ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಪ್ರಪಂಚದಾದ್ಯಂತ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಎಷ್ಟೇ ಮುನ್ನಚ್ಚರಿಕೆಯನ್ನು ನೀಡಿದರೂ ಅಪಘಾತಗಳನ್ನು ತಪ್ಪಿಸುತ್ತಲು ಸಾಧ್ಯವಾಗುತ್ತಿಲ್ಲ. ಪ್ರಪಂಚದ ಬೇರೆ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳಾಗುತ್ತವೆ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಅಪಘಾತಗಳಿಗೆ ಪ್ರಮುಖ ಕಾರಣ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು. ನಿಯಮಗಳ ಉಲ್ಲಂಘನೆ ಭಾರೀ ಪ್ರಮಾಣದಲ್ಲಿಯೇ ಆಗುತ್ತಿವೆ. ವಾಹನ ದಟ್ಟಣೆ ಹೆಚ್ಚಿರುವ ಕಡೆಯಲ್ಲಿಯೇ ಹೆಚ್ಚಿನ ಪ್ರಮಾಣದ ನಿಯಮ ಉಲ್ಲಂಘನೆಗಳು ಸಂಭವಿಸುತ್ತಿವೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಪ್ರತಿದಿನ ಸಂಭವಿಸುವ ಅಪಘಾತಗಳ ಪ್ರಮಾಣವನ್ನು ಇಂಟರ್‍‍ನೆಟ್‍‍‍ನಲ್ಲಿ ಅಪ್‍‍ಲೋಡ್ ಮಾಡಲಾಗುತ್ತಿದೆ. ಕೆಲವು ಬಾರಿ ಅಪಘಾತದ ವೀಡಿಯೊಗಳನ್ನೂ ಸಹ ಅಪ್‍‍ಲೋಡ್ ಮಾಡಲಾಗುತ್ತದೆ. ಕೆಲವು ಅಪಘಾತಗಳ ವೀಡಿಯೊಗಳು ಭೀಕರವಾಗಿರುತ್ತವೆ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಈ ವೀಡಿಯೊಗಳನ್ನು ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅಪ್‍‍ಲೋಡ್ ಮಾಡಲಾಗುತ್ತದೆ. ಇತ್ತೀಚಿಗೆ ಸಂಭವಿಸಿದ ಅಪಘಾತವೊಂದರ ವೀಡಿಯೊವನ್ನೂ ಸಹ ಅಪ್‍‍ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಕಾರು ಪುಡಿ ಪುಡಿಯಾಗುವುದನ್ನು ಕಾಣಬಹುದು.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿರುವ ಲಾಸ್ ಏಂಜಲೀಸ್‍‍ನಲ್ಲಿ. ಈ ಘಟನೆಯಲ್ಲಿ ರೈಲ್ವೆ ಕ್ರಾಸಿಂಗ್‍‍ನಲ್ಲಿ ಸಾಗುವ ಕಾರಿಗೆ, ವೇಗವಾಗಿ ಬರುವ ರೈಲು ಗುದಿಯುತ್ತದೆ. ಅಲ್ಲಿನ ಪೊಲೀಸರ ಪ್ರಕಾರ ಕಪ್ಪು ಬಣ್ಣದ ಬಿ‍ಎಂ‍‍ಡಬ್ಲ್ಯು ಕಾರು ವೇಗವಾಗಿ ಚಲಿಸಿ ರೈಲ್ವೆ ಕ್ರಾಸಿಂಗ್ ದಾಟಿರುವುದೇ ಈ ಅಪಘಾತಕ್ಕೆ ಕಾರಣ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಈ ವೇಳೆ ಅತಿ ವೇಗದಲ್ಲಿದ್ದ ರೈಲು ನಿಯಂತ್ರಣಕ್ಕೆ ಸಿಗದೇ ಕಾರಿಗೆ ಗುದ್ದಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳದಲ್ಲಿದ್ದ ಬೇರೆ ವಾಹನ ಸವಾರರ ಪ್ರಕಾರ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಈ ಅಪಘಾತದಲ್ಲಿ ಕಾರು ಚಾಲಕನು ಬದುಕಿದ್ದು ನಿಜಕ್ಕೂ ಆತನ ಅದೃಷ್ಟವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಕಾರು ಚಾಲಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ನಂತರ ಚಾಲಕನನ್ನು ಡಿಸ್‍‍ಚಾರ್ಜ್ ಮಾಡಲಾಗಿದೆ.

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಪುಡಿಪುಡಿಯಾದ ಬಿ‍ಎಂ‍‍ಡಬ್ಲ್ಯು

ಲಾಸ್ ಏಂಜಲೀಸ್ ನಗರ ಪೊಲೀಸರು ಈ ಅಪಘಾತದ ದೃಶ್ಯವನ್ನು ತಮ್ಮ ಅಧಿಕೃತ ಟ್ವಿಟರ್ ಪೇಜ್‍‍ನಲ್ಲಿ ಪ್ರಕಟಿಸಿದ್ದಾರೆ. ಇದರ ಜೊತೆಗೆ ರೈಲ್ವೆ ಕ್ರಾಸಿಂಗ್‍‍ಗಳನ್ನು ದಾಟುವಾಗ ಹೆಚ್ಚು ಜಾಗರೂಕತೆಯನ್ನು ವಹಿಸಬೇಕೆಂದು ವಾಹನ ಸವಾರರಿಗೆ ಸಲಹೆ ನೀಡಿದ್ದಾರೆ.

Article Published On: Monday, March 9, 2020, 10:56 [IST]
English summary
BMW collided with fast moving train. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+