ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ಗೋಗರೆದ ದುಬಾರಿ ಕಾರು ಮಾಲೀಕ
ಭಾರತದಲ್ಲಿ ಪ್ರತಿ ವರ್ಷ ಸರಾಸರಿ 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಂಚಾರಿ ನಿಯಮಗಳ ಉಲ್ಲಂಘನೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣದಿಂದಾಗಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

2019ರ ಸೆಪ್ಟೆಂಬರ್ 1ರಿಂದ ಭಾರತದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ಈ ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀಪ್ರಮಾಣದ ದಂಡ ವಿಧಿಸಲಾಗುತ್ತದೆ. ಈ ಭಾರೀ ಪ್ರಮಾಣದ ದಂಡದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದರೂ ಇನ್ನೂ ಕೆಲವು ಸವಾರರು ನಿಯಮಗಳನ್ನು ಪಾಲಿಸುತ್ತಿಲ್ಲ. ಸಾಮಾನ್ಯವಾಗಿ ಬಹುತೇಕ ಎಲ್ಲಾ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಸೆಲ್ ಫೋನ್‌ನಲ್ಲಿ ಮಾತನಾಡಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದೇ ರೀತಿ ರೂ.83 ಲಕ್ಷ ಬೆಲೆ ಬಾಳುವ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಮಾಲೀಕನಿಗೆ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಸೆಲ್ ಫೋನ್ ಬಳಸಿದ ಕಾರಣಕ್ಕೆ ಪೊಲೀಸರು ರೂ.5,000ದಂಡ ವಿಧಿಸಿದ್ದಾರೆ. ದುಬಾರಿ ಕಾರ್ ಅನ್ನು ಹೊಂದಿದ್ದರೂ ಆತ ದಂಡದ ಮೊತ್ತವನ್ನು ಇಳಿಸುವಂತೆ ಗೋಗರೆದಿದ್ದಾನೆ.

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನಗಳ ಪರಿಶೀಲನೆ ನಡೆಸುತ್ತಿದ್ದ ಪೊಲೀಸರು ಬಿಎಂಡಬ್ಲ್ಯು 5-ಸೀರಿಸ್ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಪೊಲೀಸರು ಕಾರನ್ನು ನಿಲ್ಲಿಸಿದರೂ ಕಾರಿನಲ್ಲಿದ್ದ ವ್ಯಕ್ತಿ ಸೆಲ್‌ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತಾನು ತುರ್ತು ಕೆಲಸದ ನಿಮಿತ್ತ ಹೊರಬಂದಿದ್ದು, ತನ್ನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾನೆ. ತನಗೆ ಸಹಾಯ ಮಾಡುವಂತೆ ಹಲವರಿಗೆ ಕರೆ ಮಾಡಿದ್ದಾನೆ. ಆದರೆ ಯಾರೂ ಪೊಲೀಸರೊಂದಿಗೆ ಮಾತನಾಡಲಿಲ್ಲ.

ಕೊನೆಗೆ ಆ ವ್ಯಕ್ತಿ ಕಾರಿನಿಂದ ಇಳಿದು ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದ್ದಾನೆ. ಆ ಪೊಲೀಸ್ ಅಧಿಕಾರಿ ಕಾರಿನ ಮಾದರಿ ಹಾಗೂ ಆ ಕಾರಿನ ಬೆಲೆಯ ಬಗ್ಗೆ ವಿಚಾರಿಸಿದ್ದಾರೆ. ಆತ ಕಾರಿನ ಬೆಲೆ ರೂ.83 ಲಕ್ಷವೆಂದು ಹೇಳಿದ್ದಾನೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಆ ಪೊಲೀಸ್ ಅಧಿಕಾರಿ ರೂ.5,000 ದಂಡ ವಿಧಿಸಿದ್ದಾರೆ. ರೂ.100 ಅಥವಾ ರೂ.200 ದಂಡ ವಿಧಿಸುವಂತೆ ಆತ ಗೋಗರೆದಿದ್ದಾನೆ. ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲವೆಂದು ಹೇಳಿದ್ದಾನೆ.ಆದರೂ ದಂಡದ ಮೊತ್ತವನ್ನು ಕಡಿಮೆ ಮಾಡಿಲ್ಲ.

ದಂಡ ಪಾವತಿಸಿದ ನಂತರ ಆತ ಅಲ್ಲಿಂದ ತೆರಳಿದ್ದಾನೆ. ಈ ವೀಡಿಯೊವನ್ನು ಭಗವತ್ ಪ್ರಸಾದ್ ಪಾಂಡೆ ತಾರಕೊ ಜಿ ಎಂಬುವವರು ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ವಾಹನ ಚಲಾಯಿಸುವಾಗ ಸೆಲ್ ಫೋನ್‌ನಲ್ಲಿ ಮಾತನಾಡುವುದು ನಿಜಕ್ಕೂ ಅಪಾಯಕಾರಿ. ಇದು ವಿವಿಧ ರಸ್ತೆ ಅಪಘಾತಗಳಿಗೆ ಕಾರಣವಾಗಲಿದೆ.


Click it and Unblock the Notifications