ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

By Nagaraja

ಬ್ರಿಟನ್‌ನ ವೇಲ್ಸ್ ನಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಹಳೆಯ ಗಣಿಗಾರಿಕೆಯೊಂದರಲ್ಲಿ 50 ವರ್ಷಗಳಷ್ಟು ಹಿಂದಿನ ಕಾರುಗಳ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

Also Read: ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

100ಕ್ಕೂ ಹೆಚ್ಚು ಕಾರುಗಳು ಮತ್ತು ಅವುಗಳ ಅವಶೇಷಗಳು ಇಲ್ಲಿನ ಗಣಿಗಾರಿಕೆಯಲ್ಲಿ ಪತ್ತೆಯಾಗಿದ್ದು, ಇತಿಹಾಸ ತಜ್ಞರು ಇದರ ರಹಸ್ಯವನ್ನು ಬೇಧಿಸುವ ಪ್ರಯತ್ನದಲ್ಲಿ ಮಗ್ನವಾಗಿದ್ದಾರೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಹಳೆಯ ಕಾರುಗಳ ಬಿಡಿಭಾಗಗಳನ್ನು ಹುಡುಕಾಡುತ್ತಿರುವ ವಾಹನ ಪ್ರೇಮಿಗಳು ಬ್ರಿಟನ್ ನ ವೇಲ್ಸ್ ನಲ್ಲಿ ಸ್ಥಿತಗೊಂಡಿರುವ ಗಣಿಗೊಮ್ಮೆ ಭೇಟಿ ಕೊಟ್ಟರೆ ಸಾಕು. ಇಲ್ಲಿ ಪಾಳು ಬಿದ್ದಿರುವ ಚಿತ್ತಾಕರ್ಷಕ ಕಾರುಗಳು ನಿಮ್ಮನ್ನು ಮೈ ಬೀಸಿ ಕರೆಯಲಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಇಲ್ಲಿನ ನಿಗೂಢ ಪ್ರದೇಶಕ್ಕೆ ಭೇಟಿ ಕೊಡುವ ಜನರ ಸಂಖ್ಯೆ ಅತ್ಯಂತ ವಿರಳವಾಗಿದೆ. ಈ ನಡುವೆ ಸಾಹಸ ಯಾತ್ರೆ ಕೈಗೊಂಡಿರುವ ಅರ್ಬನ್ ಎಕ್ಸ್ ಪ್ಲೋರರ್ ತಂಡವೀಗ ರಹಸ್ಯವನ್ನು ಹೊರ ಜಗತ್ತಿಗೆ ಬಿಚ್ಚಿಡುವಲ್ಲಿ ಯಶಸ್ವಿಯಾಗಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಸುಮಾರು 200 ಅಡಿಯಷ್ಟು ಆಳದಲ್ಲಿ ಈ ಗಣಿ ಪ್ರದೇಶ ನೆಲೆ ಗೊಂಡಿದ್ದು, ಹಗ್ಗದ ನೆರವಿನೊಂದಿಗೆ ಕೆಳಗಡೆ ಇಳಿಯಬೇಕಾಗುತ್ತದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

1960ರಲ್ಲಿ ಇಲ್ಲಿನ ಗಣಿಗಾರಿಕೆಗೆ ಮಟ್ಟ ಹಾಕಲಾಗಿತ್ತು. ತಜ್ಞರ ಪ್ರಕಾರ 1830ರ ದಶಕದಿಂದಲೇ ಇಲ್ಲಿ ಗಣಿಗಾರಿಕೆ ಕೆಲಸವನ್ನು ಆರಂಭಿಸಲಾಗಿತ್ತು.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಅಂದ ಹಾಗೆ 50 ವರ್ಷಕ್ಕೂ ಹಳೆಯದಾದ ಕಾರುಗಳನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ. ಕೆಳಗಡೆಯ ಪ್ರದೇಶವೂ ದೊಡ್ಡದಾದ ಗುಹೆಯಂತಿದ್ದು, ಮತ್ತಷ್ಟು ನಿಗೂಢತೆಗೆ ಸಾಕ್ಷಿಯಾಗಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ತಳಮಟ್ಟದಲ್ಲಿ ಸಂಶೋಧನೆ ನಡೆಸುವುದು ಸುರಕ್ಷಿತವಲ್ಲ. ಯಾಕೆಂದರೆ ಎರಡು ಕಡೆಗಳಿಂದಲೂ ಕಾರಿನ ಅವಶೇಷಗಳು ಒಂದೊಂದಾಗಿ ಧರಾಶಾಯಿಯಾಗುತ್ತಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಹಲವಾರು ರಹಸ್ಯಗಳನ್ನು ಬಚ್ಚಿಟ್ಟಿರುವ ಇಲ್ಲಿನ ಪರ್ವತರೂಢ ಗಣಿ ಪ್ರದೇಶವು ಅನೇಕ ಕುತೂಹಲಗಳಿಗೆ ಕಾರಣವಾಗಿದ್ದು, ಈಗಲೂ ನಿಗೂಢತೆ ಕಾಪಾಡಿಕೊಂಡಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಇಲ್ಲಿನ ಅಸಾಮಾನ್ಯ ಪರ್ವತದ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆಯೇ ಇತಿಹಾಸ ತಜ್ಞರ ದಂಡೇ ಸವಾಲನ್ನು ಸ್ವೀಕರಿಸಲು ಸಜ್ಜಾಗಿ ನಿಂತಿದೆ.

ವೇಲ್ಸ್ ಗಣಿಯಲ್ಲಿ ನಿಗೂಢ ಕಾರುಗಳ ಅವಶೇಷಗಳು ಪತ್ತೆ

ಒಟ್ಟಿನಲ್ಲಿ ಕತ್ತಲೆಯ ಕಾರ್ಮೋಡದ ನಡುವೆಯೂ ಇಲ್ಲಿನ ರಹಸ್ಯ ಬೇಧಿಸಲು ಹೊರಟಿರುವ ತಂಡದ ಸಾಹಸಗಾಥೆಗೆ ಶಭಾಷ್ ಹೇಳಲೇ ಬೇಕು.

ಇವನ್ನೂ ಓದಿ

01. ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ

02. ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು

More from DriveSpark

Article Published On: Thursday, February 25, 2016, 11:06 [IST]
English summary
Bizarre car graveyard found in Wales
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+