ನಮ್ಮ ಮೆಟ್ರೋದಲ್ಲಿ ಹುಚ್ಚಾಟ: ಮೂರ್ಛೆ ಹೋದವನಂತೆ ಪ್ರ್ಯಾಂಕ್ ಮಾಡಿದ ಯೂಟ್ಯೂಬರ್‌ಗೆ ಬಿತ್ತು ದಂಡ
ಸೋಶಿಯಲ್ ಮೀಡಿಯಾ ಜನರ ಜೀವನದ ಒಂದು ಭಾಗವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರೀಲ್ಸ್ ಹೆಸ್ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗ್ತಿದೆ. ಇತ್ತೀಚೆಗೆ ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮತ್ತು ಹಾಗೂ ಎಸ್ಕಲೇಟರ್ನಲ್ಲಿ ಯುವಕನೊಬ್ಬ ಮೂರ್ಛೆ ಬಂದವರಂತೆ ನಟಿಸಿ ಪ್ರಯಾಣಿಕರನ್ನು ಭೀತಿಗೊಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ಪ್ರ್ಯಾಂಕ್ ಪ್ರಜ್ಜು ಎಂಬಾತ ಮೆಟ್ರೋ ರೈಲಿನಲ್ಲಿ ಇದೀಗ ಹುಚ್ಚಾಟವಾಡಿದ್ದಾನೆ. ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲೂ ಈ ರೀತಿಯ ಹುಚ್ಚಾಟವಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವೀಡಿಯೊಕ್ಕೆ ಹೆಚ್ಚು ವಿವ್ಯೂ ಮತ್ತು ಫಾಲೋವರ್ಸ್ ಪಡೆಯಲು, ಜನರನ್ನ ಪ್ರ್ಯಾಂಕ್ ಮಾಡಿ ವೀಡಿಯೊ ಮಾಡುವುದು ಒಂದು ಟ್ರೆಂಡ್ ಆಗಿದೆ. ಪ್ರ್ಯಾಂಕ್ ಪ್ರಜ್ಜು ಎಂಬಾತ ಕೂಡ ಇದೇ ರೀತಿ ಜನರನ್ನು ಪ್ರ್ಯಾಂಕ್ ಮಾಡಿ ವೀಡಿಯೊವನ್ನು ಮಾಡುತ್ತಾರೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ (Namma Metro) ಪ್ರ್ಯಾಂಕ್ ಪ್ರಜ್ಜು ಎಂಬಾತ ವಿಜಯನಗರದಿಂದ ಮೆಜೆಸ್ಟಿಕ್ ಕಡೆಗೆ ಬರುವ ನೇರಳೆ ಬಣ್ಣದ ಮೆಟ್ರೋ ರೈಲಿನಲ್ಲಿ ಯೂಟ್ಯೂಬರ್ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಮೆಟ್ರೋ ಒಳಭಾಗದಲ್ಲಿ ಕಂಬಿ ಹಿಡಿದು ಶಾಕ್ ಹೊಡೆದವನಂತೆ ಮತ್ತು ಮೆಟ್ರೋ ನಿಲ್ದಾಣದ ಎಸ್ಕಲೇಟರ್ನಲ್ಲೂ ಮೂರ್ಛೆ ಬಂದಂತೆ ನಟಿಸಿ ಭೀತಿಗೊಳಿಸಿದ್ದಾನೆ.
ಚಲಿಸುತ್ತಿರುವ ಮೆಟ್ರೋದಲ್ಲಿ ಪ್ರ್ಯಾಂಕ್ ಪ್ರಜ್ಜು ಎಂಬಾತ ಮೂರ್ಛೆ ಬಂದವರಂತೆ ಪ್ರ್ಯಾಂಕ್ ಮಾಡಿದ್ದಾನೆ. ಮತ್ತೊಂದು ವೀಡಿಯೋದಲ್ಲಿ, ಎಸ್ಕಲೇಟರ್ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರಾಂಕ್ ಮಾಡಿದ್ದಾನೆ. ಈ ವೇಳೆ ವೃದ್ಧೆ ಗಾಬರಿಗೊಳ್ಳುವುದನ್ನು ಕಾಣಬಹುದು.ಇನ್ನು ಇತನ ಹುಚ್ಚಾಟ ನೋಡಿದ ಪ್ರಯಾಣಿಕರು ಶಾಕ್ ಆಗೋದನ್ನ ಹಿಡನ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿದ್ದಾನೆ.

