ಜೀವಕ್ಕೆ ಬೆಲೆಯಿಲ್ಲವೇ? ಜೋರಾಯ್ತು ಕಳ್ಳರ ಅಟ್ಟಹಾಸ... ಸವಾರರೇ ಕೈಲಾದರೆ ಕಳ್ಳರನ್ನೇ ಕೆಳಗುರುಳಿಸಿ!

ಟಿವಿಎಸ್ ಅಪಾಚೆ ಬೈಕ್‌ನಲ್ಲಿ ಬಂದ ಕಳ್ಳರ ಗುಂಪೊಂದು ರಸ್ತೆಯಲ್ಲಿ ಸ್ಕೂಟರ್ ಸವಾರನ ಮೊಬೈಲ್ ಫೋನ್ ಕದ್ದು ಪರಾರಿಯಾದ ದೃಶ್ಯಗಳು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿವೆ. ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇಶದ ವಿವಿಧೆಡೆ ದರೋಡೆ ಮತ್ತು ವಾಹನ ಕಳ್ಳತನದ ಕುರಿತು ನಾವು ನಿತ್ಯ ವರದಿಗಳನ್ನು ನೋಡುತ್ತೇವೆ. ಇದನ್ನು ತಡೆಗಟ್ಟಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಆದರೂ ಪ್ರತಿದಿನ ದರೋಡೆ, ಕಳ್ಳತನಗಳು ನಡೆಯುತ್ತಲೇ ಇವೆ. ನಿಲ್ಲಿಸಿದ ಕಾರುಗಳು ಅಥವಾ ಬೈಕ್‌ಗಳನ್ನು ರಸ್ತೆಗಳಿಂದ ಕದಿಯಲಾಗುತ್ತಿದೆ. ಕೆಲವೆಡೆ ಕಳ್ಳರು ಸಿಕ್ಕಿಬಿದ್ದರೆ, ಹಲವೆಡೆ ತಪ್ಪಿಸಿಕೊಂಡವರೆ ಹೆಚ್ಚು.

bikers-theft-moving-scooterist-mobile-video-viral

ಇದೀಗ ಹೊಸ ರೀತಿಯ ಕಳ್ಳತನಗಳು ಹೆಚ್ಚಾಗಿವೆ, ವಾಹನ ಸವಾರರು ಚಾಲನೆಯಲ್ಲಿರುವಾಗಲೇ ಮೊಬೈಲ್‌ ಫೋನ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಕಳ್ಳತನ ಟಾಟಾ ಹ್ಯಾರಿಯರ್‌ನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವೀಡಿಯೋದಲ್ಲಿ ಟಿವಿಎಸ್ ಅಪಾಚೆ ಬೈಕ್ ಸವಾರ ಸೇರಿದಂತೆ ಮೂರು ಮಂದಿ ಹೆಲ್ಮೆಟ್ ಧರಿಸಿದೆ ರಸ್ತೆಯಲ್ಲಿ ಮನಬಂದಂತೆ ವರ್ತಿಸಿರುವುದನ್ನು ನೋಡಬಹುದು.

ದೃಶ್ಯಗಳು ರಾತ್ರಿಯಲ್ಲಿ ರೆಕಾರ್ಡ್ ಆಗಿರುವುದರಿಂದ ವೀಡಿಯೊ ಸ್ಪಷ್ಟತೆ ಸಾಕಷ್ಟು ಕಳಪೆಯಾಗಿದೆ. ನಾವು ರಸ್ತೆಯಲ್ಲಿ ಹಲವು ವಾಹನಗಳನ್ನು ನೋಡಬಹುದು. ಎಡಭಾಗದಲ್ಲಿರುವ ಅಪಾಚೆ ರೈಡರ್ ನಿಧಾನವಾಗಿ ಲೇನ್ ಬದಲಾಯಿಸುತ್ತಿದ್ದಂತೆ ಹಿಂಬದಿಯಿದ್ದವರಲ್ಲಿ ಒಬ್ಬ ಅಕ್ಕಪಕ್ಕ ವಾಹನಗಳನ್ನು ಪರಿಶೀಲಿಸುವುದನ್ನು ಕಾಣಬಹುದು. ಯಾವುದೇ ವಾಹನ ಬರುತ್ತಿಲ್ಲ ಎಂದು ತಿಳಿದು ಬೈಕ್ ಲೇನ್ ಬದಲಾಯಿಸಿ ತಕ್ಷಣ ಸ್ಕೂಟರ್ ಸವಾರ ಇದ್ದ ಲೇನ್ ಕಡೆಗೆ ಚಲಿಸುತ್ತಾರೆ.

