ಊಟಕ್ಕೂ ಸಮಯವಿಲ್ಲ... ಬೆಂಗಳೂರು ಟ್ರಾಫಿಕ್ ಜಾಮ್​​ನಲ್ಲಿ ಊಟ ಮುಗಿಸಿದ ಬಿಎಂಟಿಸಿ ಡ್ರೈವರ್

ಸಿಲಿಕಾನ್ ಸಿಟಿ ಬೆಂಗಳೂರನ್ನು (Bengaluru) ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಬೀಳುವುದು ಟ್ರಾಫಿಕ್ ಜಾಮ್. ವಿಶ್ವದಲ್ಲಿಯೇ ಅತಿದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಗಳನ್ನು ನೋಡುತ್ತೇವೆ.

ಬೆಂಗಳೂರಿನಲ್ಲಿ ಬಸ್​ ಪ್ರಯಾಣ ಮಾಡುವುದದರಲ್ಲಿ ಸುಸ್ತಾಗಿಬಿಡುತ್ತೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿಕೊಂಡರೆ ಅಷ್ಟೇ ಕಥೆ. ಅದರಲ್ಲೂ ಬೆಂಗಳೂರಿನಲ್ಲಿ ಬಸ್ ನಲ್ಲಿ 10-15 ಕಿ.ಮೀ ಚಲಿಸಲು ಗಂಟೆಗಳೆ ಸಮಯ ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿಕೊಂಡಾಗ, ಡ್ರೈವರ್ ತಮ್ಮ ಸೀಟಿನಲ್ಲಿ ಊಟ ಮಾಡಿ ಮುಗಿಸಿರುವ ವೀಡಿಯೊ ವೈರಲ್ ಆಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಸಾಯಿಚಂದ್ ಶಬರೀಶ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್​​ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Bengaluru Traffic

ಬೆಂಗಳೂರಿನ ಟ್ರಾಫಿಕ್ ಕುಖ್ಯಾತಿ ಎಷ್ಟಿದೆ ಎಂದರೆ ಈಗಾಗಲೇ ಬೆಂಗಳೂರು ಟ್ರಾಫಿಕ್ ಜಾಮ್ ಕುರಿತು ಸಾಕಷ್ಟು ಟ್ರೋಲ್, ಜೋಕ್ ಗಳು ಮತ್ತು ಶಾರ್ಟ್ ಸ್ಟೋರಿ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸುತ್ತದೆ. ಈ ನಡುವೆ ಟ್ರಾಫಿಕ್ ನಲ್ಲಿ ಬಿಎಂಟಿಸಿ ಬಸ್ ಡ್ರೈವರ್ ಊಟ ಮಾಡುವ ವೀಡಿಯೊ ಸಖತ್ ವೈರಲ್ ಆಗಿದೆ. ಮೇ 2 ರಂದು 'ಬೆಂಗಳೂರಿನ ಪೀಕ್ ಟ್ರಾಫಿಕ್ ಮೊಮೆಂಟ್' ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇದಕ್ಕೆ ಹಲವಾರು ನಟ್ಟಿಗರು ಪ್ರತಿಕ್ರಿಯಿಸಿದ್ದು, ಬೆಂಗಳೂರು ಟ್ರಾಫಿಕ್‌ನಲ್ಲಿ ತಾವು ಪಟ್ಟ ಪಾಡನ್ನು ಕಾಮೆಂಟ್ ಮೂಲಕ ವಿವರಿಸಿದ್ದಾರೆ. ಇನ್ನೂ ಕೆಲವರು ಬಸ್ ಚಾಲಕರ ಕಷ್ಟದ ಬಗ್ಗೆ ಕರುಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಕೆಟ್ಟ ಟ್ರಾಫಿಕ್​ನಿಂದ ಚಾಲಕರಿಗೆ ಸರಿಯಾಗಿ ಊಟ ಮಾಡಲು ಸಮಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಟ್ರಾಫಿಕ್​ನಲ್ಲಿ ಸಿನಿಮಾ, ಸೀರಿಯಲ್ ನೋಡುವುದನ್ನು ನೋಡಿದ್ದೇವೆ. ಆದರೆ ಇವರು ಊಟ ಮಾಡಿದ್ದಾರೆಂದರ ಬಹಳ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಹೌದು, ಬೆಂಗಳೂರಿನ ಟ್ರಾಫಿಕ್ ಬಗ್ಗೆ ನೆನೆಯುವಾಗ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲಿಯೂ ಬಸ್​​ ಚಾಲಕರ ಪರಿಸ್ಥಿತಿ ಹೇಳೋದೆ ಬೇಡ. ಇನ್ನು ಬೆಂಗಳೂರಿನಲ್ಲಿ ಬಸ್ ನಲ್ಲಿ ಪ್ರಯಾಣಿಸವವರು ಸುಸ್ತಾಗಿಬಿಡುತ್ತಾರೆ. ಇದರಿಂದ ಬೇಸತ್ತು ಹಲವರು ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಟ್ರಾಫಿಕ್ ನಲ್ಲಿ ದ್ವಿಚಕ್ರ ವಾಹನಗಳು ಸ್ವಲ್ಫ ಸುಲಭವಾಗಿ ಹೋಗಬಹುದು.

