ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಆಟ-ಪಾಠಗಳೊಂದಿಗೆ ಎಲ್ಲರೊಂದಿಗೆ ನಲಿಯಬೇಕಿದ್ದ ಆ ಪುಟ್ಟ ಹುಡುಗಿಯ ಬದುಕು ಎಲ್ಲರಂತಿರಲಿಲ್ಲ. ಮಕ್ಕಳ ಜೊತೆ ಆಡಿ ನಲಿಯುವ ವಯಸ್ಸಿನಲ್ಲಿ ಚಿಂದಿಆಯುವ ಮೂಲಕ ಬೀದಿ ಸುತ್ತುತ್ತ ಹೊಟ್ಟೆ ಹರಿಯುವುದೇ ಒಂದು ದೊಡ್ಡ ಕೆಲಸವಾಗಿತ್ತು.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಆದರೆ ಆಕೆಯ ಜೀವನದಲ್ಲಿ ಕೆಲವು ಬದಲಾವಣೆಗಳು ಇಂದು ಆ ಮಹಿಳೆಯನ್ನು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

13ನೇ ವಯಸ್ಸಿನಲ್ಲಿ ಹರಿದ ಬಟ್ಟೆಯೊಂದಿಗೆ ನಾಸಿಕ್ ನಗರದ ಬೀದಿ ಬೀದಿಗಳಲ್ಲಿ ಅಲೆಯುತ್ತಾ ಮತ್ತು ನಂತರ ವಿಶ್ವಸಂಸ್ಥೆಯಲ್ಲಿ 2010ರ ಯುಎನ್ ಹವಾಮಾನ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿಡಿಯೋ ಜರ್ನಲಿಸ್ಟ್ ಮಾಯಾ ಮುಕ್ತಿ ಜೀವನದ ಯೋಶೋಗಾಥೆಗೆ ಮೆಚ್ಚೆಗೆಯ ಮಾಹಾಪೂರವೇ ಹರಿದುಬರುತ್ತಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಮಾಯಾ ಮುಕ್ತಿ ಜೀವನದ ಯೋಶೋಗಾಥೆ ಕುರಿತಂತೆ ಮುಂಬೈನ ಜನಪ್ರಿಯ ಪತ್ರಿಕೆ ಮಿಡ್-ಡೇ ಪ್ರಕಟಿಸಿದ ವರದಿಯು ಇದೀಗ ಸಾಕಷ್ಟು ಚರ್ಚೆಯಾಗುತ್ತಿದ್ದು, ಬಡತನದ ಬೇಗೆಯಲ್ಲಿ ನೊಂದು ಬೆಂದ ಮಾಯಾ ಮುಕ್ತಿ ಅಪರಿಚಿತರ ಸಹಾಯದೊಂದಿಗೆ ಓದು ಕಲಿತು ಇದೀಗ ಸುದ್ದಿವಾಹಿನಿವೊಂದರ ವಿಡಿಯೋ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಆಡಿ ನಲಿಯುವ ವಯಸ್ಸಿಯಲ್ಲಿಯೇ ಮದುವೆಯಾಗಿದ್ದ ಮಾಯಾ ಮುಕ್ತಿ ಮುಂದೊಂದು ದಿನ ಶಿಕ್ಷಣ ಕಲಿತು ಸುದ್ದಿವಾಹಿನಿಯೊಂದಲ್ಲಿ ಕೆಲಸ ಗಿಟ್ಟಿಸಿಕೊಂಡರೂ ತನ್ನವರ ಬದುಕಿನ ಕುರಿತಾಗಿ ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಗಮನಸೆಳೆಯುತ್ತಿದ್ದಾರೆ. ಇದಕ್ಕಾಗಿ ಮಾಯಾ ಮುಕ್ತಿ ಅವರು ನಾಸಿಕ್ ನಗರದ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಯಾಣಿಸುವುದು ಅಲ್ಲಿ ಚಿಂದಿಆಯುವ ಜನರ ಸಂಕಷ್ಟಗಳ ಕುರಿತಾಗಿ ಸರಣಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಆದರೆ ವರದಿಗೆ ತೆರಳಲು ಇರುವ ಸಮಸ್ಯೆಗಳ ಕುರಿತಾಗಿ ಮಿಡ್-ಡೇ ಪತ್ರಿಕೆಯ ಜೊತೆ ಹಂಚಿಕೊಂಡಿದ್ದ ವರದಿಯು ಸಾಕಷ್ಟು ವೈರಲ್ ಆಗುತ್ತಿದ್ದು, ಪತ್ರಿಕೆ ವರದಿಯನ್ನು ಆಧರಿಸಿ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಸೈರಸ್ ಪೂನಾವಾಲಾ ಅವರು ಮಾಯಾ ಮುಕ್ತಿ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಹೊಸ ಕಾರನ್ನು ಉಡುಗೊರೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ನಿರ್ಭಿತಿಯಿಂದ ವರದಿಗಳನ್ನು ಮುಂದುವರಿಸಲು ಮತ್ತು ಸರಿಯಾದ ಸಮಯಕ್ಕೆ ವರದಿಗೆ ತೆರಳಲು ಸಹಕಾರಿಯಾಗುವಂತೆ ಮಾಯಾ ಮುಕ್ತಿ ಅವರಿಗೆ ಉದ್ಯಮಿ ಸೈರಸ್ ಪೂನಾವಾಲಾ ಮಾರುತಿ ಸುಜುಕಿ ನಿರ್ಮಾಣದ ಎಸ್-ಪ್ರೆಸ್ಸೊ ಕಾರನ್ನು ಉಡುಗೊರೆ ನೀಡಿ ಅಭಿನಂದೆಗಳನ್ನು ತಿಳಿಸಿದ್ದಾರೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ವರದಿಗೆ ತೆರಳಲು ಪ್ರತಿ ಬಾರಿಯೂ ಖಾಸಗಿ ವಾಹನಗಳಲ್ಲಿ ಇಲ್ಲವೆ ಸಾರ್ವಜನಿಕ ಬಸ್‌ಗಳನ್ನು ಅವಲಂಭಿಸಿದ್ದ ಮಾಯಾ ಮುಕ್ತಿಗೆ ಇದೀಗ ಸೈರಸ್ ಪೂನಾವಾಲಾ ನೀಡುವ ಎಸ್‌-ಪ್ರೆಸ್ಸೊ ಕಾರು ಸಾಕಷ್ಟು ಸಹಕಾರಿಯಾಗುವ ಬಗೆಗೆ ಮಾಹಾ ಮುಕ್ತಿ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಇನ್ನು ಮಾಹಾ ಮಕ್ತಿ ಅವರಿಗೆ ನೀಡಲಾಗಿರುವ ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಎಂಟ್ರಿ ಲೆವಲ್ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕಾರು ಮಾದರಿಯಾಗಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

2022ರ ಎಸ್-ಪ್ರೆಸ್ಸೊ ಮಾದರಿಯು ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಕೈಗೆಟುಕುವ ಬೆಲೆಯೊಂದಿಗೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಎಸ್-ಪ್ರೆಸ್ಸೊ ಮಾದರಿಯು ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಹ್ಯಾಚ್‌ಬ್ಯಾಕ್ ಮಾದರಿಗಳಿಂತಲೂ ವಿಭಿನ್ನವಾದ ವಿನ್ಯಾಸ ಹೊಂದಿದ್ದು, ಇದೀಗ ಹೊಸ ಮಾದರಿಯೊಂದಿಗೆ ಕಂಪನಿಯು ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಮಾರುತಿ ಸುಜುಕಿ ಹಾರ್ಟ್‌ಟೆಕ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಂಡಿರುವ ಹೊಸಕಾರು ಮಾದರಿಯು ಈ ಬಾರಿ ಹೊಸ ತಲೆಮಾರಿನ ವೈಶಿಷ್ಟ್ಯತೆಯ ಕೆ10ಸಿ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯವು ಟ್ರಾಫಿಕ್ ದಟ್ಟಣೆಯಲ್ಲಿ ಕಾರು ನಿಲುಗಡೆ ಸಂದರ್ಭದಲ್ಲಿ 30 ಸೆಕೆಂಡುಗಳಿಗೂ ಹೆಚ್ಚು ಕಾಲ ಕಾರು ನಿಲುಗಡೆ ಮಾಡಿದ್ದಲ್ಲಿ ಎಂಜಿನ್ ಅನ್ನು ಆಟೋಮ್ಯಾಟಿಕ್ ಆಗಿ ನಿಷ್ಕ್ರಿಯಗೊಳಿಸುವ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆಯುತ್ತದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಈ ಮೂಲಕ ಹೊಸ ಕಾರು ಮಾದರಿಯು ಬೆಸ್ಟ್ ಇನ್ ಸೆಗ್ಮೆಂಟ್ ಮೈಲೇಜ್ ಖಾತ್ರಿಪಡಿಸಲಿದ್ದು, ಮ್ಯಾನುವಲ್ ಮತ್ತು ಎಜಿಎಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇದು ಪ್ರತಿ ಲೀಟರ್‌ಗೆ 25.3 ಕಿ.ಮೀ ಮೈಲೇಜ್ ನೀಡುತ್ತದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಹಾಗೆಯೇ ಹೊಸ ಕಾರಿನಲ್ಲಿರುವ ಹೊಸ ತಾಂತ್ರಿಕ ಸೌಲಭ್ಯಗಳು ಗಮನಸೆಳೆಯಲಿದ್ದು, ಹೊಸ ಕಾರಿನ ಮುಂಭಾಗದಲ್ಲಿರುವ ಟ್ವಿನ್ ಚೆಂಬರ್ ಹೆಡ್‌ಲ್ಯಾಂಪ್, ಸ್ಪೋಟಿಯಾಗಿರುವ ಫ್ರಂಟ್ ಫಾಸಿಯಾ ಆಕರ್ಷಕವಾಗಿವೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಹೊರಭಾಗದಲ್ಲಿನ ಬದಲಾವಣೆ ಜೊತೆಗೆ ಕಾರಿನ ಒಳಭಾಗದಲ್ಲೂ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಡೈನಾಮಿಕ್ ಸೆಂಟರ್ ಕನ್ಸೊಲ್ ಜೊತೆ ಸ್ಮಾರ್ಟ್ ಪ್ಲೇ ಬೋರ್ಡ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಎಲೆಕ್ಟ್ರಿಕ್ ಅಡ್ಜೆಸ್ಟ್ ಹೊಂದಿರುವ ರಿಯಲ್ ವ್ಯೂ ಮಿರರ್, ಸ್ಟಿರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕನ್ಸೊಲ್ ನೀಡಲಾಗಿದ್ದು, ಹಿಂಬದಿಯ ಸವಾರರಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಉತ್ತಮವಾದ ಲೆಗ್‌ರೂಂ ಜೊತೆಗೆ ಹೆಚ್ಚಿನ ಲಗೇಜ್ ತುಂಬಲು ವಿಸ್ತರಿತ ಬೂಟ್ ಸ್ಪೆಸ್ ನೀಡಿದೆ.

ಚಿಂದಿಆಯುವ ಮಹಿಳೆ ಇಂದು ಪತ್ರಕರ್ತೆ: ಮಹಿಳೆಯ ಯಶೋಗಾಥೆ ಮೆಚ್ಚಿ ಉಡುಗೊರೆ ನೀಡಿದ ಸೈರಸ್ ಪೂನಾವಾಲಾ

ಇನ್ನು ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 11ಕ್ಕೂ ಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಎಸ್-ಪ್ರೆಸ್ಸೊ ಖರೀದಿದಾರರಿಗೆ ಈ ಬಾರಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಿದೆ.

Most Read Articles

Kannada
English summary
Billionaire cyrus poonawalla gifted maruti s presso to journalist maya mukti
Story first published: Saturday, August 27, 2022, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X