ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಬೈಕ್ ರೈಡಿಂಗ್ ಕ್ರೇಜ್ ಇರುವವರು ಹೆಚ್ಚಾಗಿ ಅಡ್ವೆಂಚರ್ ಆಗಿರುವ ದಾರಿಗಳಲ್ಲಿ ಸಾಗಲು ಇಷ್ಟಪಡುತ್ತಾರೆ. ಇಂತಹ ಬೈಕ್ ರೈಡಿಂಗ್ ಕ್ರೇಜ್ ಇರುವ ಹೆಚ್ಚಿನವರು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಕಣಿವೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಕಣಿವೆ ಅತ್ಯಂತ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿಯ ಕಣಿವೆಗಳ ನಡುವೆ ಹೋಗುತ್ತಿದ್ದರೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ. ಇಂತಹ ಅದ್ಭುತ ಮತ್ತು ಅಡ್ವೆಂಚರ್ ಆದ ದಾರಿಯಲ್ಲಿ ಸಾಗುವಾಗ ಐಷಾರಾಮಿ ಬಿಎಂಡಬ್ಲ್ಯು 1250 ಜಿಎಸ್ ಬೈಕ್ ಸಿಲುಕಿಕೊಂಡಿದೆ. ಈ ಐಷಾರಾಮಿ ಬೈಕ್ ಕೇಸರಿನಲ್ಲಿ ಸಿಲುಕಿಕೊಂಡಿರುವ ಅಡ್ವಂಚರ್ ಬೈಕಿನ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿನ ಲಡಾಖ್ ಕ್ಲಬ್ ಗ್ರೂಪ್ ನಲ್ಲಿ ಶ್ರೀನಿವಾಸ್ ಶ್ರೀ ಅವರು ಪೋಸ್ಟ್ ಮಾಡಿದ್ದಾರೆ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಬಿಎಂಡಬ್ಲ್ಯು ಬೈಕಿನ ಜಿಎಸ್ ಎಂದರೆ ಜರ್ಮನ್ ಭಾಷೆಯಲ್ಲಿ ಗೆಲ್ಯಾಂಡೆ ಸ್ಪೋರ್ಟ್, ಇದು ಆಫ್-ರೋಡಿಂಗ್ ಮತ್ತು ರಸ್ತೆ ಆಧಾರಿತವಾಗಿದೆ. 1250 ಜಿಎಸ್ ಅನ್ನು ಲಾಗ್ ಟ್ರಿಪ್ ಹೋಗಲು ಸಮರ್ಥ ಮಾದರಿಯಾಗಿದೆ. ಅಲ್ಲದೇ ಉತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಬೈಕ್ ಆಗಿದೆ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಆದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಕಣಿವೆಯ ಮಾರ್ಗದಲ್ಲಿ ಭಾರೀ ಕೆಸರಿನಿಂದಾಗಿ ಬಿಎಂಡಬ್ಲ್ಯು 1250 ಜಿಎಸ್ ಬೈಕ್ ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ಅವರ ಸಹಾಯಕ್ಕೆ ರೈಡರ್ ಒಬ್ಬರು ಆಗಮಿಸುತ್ತಾರೆ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಆದರೆ ಬೈಕ್ ಮುಂದೆ ಹೋಗುವುದಿಲ್ಲ. ನಂತರ ಇನೊಬ್ಬ ರೈಡರ್ ಬಂದು ಬೈಕನ್ನು ತಳ್ಳುತ್ತಾರೆ. ಆದರೆ ಈ ಬೈಕ್ ಮುಂದೆ ಸಾಗುವುದಿಲ್ಲ, ಏಕೆಂದರೆ ಐಷಾರಾಮಿ ಬಿಎಂಡಬ್ಲ್ಯು 1250 ಜಿಎಸ್ ಮಾದರಿಯು ಹೆವಿ ಬೈಕ್ ಆಗಿದೆ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ನಂತರ ಇನ್ನಿಬ್ಬರು ರೈಡರ್ ಗಳು ಬಂದು ಸಹಾಯ ಮಾಡುತ್ತಾರೆ, ಇವರು ಸತತ ಪರಿಶ್ರಮದಿಂದ ಕೊನೆಗೂ ಈ ಐಷಾರಾಮಿ ಬೈಕ್ ಮುಂದೆ ಚಲಿಸುತ್ತದೆ. ಅದರೂ ಸವಾರನು ಮುಂದೆ ಸಾಗಲು ವೀಡಿಯೊದಲ್ಲಿನ ಹೆಣಗಾಡುತ್ತಿದ್ದರು.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಬದಿಯಲ್ಲಿ ಬಜಾಜ್ ಪಲ್ಸರ್ ಆರ್ಎಸ್ 200 ಸಹ ಸಿಲುಕಿಕೊಂಡಿದೆ ಮತ್ತು ಆ ಸವಾರ ಕೂಡ ಯಾವುದೇ ಸಹಾಯವಿಲ್ಲದೆ ಮುಂದೆ ಹೋಗಲು ಹೆಣಗಾಡುತ್ತಿದ್ದಾನೆ. ಇನ್ನು ರಸ್ತೆಯಲ್ಲಿ ಸಾಕಷ್ಟು ಪ್ರಮಾಣದ ಕೆಸರು ಇರುವುದರಿಂದ ಕೆಲವು ವಾಹನಗಳು ಕೂಡ ಮುಂದೆ ಸಾಗುವುದಕ್ಕೆ ಹೆಣಗಾಡುತ್ತಿದೆ.

ಬಿಎಂಡಬ್ಲ್ಯು 1250 ಜಿಎಸ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ 250 ಕೆಜಿ ತೂಕವನ್ನು ಹೊಂದಿದೆ. ಇಷ್ಟು ಭಾರವಿರುವುದರಿಂದ ಎಲ್ಲಿಯಾದರೂ ಸಿಲುಕಿಕೊಂಡರೆ ಇತರರ ಸಹಾಯಬೇಕಾಗುತ್ತದೆ. ಇದರಿಂದ ಹೆವೆ ವೇಟ್ ಇರುವ ಬೈಕ್ ಗಳಲ್ಲಿ ಲಾಂಗ್ ರೈಡ್ ಹೋಗುವಾಗ ಗ್ರೂಪ್ ಆಗಿ ಹೋಗುವುದು ಉತ್ತಮ.

ಕೆಸರಿನಲ್ಲಿ ಸಿಲುಕಿದ ಐಷಾರಾಮಿ ಬಿಎಂಡಬ್ಲ್ಯು ಬೈಕ್, ಮುಂದೆ ಸಾಗಲು ನೆರವಾದ ರೈಡರ್‌ಗಳು

ಇನ್ನು ಬಿಎಂಡಬ್ಲ್ಯು 1250 ಜಿಎಸ್ ಬೈಕಿನ ಸೀಟ್ ಎತ್ತರವು ಸಾಕಷ್ಟು ಹೆಚ್ಚಾಗಿದೆ ಮತ್ತು ಅದು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಇನ್ನು ವಿಡಿಯೋದಲ್ಲಿ ಕಲ್ಲುಗಳು ಉರುಳುವುದರನ್ನು ಕಾಣುತ್ತದೆ. ಕೆಲವು ಸಂದರ್ಭಗಳಲ್ಲಿ ಬಂಡೆ ಕಲ್ಲುಗಳು ಕೂಡ ಉರುಳಬಹುದು. ಅದ್ದರಿಂದ ಇಂತಹ ಕಠಿಣವಾದ ರಸ್ತೆಯಲ್ಲಿ ರೈಡ್ ಹೋಗುವ ಬಹಳ ಎಚ್ಚರಿಕೆ ವಹಿಸಬೇಕು.

Most Read Articles

Kannada
English summary
BMW 1250 GS Atuck On The Road Due To Heavy Slush. Read In Kannada.
Story first published: Saturday, June 26, 2021, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X