈ ವಿಷಯದಲ್ಲಿ ಲಾರಿ ಸವಾರ ಹಾಗೂ ಬೈಕ್ ಸವಾರನ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ. ಇಂತಹ ಸಂದರ್ಭಗಳು ಎದುರಾದರೆ ನೀವು ಏನು ಮಾಡಿತ್ತೀರಿ, ದೊಡ್ಡ ವಾಹನಗಳೊಂದಿಗೆ ನಡೆಯುವ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರದ್ದೇ ತಪ್ಪು ಎಂದು ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕಮೆಂಟ್ ಗಳಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications