ಕಳ್ಳರೇ ಜೋಕೆ; ಬರಲಿದೆ ಬಿಎಂಡಬ್ಲ್ಯು ಪೊಲೀಸ್ ಸ್ಕೂಟರ್
ಸದಾ ನವ ನವೀನ ಕಾನ್ಸೆಪ್ಟ್ ಪರಿಚಯಿಸುವುದರಲ್ಲಿ ಹೆಸರುವಾಸಿಯಾಗಿರುವ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಫ್ರಾನ್ಸ್‌ನಲ್ಲಿ ನಡೆಯಲಿರುವ ಪೊಲೀಸ್ ಆಂಡ್ ಸ್ಟೇಟ್ ಸೆಕ್ಯೂರಿಟಿ ಟ್ರೇಡ್ ಶೋದಲ್ಲಿ ನೂತನ 'ಸಿ' ಇವೊಲೂಷ್ಯನ್ ಎಲೆಕ್ಟ್ರಿಕ್ ಸ್ಕೂಟರ್ ಕಾನ್ಸೆಪ್ಟನ್ನು ಪ್ರದರ್ಶಿಸಲಿದೆ.
ಈ ಮೂಲಕ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದರಲ್ಲಿ ಎಲೆಕ್ಟ್ರಿಕ್ ಸ್ಕೂಟರುಗಳ ಮಹತ್ವವನ್ನು ಸಾರಲಾಗುವುದು. ಇದನ್ನು ಪ್ರಮುಖವಾಗಿಯೂ ರಕ್ಷಣೆ ಹಾಗೂ ಬೆಂಗಾವಾಲು ಚಟುವಟಿಕೆಗಳಿಗಾಗಿ ಬಳಕೆ ಮಾಡಲಾಗುತ್ತದೆ.

ನವೆಂಬರ್ 19ರಿಂದ 22ರ ವರೆಗೆ ನಡೆಯಲಿರುವ ಮಿಲಿಪಾಲ್ (milipo 2013) ಶೋದಲ್ಲಿ ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಸ್ಕೂಟರ್ ಪ್ರದರ್ಶನ ಕಾಣಲಿದೆ.

ಇತರೆಲ್ಲ ಪೊಲೀಸ್ ವಾಹನಗಳಂತೆ ಇದರಲ್ಲೂ ಸೈರನ್ ವ್ಯವಸ್ಥೆಯಿರಲಿದೆ.

ಹಾಗೆಯೇ ಭದ್ರತೆಗೆ ನೆರವಾಗುವಂತೆ ಹಲವಾರು ಐಚ್ಛಿಕ ಆಕ್ಸೆಸರಿ ವ್ಯವಸ್ಥೆಗಳನ್ನು ಲಗತ್ತಿಸಲಾಗಿರುತ್ತದೆ.

ಕಂಪನಿಯ ಪ್ರಕಾರ ಸಿ ಇವೊಲೂಷ್ಯನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ 75 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಇದರಲ್ಲಿ 8 kWh ಬ್ಯಾಟರಿ ಆಳವಡಿಸಲಾಗಿದೆ. ಹಾಗೆಯೇ ಒಮ್ಮೇ ಚಾರ್ಜ್ ಮಾಡಿಸಿದ್ದಲ್ಲಿ 62 ಮೈಲ್ ದೂರದ ವರೆಗೆ ಸರಾಗವಾಗಿ ಚಲಿಸಬಹುದಾಗಿದೆ.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 220 ವಾಟ್ ಸೊಕೆಟ್‌ನಲ್ಲಿ ಚಾರ್ಜ್ ಮಾಡಿಸಬಹುದಾಗಿದೆ.

ಇದೇ ಪ್ರದರ್ಶನ ಮೇಳದಲ್ಲಿ ಬಿಎಂಡಬ್ಲ್ಯು ಇತರ ಪೊಲೀಸ್ ಆವೃತ್ತಿಗಳಾದ ಆರ್1200ಆರ್‌ಟಿ, ಎಫ್800ಜಿಟಿ ಮತ್ತು ಎಫ್700ಜಿಎಸ್ ಕೂಡಾ ಅನಾವರಣಗೊಳ್ಳಲಿದೆ.


Click it and Unblock the Notifications








