ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿ ಕಾರು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಮೋಟಾರ್ ಕಂಪನಿಯ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಗ್ಲೊಸ್ಟರ್ ಎಸ್‍ಯುವಿಯು ಸಹ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಕೂಡಾ ಇತ್ತೀಚೆಗೆ ಎಂಜಿ ನಿರ್ಮಾಣದ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಶಾಸಕರು ತಮ್ಮ ಟ್ವಿಟರ್ ಖಾತೆಯಲ್ಲಿ ಗೊಸ್ಟರ್ ಎಸ್‍ಯುವಿ ವಿತರಣೆ ಪಡೆಯುವ ಚಿತ್ರದೊಂದಿಗೆ 'ನಮ್ಮ ಮನೆಯ ಹೊಸ ಸದಸ್ಯ' ಎಂದು ಟ್ವಿಟ್ ಮಾಡಿ ಗಮನಸೆಳೆದಿದ್ದಾರೆ. ಎಂಜಿ ಗ್ಲೊಸ್ಟರ್ ಮಾದರಿಯು ಭಾರತದಲ್ಲಿ ಮಾರಾಟವಾಗುವ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಅತ್ಯುತ್ತಮ ಫೀಚರ್ಸ್‌ನೊಂದಿಗೆ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ. 37.63 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯು ರೂ. 44.60 ಲಕ್ಷ ಬೆಲೆ ಹೊಂದಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೊಸ್ಟರ್ ಕಾರು ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎಂಬ ನಾಲ್ಕು ವೆರಿಯೆಂಟ್ ಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಆಯ್ಕೆ ಮಾಡಬಹುದು.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೊಸ್ಟರ್ ಎಸ್‍ಯುವಿ ಕಾರು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಇದು 2.0-ಲೀಟರ್ ಸಿಂಗಲ್ ಟರ್ಬೊ ಡೀಸೆಲ್ ಮತ್ತು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ಗಳಾಗಿದೆ. 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಅನ್ನು ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ಲಭ್ಯವಿರುತ್ತದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಈ ಎಂಜಿನ್ 215 ಬಿಹೆಚ್‍ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ ಸ್ಟ್ಯಾಂಡರ್ಡ್‌ ಆಗಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೊಸ್ಟರ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಅಳವಡಿಸಲಾಗಿದೆ. ಈ ಹೊಸ ಎಸ್‍ಯುವಿಯಲ್ಲಿ ಅಟೊನೊಮಸ್ ಲೆವಲ್ 1 ಫೀಚರ್ಸ್‌ಗಳಾದ ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್(ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸಿಸ್ಟಂ ಅನ್ನು ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಇನ್ನು ಈ ಎಸ್‍ಯುವಿಯಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್ ಮತ್ತು ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಒಳಗೊಂಡಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಒಳಭಾಗದಲ್ಲಿ ಲೆದರ್ ಸೀಟ್ ಮತ್ತು ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್ ಅನ್ನು ಅಳವಡಿಸಲಾಗಿದೆ. ಇನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಿದ್ದು, ಇದರಲ್ಲಿ ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ ಅನ್ನು ಹೊಂದಿದೆ.

ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಖರೀದಿಸಿದ ಶಾಸಕ ರೇಣುಕಾಚಾರ್ಯ

ಎಂಜಿ ಗ್ಲೋಸ್ಟರ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂಜಿ ಗ್ಲೊಸ್ಟರ್ ತನ್ನ ಪ್ರತಿಸ್ಪರ್ಧಿಗಳಾದ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Mla Renukacharya Buys New Mg Gloster Suv. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X