ಸಮುದ್ರದ ಮುಂದೆ ನಾವೆಲ್ಲ ಅಲ್ಪರು... ಕಾರನ್ನು ಕೊಂಡೊಯ್ಯಬೇಡಿ, ಹಿಂತರಲು ಪರದಾಡಬೇಡಿ!
ಪ್ರಕೃತಿ ಮುಂದೆ ನಾವೆಲ್ಲ ಅಲ್ಪರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈಗ ನಾವು ಹೇಳಲು ಹೊರಟಿರುವ ಸುದ್ದಿ ನಿಮಗೆ ನಂಬಲಸಾಧ್ಯವಾದ್ರೂ ನಿಜ. ಸಮುದ್ರ ದಡದಲ್ಲಿ ನಿಲ್ಲಿಸಿದ್ದ ಕಾರನ್ನು ಜೋರಾಗಿ ಅಪ್ಪಳಿಸಿದ ಅಲೆಗಳು ಸಮುದ್ರದೊಳಕ್ಕೆ ಎಳೆದೊಯ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ಈ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ನಿನ್ನೆ, ಕುಟುಂಬವೊಂದು ತಮ್ಮ ಬಿಎಂಡಬ್ಲ್ಯು ಎಸ್ ಸೀರಿಸ್ ಕನ್ವರ್ಟಬಲ್ ಕಾರಿನಲ್ಲಿ ಇಂಗ್ಲೆಂಡಿನ ಪಕ್ಕದಲ್ಲಿರುವ ಕಾರ್ನುಯೆಲ್ ಪ್ರದೇಶದಲ್ಲಿನ ತ್ರಿವನುನಾನ್ಸ್ ಎಂಬ ಕಡಲತೀರಕ್ಕೆ ಭೇಟಿ ನೀಡಿತ್ತು. ಕುಟುಂಬದೊಂದಿಗೆ ಬರುವ ಜನರು ತಮ್ಮ ಕಾರುಗಳನ್ನು ಈ ಬೀಚ್ ಬಳಿಯೇ ನಿಲ್ಲಿಸಿ, ಕಡಲತೀರದಲ್ಲಿ ತಮ್ಮ ಕುಟುಂಬದೊಂದಿಗೆ ಮೋಜು, ಮಸ್ತಿ ಮಾಡುತ್ತಾರೆ.

ಎಲ್ಲರಂತೆಯೇ ಈ ಕುಟುಂಬ ಕೂಡ ತಮ್ಮ ಬಿಎಂಡಬ್ಲ್ಯು ಎಸ್ ಸೀರಿಸ್ ಕನ್ವರ್ಟಬಲ್ ಕಾರನ್ನು ಸಮುದ್ರದ ಕಡಲತೀರದ ಬಳಿ ನಿಲ್ಲಿಸಿ ಮೋಜು ಮಾಡುತ್ತಿದ್ದರು. ಆಗ ಸಮುದ್ರದ ಅಲೆಗಳು ಕಾರನ್ನು ಬಹಳ ವೇಗವಾಗಿ ಬಡಿದುಕೊಳ್ಳುತ್ತಿದ್ದವು. ಈ ವೇಳೆ ಹೇಗೂ ಕಾರು ತೀರದಲ್ಲಿದೆ, ಅಲೆಗಳು ವೇಗವಾಗಿ ಬಡೆದರೂ ಸಮುದ್ರಕ್ಕೆ ಎಳೆದೊಯ್ಯುತ್ತವೆ? ಎಂದು ಯಾರೂ ಕೂಡ ಊಹಿಸುವುದಿಲ್ಲ.
ಹಾಗಯೇ ಇವರೂ ಕೂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಆದರೆ ಇದ್ದಕ್ಕಿದ್ದಂತೆ ಸಮುದ್ರದ ಅಲೆಗಳು ಕಾರನ್ನು ಸಮುದ್ರದೊಳಕ್ಕೆ ಎಳೆದೊಯ್ಯುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಸಹಾಯಕ್ಕಾಗಿ ರಕ್ಷಣಾ ತಂಡವನ್ನು ಕರೆಯಲಾಗಿದ್ದು, ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ಖಚಿತಪಡಿಸಿಕೊಂಡ ನಂತರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದು ಬಿಎಂಡಬ್ಲ್ಯು ಐಷಾರಾಮಿ ಕನ್ವರ್ಟಿಬಲ್ ಕಾರಾಗಿದ್ದು, ತುಂಬಾ ದುಬಾರಿಯದ್ದಾಗಿದೆ. ಕೊನೆಗೂ ಕಾರನ್ನು ಸಮುದ್ರದಿಂದ ಹೊರತಂದು ರಕ್ಷಿಸಲಾಯಿತು. ಈ ಘಟನೆ ಕುರಿತ ದೃಷ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಸಮುದ್ರದಲ್ಲಿನ ಉಪ್ಪು ನೀರು ಕಾರಿಗೆ ಒಳ್ಳೆಯದಲ್ಲ, ಯಾರೂ ಕೂಡ ಸಮುದ್ರದ ಬಳಿ ಕಾರುಗಳನ್ನು ಕೊಂಡೊಯ್ಯಬೇಡಿ ಎಂದು ವಿಡಿಯೋ ಕೆಳಗೆ ಸಲಹೆ ನೀಡಲಾಯಿತು.