bikers-theft-moving-scooterist-mobile-video-viral

ಈ ವೇಳೆ ಅಕ್ಕಪಕ್ಕದ ಎಲ್ಲಾ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು, ಇತ್ತ ಸ್ಕೂಟರ್ ಸವಾರ ಸವಾರಿ ಮಾಡುತ್ತಾ ತನ್ನ ಫೋನ್ ನೋಡುತ್ತಿದ್ದ. ಆತನ ಪಕ್ಕದಲ್ಲಿದ್ದ ಬೈಕ್ ಅನ್ನು ಗಮನಿಸಲಿಲ್ಲ. ಅಪಾಚೆ ಸವಾರನು ಸ್ಕೂಟರ್ ಸವಾರನ ಹತ್ತಿರಕ್ಕೆ ಬರುತ್ತಿದ್ದಂತೆ ಹಿಂಬದಿಯಿದ್ದವನು ಸ್ಕೂಟರ್ ಸವಾರನ ಫೋನ್ ಕಸಿದುಕೊಂಡಿದ್ದಾನೆ. ಫೋನ್ ಕಿತ್ತುಕೊಂಡ ತಕ್ಷಣ ಸವಾರ ಗಾಬರಿಗೊಂಡು ಬ್ಯಾಲೆನ್ಸ್ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದಾನೆ.

ಇವೆಲ್ಲಾ ಕ್ಷಣ ಮಾತ್ರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಹಿಂದೆ ಬರುತ್ತಿದ್ದ ಎಲ್ಲಾ ವಾಹನಗಳು ವೇಗದ ಮಿತಿಗಳನ್ನು ಅನುಸರಿಸುತ್ತಿದ್ದರಿಂದ ಯಾವುದೇ ಅನಾಹುತ ನಡೆದಿಲ್ಲ. ವಾಹನಗಳೆಲ್ಲವು ಸಮಯಕ್ಕೆ ಸರಿಯಾಗಿ ನಿಂತವು. ಇಡೀ ಘಟನೆ ವಿಡಿಯೋದಲ್ಲಿ ದಾಖಲಾಗಿದ್ದು, ಇದು ಕಳ್ಳರ ಯೋಜಿತ ನಡೆ ಎಂಬುದು ಸ್ಪಷ್ಟವಾಗಿದೆ. ಸ್ಕೂಟರ್ ಸವಾರನ ಮೇಲೆ ಕಣ್ಣಿಟ್ಟಿರಬೇಕು, ಅವಕಾಶ ಸಿಕ್ಕಾಗ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

bikers-theft-moving-scooterist-mobile-video-viral

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇದರಲ್ಲಿ ಸ್ಕೂಟರ್ ಸವಾರನ ತಪ್ಪೂ ಇದೆ. ದ್ವಿಚಕ್ರ ವಾಹನದಲ್ಲಿ ಹೋಗುವಾಗ ಮೊಬೈಲ್ ಫೋನ್ ಬಳಸುತ್ತಿದ್ದ. ಇದು ನಿಯಮಗಳ ಉಲ್ಲಂಘನೆಯಾಗಿದೆ, ಅದೃಷ್ಟವಶಾತ್ ಆತ ಗಾಯಗೊಂಡಿಲ್ಲ. ಆತನ ಹಿಂದೆ ಬಂದ ಯಾವುದೇ ವಾಹನಕ್ಕೆ ಡಿಕ್ಕಿಯಾಗಿಲ್ಲ. ಇನ್ನು ಕಳ್ಳರಿಗೆ ಯಾವುದೇ ಕಾರಣಕ್ಕೂ ಇಂತಹ ಅವಕಾಶಗಳನ್ನು ಕೊಡಬೇಡಿ, ಕೈಲಾದರೆ ಅವರನ್ನೇ ಕೆಳಗೆ ಬೀಳಿಸಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 18, 2023, 13:03 [IST]
English summary
Bikers theft moving scooterist mobile video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+