ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಇಂದು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಸೂಪರ್ ಬೈಕ್‌ಗಳ ಆಯ್ಕೆಗಳಿವೆ. ಇಂತಹ ಬೈಕ್‌ಗಳಲ್ಲಿ ಸ್ಟಂಟ್ಸ್ ಮಾಡಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಟ್ರೆಂಡ್ ಆಗಿದೆ. ಇಷ್ಟೇ ಅಲ್ಲದೇ ಲೈಕ್, ಕಾಮೆಂಟ್ ಗಿಟ್ಟಿಸಲು ಅಪಾಯಕಾರಿ ಸ್ಟಂಟ್ಸ್ ವಿಡಿಯೋ ಮಾಡಿ ಇಂದಿನ ಯುವ ಪೀಳಿಗೆ ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಕೇರಳದಲ್ಲಿ ಯುವಕನೊಬ್ಬ ಒಂದು ಹೆಚ್ಚೆ ಮುಂದೆ ಹೋಗಿ, ಪೊಲೀಸರಿಗೆ ಸವಾಲಾಗಿ ಠಾಣೆ ಎದುರು ಸ್ಟಂಟ್ ಮಾಡಿದ್ದಾನೆ. ಈ ಸ್ಟಂಟ್ ಮಾಡಿದ ಯುವಕನ ಬೈಕನ್ನು ಪೊಲೀಸರು ವಶಕ್ಕೆ ಪಡೆದು ಆತನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ್ದಾರೆ. ಇದು ಮೊದಲ ಬಾರಿಗೆ ಅಲ್ಲ, ಇತ ಈ ಹಿಂದೆ ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಬೀಚ್ ರಸ್ತೆಯಲ್ಲಿ ಸ್ಟಂಟ್ ಮಾಡಿದ ಪ್ರಕರಣದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ ಪೊಲೀಸರು ಈ ಯುವಕನ ಬೈಕನ್ನು ವಶಕ್ಕೆ ತೆಗೆದುಕೊಂಡಿದ್ದರು.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ನಂತರ ಪೊಲೀಸರು ದಂಡವನ್ನು ವಿಧಿಸಿದ ಬಳಿಕ ಬೈಕನ್ನು ಬಿಡುಗಡೆ ಮಾಡಿದ್ದರು. ನಂತರ ಯುವಕ ತನ್ನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಾಗಿ ಒಂದು ಸಣ್ಣ ವೀಡಿಯೊವನ್ನು ಮಾಡಿದನು. ವಿಡಿಯೋದಲ್ಲಿ ಯುವಕ ಪೊಲೀಸ್ ಠಾಣೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದಾನೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಇದನ್ನು ಮನೋರಮಾ ನ್ಯೂಸ್ ವರದಿ ಮಾಡಿದೆ ಮತ್ತು ಅದನ್ನು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇನ್ನು ಯುವಕ ಸ್ಟಂಟ್ ಮಾಡಿದ ವಿಡಿಯೋ ಕಡಿಮೆ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ನಂತರ ಕೇರಳ ಪೊಲೀಸ್ ಸೋಷಿಯಲ್ ಮೀಡಿಯಾ ತಂಡ ಈ ವಿಡಿಯೋವನ್ನು ಗುರುತಿಸಿದೆ. ಅವರು ವೀಡಿಯೊವನ್ನು ಕಂಡ ತಕ್ಷಣ ಸ್ಟಂಟ್ ಮಾಡಿದ ಯುವಕನನ್ನು ಮತ್ತು ಬೈಕನ್ನು ವಶಕ್ಕೆ ತೆಗೆದುಕೊಂಡರು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಕೇರಳ ಪೊಲೀಸರು ಅದೇ ರೀತಿಯ ಟ್ರೋಲ್ ವಿಡಿಯೋವೊಂದನ್ನು ಸಹ ಮಾಡಿದ್ದಾರೆ, ಈ ಟ್ರೋಲ್ ವಿಡಿಯೋದಲ್ಲಿ ಯುವಕ ಬೈಕನ್ನು ತಳ್ಳಿಕೊಂಡು ಪೊಲೀಸ್ ಠಾಣೆ ಕಾಂಪೌಂಡ್ಗೆ ಪ್ರವೇಶಿಸುವುದನ್ನು ತೋರಿಸಿದ್ದಾರೆ. ಮೋಟಾರು ವಾಹನ ವಿಭಾಗವೂ ಸವಾರನ ವಿರುದ್ಧ ಕ್ರಮ ಕೈಗೊಂಡಿದೆ.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಅವರು ಈ ಯುವಕನ ಡ್ರೈವಿಂಗ್ ಲೈಸೆನ್ಸ್ ಅನ್ನು ಸಸ್ಪೆಂಡ್ ಮಾಡಿದ್ದಾರೆ. ವೀಡಿಯೊದಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ಬೈಕ್‌ನಲ್ಲಿ ಅದರ ನಂತರದ ಗ್ರಾಫಿಕ್ಸ್ ಇದ್ದು ಅದನ್ನು ಮಾರ್ಪಾಡು ಮಾಡಿದ್ದಾರೆ. ಅದರ ಮೇಲೆ ಇರುವ ಸ್ಟಿಕ್ಕರ್‌ಗಳನ್ನು ತೆಗೆಯಲಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ವೀಡಿಯೊದಲ್ಲಿ ಕಂಡುಬರುವ ಬೈಕ್ ಬಹುಶಃ ಕೆಟಿಎಂ ಆರ್ಸಿ 200 ಆಗಿದೆ. ಈ ವೀಡಿಯೊದಲ್ಲಿ, ಮೋಟಾರು ವಾಹನ ಇಲಾಖೆಯ ಅಧಿಕಾರಿಯು ಹೇಳುವುದನ್ನು ಕೇಳಬಹುದು, ಇಂತಹ ಸಂಚಾರಿ ನಿಯಮ ಉಲ್ಲಂಘನೆಗಳ ಬಗ್ಗೆ ನಿಗಾ ಇಡಲು ಅವರು ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿರುತ್ತಾರೆ.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ನಂಬರ್ ಪ್ಲೇಟ್ ಇಲ್ಲದಿದ್ದರೂ ಸ್ಥಳೀಯರಿಂದ ಸಹಾಯ ತೆಗೆದುಕೊಳ್ಳುವ ಮೂಲಕ ವಾಹನದ ಮಾಲೀಕರನ್ನು ಪತ್ತೆಹಚ್ಚಲು ಅವರು ಯೋಜಿಸಿದ್ದಾರೆ. ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುತ್ತಿದ್ದಾರೆ.

ಪೊಲೀಸ್ ಠಾಣೆ ಎದುರು ಸ್ಟಂಟ್ ಮಾಡಿ ಡಿಎಲ್ ಕಳೆದುಕೊಂಡ ಯುವಕ

ಸಂಚಾರಿ ಪೊಲೀಸರು ಸಿಸಿಟಿವಿಗಳ ಸಹಾಯದಿಂದ ಸ್ಟಂಟ್ ಮಾಡುವವರನ್ನು ಮಾತ್ರವಲ್ಲದೇ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಸಹ ಪತ್ತೆ ಹಚ್ಚಿ ದಂಡ ವಿಧಿಸುವುದು ಅಥವಾ ಇತರ ಸೂಕ್ತ ಕ್ರಮಗಳನ್ನು ಕೈಗೊಳುತ್ತಾರೆ.

Image Courtesy: Manorama News

Most Read Articles

Kannada
English summary
KTM Rider License Suspended For Stunting In Front Of A Police Station. Read In Kannada.
Story first published: Thursday, April 29, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X