ಸಾಮಾನ್ಯವಾಗಿ ವಿದೇಶಗಳಲ್ಲಿನ ಸಮುದ್ರದ ಬಳಿ ಕಾರುಗಳನ್ನು ಕೊಂಡೊಯ್ದು ಎಲ್ಲಾದರು ಬದಿಗಳಲ್ಲಿ ನಿಲ್ಲಿಸಿ ಮೋಜು, ಮಸ್ತಿ ಮಾಡುತ್ತಾರೆ. ಆದ್ರೆ ಅಲೆಗಳು ಅಷ್ಟುದೊಡ್ಡ ಕಾರನ್ನು ಏನು ಮಾಡಬಲ್ಲವು ಎಂದು ಊಹಿಸಿ ನಿರ್ಲಕ್ಷ ತೋರುತ್ತಾರೆ. ಒಂದು ವಸ್ತು ಸಮುದ್ರದ ಬಳಿ ನಿಂತಿದೆ, ಆ ವಸ್ತುವಿಗೆ ಅಲೆಗಳು ಅಪ್ಪಳಿಸುತ್ತಿವೆ ಎಂದರೆ ತುಂಬಾ ಜಾಗರೂಕರಾಗಿರಬೇಕು. ಏಕೆ ಗೊತ್ತಾ?
ಸಿಂಪಲ್ ಉದಾಹರಣೆ ಕೊಡ್ತೇವೆ ನೋಡಿ.. ನೀವು ಸಮುದ್ರ ಬಳಿ ಅಲೆಗಳು ಅಪ್ಪಳಿಸುವ ಸ್ಥಳದಲ್ಲಿ ನಿಂತಿದ್ದರೇ, ಅಲೆಗಳು ಅಪ್ಪಳಿಸಿದ ಪ್ರತಿ ಬಾರಿಯು ನಿಮ್ಮ ಪಾದಗಳ ಕೆಳಗೆ ಮರಳು ಸಮುದ್ರದ ಎಳತಕ್ಕೆ ಒಳಗಾಗುವುದನ್ನು ನೀವು ಗಮನಿಸಿರಬಹುದು. ಹಾಗೆಯೇ ಮರಳಿನ ಮೇಲೆ ಭಾರದ ವಸ್ತುವು ಇದ್ದಾಗ ಅದರ ಎಳೆತವು ಇನ್ನೂ ಹೆಚ್ಚಾಗಿರುತ್ತದೆ. ಹಾಗಾಗಿಯೇ ಕಾರನ್ನು ಅಲೆಗಳು ಎಳೆದೊಯ್ದಿವೆ.
ಇನ್ನು ನಮ್ಮ ಭಾರತದ ವಿಷಯಕ್ಕೆ ಬಂದರೆ ವಾಹನಗಳನ್ನು ಬೀಚ್‌ಗಳ ಬಳಿ ಬಿಡುವುದೇ ಇಲ್ಲ. ಏಕೆಂದರೆ ವಿದೇಶಗಳಂತಲ್ಲದೇ ಭಾರತದಲ್ಲಿ ವಾಹನಗಳನ್ನು ಸುಮ್ಮನೆ ಬದಿಗಳಲ್ಲಿ ನಿಲ್ಲಿಸುವುದಿಲ್ಲ. ಬದಲಾಗಿ ಸಮುದ್ರದ ಅಲೆಗಳೊಂದಿಗೆ ಸ್ಟಂಟ್‌ಗಳನ್ನು ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಬಿಡುವುದಿಲ್ಲ. ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದು ಸಮುದ್ರದಲ್ಲಿ ಕಾರುಗಳು ಕೊಚ್ಚೊಯ್ದ ಉದಾಹರಣೆಗಳಿವೆ. ಈ ಘಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.


Click it and Unblock the Notifications