ಇನ್ನು ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣದ ಅವಕಾಶವನ್ನು ಎದುರು ನೋಡುತ್ತಿರುವ ಹೊತ್ತಿನಲ್ಲೇ ಮಹಿಳೆಯರಿಗೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಸಚಿವರು ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ ಅಂದಾಜು 3,200 ಕೋಟಿ ರೂ. ಖರ್ಚು ಬೇಕಾಗುತ್ತದೆ. ಆದರೆ ಸಾರಿಗೆ 4 ನಿಗಮಗಳು ನಷ್ಟದಲ್ಲಿವೆ

ಸರ್ಕಾರ ಸಹಾಯಧನ ನೀಡಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿತ್ತು. ಅದನ್ನು ಸರಿದೂಗಿಸಲು ನಿಗಮದ ಕೆಲವು ಆಸ್ತಿಗಳನ್ನು ಅಡವಿಟ್ಟು ಸಾಲ ಪಡೆಯಲಾಗಿದೆ. ಈಗಾಗಲೇ ಹಲವು ನಿಗಮಗಳಿಂದ ಸಾವಿರಾರು ಕೋಟಿ ಹಣ ಬರಬೇಕಿದೆ ಎಂಉ ಸಚಿವರು ಎಂದರು. ಇದೇ ವೇಳೆ ಬಸ್‌ಗಳ ಮಾಹಿತಿ ಕೊಟ್ಟ ಅಧಿಕಾರಿಗಳು ಸಾಮಾನ್ಯ ಬಸ್‌ಗಳಲ್ಲಿ ಉಚಿತ ಬಸ್ ಸೇವೆ ಕಲ್ಪಿಸಿದರೆ ಆರ್ಥಿಕ ಹೊರೆಯಾಗಲಿದೆ.

ಇದರೊಂದಿಗೆ ಸಾರಿಗೆ ನಿಗಮಗಳು ಈ ಯೋಜನೆಯಿಂದ ಮತ್ತಷ್ಟು ನಷ್ಟ ಅನುಭವಿಸುವ ಆತಂಕವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳು ಬಹುಪಾಲು ನಷ್ಟದಲ್ಲೇ ನಡೆಯುತ್ತಿವೆ. ಹೀಗಿರುವಾಗ ಮತ್ತೆ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದಿಂದ ಮತ್ತಷ್ಟು ನಷ್ಟ ಅನುಭವಿಸಬಹುದು. ಇದನ್ನು ಭರಿಸುವ ವ್ಯವಸ್ಥೆ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ.

Article Published On: Wednesday, May 31, 2023, 15:05 [IST]
English summary
Bmtc bus driver finished his lunch in traffic jam video viral details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+