ಇನ್ನು ಕೆಲ ದಿನಗಳಲ್ಲಿ ಕಣ್ಮರೆಯಾಗಲಿವೆ ಕಪ್ಪು-ಹಳದಿ ಟ್ಯಾಕ್ಸಿಗಳು
1980ರ ದಶಕದಲ್ಲಿ ಮುಂಬೈನಲ್ಲಿ ಕಪ್ಪು-ಹಳದಿ ಟ್ಯಾಕ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದವು. ಈ ಟ್ಯಾಕ್ಸಿಗಳು ಮುಂಬೈನ ಪ್ರಮುಖ ಭಾಗವಾಗಿದ್ದವು. ಮುಂಬೈನಲ್ಲಿ ಈ ಟ್ಯಾಕ್ಸಿಗಳನ್ನು 1974ರಲ್ಲಿ ಆರಂಭಿಸಲಾಯಿತು.

ಅಂದಿನಿಂದ ಈ ಟ್ಯಾಕ್ಸಿಗಳು ನಾಲ್ಕು ದಶಕಗಳ ಕಾಲ ಮುಂಬೈನಲ್ಲಿ ವಲಸಿಗರು ಸೇರಿದಂತೆ ಹಲವಾರು ಜನರಿಗೆ ರೆಸಾರ್ಟ್ ಆಗಿ ಮಾರ್ಪಟ್ಟಿವೆ. ಈಗ ಮುಂಬೈನಲ್ಲಿ ಈ ಟ್ಯಾಕ್ಸಿಗಳ ಸಂಚಾರವನ್ನು ತೆಗೆದುಹಾಕಲು ಅಲ್ಲಿನ ಸರ್ಕಾರವು ನಿರ್ಧರಿಸಿದೆ. ಕೇವಲ ಬೆರಳೆಣಿಕೆಯಷ್ಟು ಮಾತ್ರ ಉಳಿದಿರುವ ಟ್ಯಾಕ್ಸಿಗಳನ್ನು 2020ರ ಜುಲೈ ಅಂತ್ಯದ ವೇಳೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಪ್ರೀಮಿಯರ್ ಪದ್ಮಿನಿ ಕಾರುಗಳೇ ಈ ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಗಳು. ಇವುಗಳು ಬರುವ ಮುನ್ನ ಮುಂಬೈನಲ್ಲಿ ಹಲವಾರು ಕಂಪನಿಗಳ ಟ್ಯಾಕ್ಸಿಗಳಿದ್ದವು. ಫಿಯೆಟ್ ಮಿಲೆಂಟೊ, ಲಲಿತಗಳು ಮುಂಬೈನಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿದ್ದವು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

60ರ ದಶಕದ ಅಂತ್ಯದಲ್ಲಿ ಫಿಯೆಟ್ ಸೂಪರ್ ಸೆಲೆಕ್ಟ್ ಹಾಗೂ ಫಿಯೆಟ್ 1100 ಕಾರುಗಳನ್ನು ಟ್ಯಾಕ್ಸಿಗಳಾಗಿ ಬಳಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಆಸ್ಟಿನ್ಸ್, ಹಿಲ್ಮನ್ ಮಿಂಕ್ಸ್ ಮಾರ್ಕ್ 3,ಫೋರ್ಡ್ಸ್ ಪರ್ಫೆಕ್ಟ್, ಸ್ಟ್ಯಾಂಡರ್ಡ್ ಸೂಪರ್ ಟೆನ್, ಚೆವ್ರೊಲೆಟ್ ಫ್ಲೀಟ್ ಮಾಸ್ಟರ್ ಹಾಗೂ ಪ್ಲೈಮೌತ್ ಪಿ -10 ಕಾರುಗಳನ್ನು ಟ್ಯಾಕ್ಸಿ ಸೇವೆ ನೀಡಲು ಬಳಸಲಾಯಿತು.

1972ರಲ್ಲಿ ಪ್ರೀಮಿಯರ್ ಪ್ರೆಸಿಡೆಂಟ್ ಹಾಗೂ 1974ರಲ್ಲಿ ಪ್ರೀಮಿಯರ್ ಪದ್ಮಿನಿ ಕಾರುಗಳನ್ನು ಬಳಸಲಾಯಿತು. 1994ರವರೆಗೆ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳು ಜನಪ್ರಿಯವಾಗಿದ್ದವು. ನಂತರ ಇವುಗಳ ಬದಲಿಗೆ 137 ಡಿಗಳನ್ನು ಬಳಸಲಾಯಿತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂಬೈನ ಟ್ಯಾಕ್ಸಿ ಡ್ರೈವರ್‌ಗಳು ಈ ಕಾರುಗಳಲ್ಲಿದ್ದ ಎಂಜಿನ್ ಬದಲಿಗೆ ಜಪಾನ್‌ನ ಹಳೆಯ ಎಂಜಿನ್‌ಗಳನ್ನು ಬಳಸಲು ಆರಂಭಿಸಿದರು. 1990ರ ವೇಳೆಗೆ ಡೀಸೆಲ್ ಎಂಜಿನ್ ಕಾರುಗಳು ಜನಪ್ರಿಯವಾದವು. ಬಳಸಿದ ಎಂಜಿನ್‌ಗಳಿಂದ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗುತ್ತಿತ್ತು.

ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಕಮರ್ಷಿಯಲ್ ಕಾರುಗಳಲ್ಲಿದ್ದ ಹಳೆಯ ಎಂಜಿನ್‌ಗಳ ಬಳಕೆಯನ್ನು ನಿಷೇಧಿಸಿತು. ಈ ಆದೇಶದ ನಂತರ ಹ್ಯುಂಡೈ ಸ್ಯಾಂಟ್ರೊದಂತಹ ಕಾರುಗಳು ಮುಂಬೈನ ಟ್ಯಾಕ್ಸಿ ಸೇವೆಯಲ್ಲಿ ಜನಪ್ರಿಯವಾದವು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ 1089 ಸಿಸಿಯ ಕಾರ್ಬ್ಯುರೇಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 40 ಬಿಹೆಚ್‌ಪಿ ಪವರ್ ಹಾಗೂ 83 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 4 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಹಿಂದಿನ ವ್ಹೀಲ್‌ಗಳಿಗೆ ಪವರ್ ಕಳುಹಿಸುತ್ತದೆ.

ಪ್ರೀಮಿಯರ್ ಪದ್ಮಿನಿ 27.4 ಸೆಕೆಂಡುಗಳಲ್ಲಿ 0 - 60 ಕಿಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 125 ಕಿ.ಮೀಗಳಾಗಿದೆ. 1974ರಲ್ಲಿ ಈ ಕಾರಿನ ಬೆಲೆ ರೂ.30,000ಗಳಾಗಿತ್ತು. ಈಗ ಒಳ್ಳೆಯ ಕಂಡಿಷನ್‌ನಲ್ಲಿರುವ ಪ್ರೀಮಿಯರ್ ಪದ್ಮಿನಿ ಕಾರಿನ ಬೆಲೆ ಸುಮಾರು ರೂ.2 ಲಕ್ಷಗಳಾಗುತ್ತದೆ.


Click it and Unblock the Notifications








