ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

By Nagaraja

ಸದ್ಯ ವಿಶ್ವದೆಲ್ಲೆಡೆ ಸೂಪರ್ ಕಾರುಗಳ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಆದರೆ ಎಲ್ಲ ಪ್ರಕರಣದಲ್ಲೂ ಸೂಪರ್ ಕಾರುಗಳು ಅಪಖ್ಯಾತಿಗೆ ಒಳಗಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಇದೀಗಷ್ಟೇ ದೆಹಲಿಯ ಪ್ರಸಿದ್ಧ ಹೋಟೆಲ್‌ವೊಂದರಲ್ಲಿ ಸಿಬ್ಬಂದಿಯ ಎಡವಟ್ಟಿನಿಂದಾಗಿ ಲಂಬೋರ್ಗಿನಿ ಸೂಪರ್ ಕಾರು ಅಪಘಾತಕ್ಕೀಡಾಗಿರುವ ಬಗ್ಗೆ ವರದಿ ಮಾಡಿರುತ್ತೇವೆ. ಈ ಬಾರಿ ಥಾಯ್ಲೆಂಡ್‌ನಲ್ಲಿ ನಾಲ್ಕು ಸೂಪರ್ ಕಾರುಗಳು ಧಗಧಗನೆ ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ಟ್ರಕ್‌ವೊಂದರಲ್ಲಿ ಸಾಗಿಸುತ್ತಿದ್ದ ಹೊಚ್ಚ ಹೊಸತಾದ ಫೆರಾರಿ ಎಫ್‌430 ಸ್ಕುಡೆರಿಯಾ, ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ಲಂಬೋರ್ಗಿನಿ ಮರ್ಸಿಲ್ಯಾಗೊ ಮತ್ತು ಬಿಎಂಡಬ್ಲ್ಯು ಎಕ್ಸ್6 ಸೂಪರ್ ಕಾರುಗಳಿಗೆ ಸಂಭವಿಸಿರುವ ಬೆಂಕಿ ಆಕಸ್ಮಿಕದಿಂದಾಗಿ ಎಲ್ಲ ಸೂಪರ್ ಕಾರುಗಳು ಸುಟ್ಟು ಕರಕಲಾಗಿದೆ.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ಇನ್ನೇನು ರಕ್ಷಣಾ ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಬೆಂಕಿ ಸಂಪೂರ್ಣವಾಗಿ ವಾಹನಗಳನ್ನು ಆವರಿಸಿಕೊಂಡಿತ್ತು. ಪರಿಣಾಮವೆಂಬಂತೆ ಎಲ್ಲ ಸೂಪರ್ ಕಾರುಗಳು ಬೆಂಕಿಗೆ ಆಹುತಿಯಾಗಿದೆ.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ನಿಮ್ಮ ಮಾಹಿತಿಗಾಗಿ ಫೆರಾರಿ ಎಫ್430 ಮಾದರಿಯನ್ನು ಮೊದಲ ಬಾರಿಗೆ ಎಫ್1 ಜೀವಂತ ದಂತಕಥೆ ಮೈಕಲ್ ಶುಮೇಕರ್, 2007ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದ್ದರು.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ಇನ್ನೊಂದೆಡೆ ಇಟಲಿಯ ಸೂಪರ್ ಕಾರಾಗಿರುವ ಲಂಬೋರ್ಗಿನಿ ಮರ್ಸಿಲ್ಯಾಗೊ ಜಗತ್ತಿನಾದ್ಯಂತ ಹೆಚ್ಚು ಹೆಸರು ಮಾಡಿದೆ. ಅದೇ ರೀತಿ ಅತಿ ಉದ್ದದ ವೀಲ್ ಬೇಸ್ ಹೊಂದಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಫ್ಲೈಯಿಂಗ್ ಸ್ಪರ್, ಎರಡು ಬಾಗಿಲುಗಳ ವಿನ್ಯಾಸ ಹೊಂದಿದೆ.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ಸದ್ಯ ಸ್ಥಳೀಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಬೆಂಕಿ ಹೊತ್ತಿಕೊಂಡಿರುವ ಹಿಂದಿನ ಕಾರಣವನ್ನು ಶೋಧಿಸುತ್ತಿದ್ದಾರೆ.

ಧಗಧಗನೆ ಹೊತ್ತಿ ಉರಿದ ಸೂಪರ್ ಕಾರುಗಳು

ಒಟ್ಟಿನಲ್ಲಿ ಈ ಎಲ್ಲ ಸೂಪರ್ ಕಾರುಗಳ ಭಸ್ಮದಿಂದಾಗಿ ಕೋಟಿಗಟ್ಟಲೆ ರುಪಾಯಿಗಳ ನಷ್ಟ ಅಂದಾಜಿಸಲಾಗಿದೆ.

More from DriveSpark

Article Published On: Saturday, July 12, 2014, 7:00 [IST]
English summary
Supercars have the knack of finding their way into news around the world, ranging from their launches to spectacular crashes. To this league joins Thailand. The latest mishap happened when four supercars ended up as molten steel and melted carbon fibre after they caught fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+