ವಿಜಯನಗರ, ಮೆಜೆಸ್ಟಿಕ್ ಮಾರ್ಗ ಸೇರಿ ಹಲವೆಡೆ ಇದೇ ರೀತಿ ಪ್ರ್ಯಾಂಕ್ ಪ್ರಜ್ಜು ಕ್ಯಾಮೆರಾ ಹಿಡಿದು ಹುಚ್ಚಾಟವಾಡಿದ್ದಾನೆ. ಯುವಕನ ವಿಳಾಸವನ್ನ ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ, ಮೆಟ್ರೋದಲ್ಲಿ ಹುಚ್ಚಾಟವಾಡಿದ್ದಕ್ಕೆ ಪ್ರ್ಯಾಕ್ ಪ್ರಜುಗೆ 500ರೂ ದಂಡ ಕೂಡ ವಿಧಿಸಲಾಗಿದೆ.
ಇನ್ನು ನಮ್ಮ ಮೆಟ್ರೊದಲ್ಲಿ ಇತೀಚೆಗೆ ನಿಯಮಾವಳಿಗಳನ್ನು ಮೀರಿ ಗೋಬಿ ಮಂಚೂರಿ ಸೇವಿಸಿದ ವ್ಯಕ್ತಿಗೆ ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಹಾರ ಸೇವಿಸುವ ವಿಡಿಯೋ ಕಾಣಿಸಿಕೊಂಡ ನಂತರ, ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದು, ಬುದ್ದಿಹೇಳಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ದಂಡ ಕಟ್ಟಿರುವ ವ್ಯಕ್ತಿಯನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಜಯನಗರದ ಪ್ರತಿಷ್ಠಿತ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಕೆಲಸದ ನಿಮಿತ್ತ ಸಂಪಿಗೆ ರಸ್ತೆ - ಜಯನಗರ ನಡುವೆ ಮೆಟ್ರೊದಲ್ಲಿ ನಿತ್ಯ ಪ್ರಯಾಣಿಸುತ್ತಿದ್ದರೂ ಎಂಬ ವಿವರಗಳು ತಿಳಿದುಬಂದಿದೆ. ಸುನಿಲ್, ಮೆಟ್ರೊದಲ್ಲಿ ಗೋಬಿ ಮಂಚೂರಿ ತಿನ್ನುತ್ತಿರುವ ವಿಡಿಯೋವನ್ನು ಆತನ ಸ್ನೇಹಿತ ಚಿತ್ರೀಕರಿಸಿದ್ದಾನೆ. ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಧ್ವನಿ ಬಹುಶಃ ಆತನ ಸ್ನೇಹಿತನದ್ದು ಇರಬೇಕು. 'ಮೆಟ್ರೊದಲ್ಲಿ ಏನು ತಿನ್ನಬಾರದು ಅಂತ ಹೇಳುತ್ತಾರೆ. ಆದರೆ, ಈತ ಅಶಿಕ್ಷಿತ ಹೊರಗಿನ ಆಹಾರ ತಂದು ತಿನ್ನುತ್ತಿದ್ದಾನೆ' ಎಂದು ತಮಾಷೆಯಾಗಿ ಹೇಳಿದ್ದಾರೆ.
ನಂತರ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿ, ಮಂಗಳವಾರ ಗೋಬಿ ತಿಂದ ವ್ಯಕ್ತಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ರೂ.500 ವಿಧಿಸಿದ್ದಾರೆ. ಈ ಬಗ್ಗೆ ನಮ್ಮ ಮೆಟ್ರೋದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬಿಎಂಆರ್‌ಸಿಎಲ್ ಇಂತಹ ಕ್ರಮಕೈಗೊಂಡಿರುವುದು ಇದೇ ಮೊದಲು. ನಿಯಮಗಳ ಪ್ರಕಾರ, ಮೆಟ್ರೊದಲ್ಲಿ ಆಹಾರ ಸೇವಿಸಬಾರದು ಎಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications