ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಟಾಮ್ ಕ್ರೂಸ್ ಜನಪ್ರಿಯ ಹಾಲಿವುಡ್ ನಟ. ಈಗ ಅವರು ಸೂಪರ್ ಹಿಟ್ ಹಾಲಿವುಡ್ ಸಿನಿಮಾ ಸರಣಿಯ 7ನೇ ಭಾಗದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ನಟಿಸುತ್ತಿರುವ ಸಿನಿಮಾದ ಹೆಸರು ಮಿಷನ್: ಇಂಪಾಸಿಬಲ್. ಈಗ ಟಾಮ್ ಕ್ರೂಸ್ ಅವರಿಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಹೊರ ಬಂದಿದೆ. ಆದರೆ ಈ ಸುದ್ದಿ ಸಿನಿಮಾಗೆ ಸಂಬಂಧಿಸಿಲ್ಲ. ಬದಲಿಗೆ ಅವರ ಕಾರಿಗೆ ಸಂಬಂಧಿಸಿದ್ದು.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಟಾಮ್ ಕ್ರೂಸ್ ಅವರ ಬಿಎಂಡಬ್ಲ್ಯು ಕಾರನ್ನು ಕಳವು ಮಾಡಲಾಗಿದೆ. ಈ ಮಿಷನ್: ಇಂಪಾಸಿಬಲ್ ಸಿನಿಮಾದ ಚಿತ್ರೀಕರಣ ಸ್ಥಳದಲ್ಲಿಯೇ ಈ ಕಾರಿನ ಕಳ್ಳತನ ನಡೆದಿರುವುದು ಆಶ್ಚರ್ಯಕರವಾಗಿದೆ. ಮನೆಯಲ್ಲಿ ನಿಲ್ಲಿಸಿದ್ದ ಕಾರು ಕಳುವಾದರೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯೋ ಅಥವಾ ಮಧ್ಯ ರಾತ್ರಿಯಲ್ಲಿಯೋ ಕಾರು ಕಳ್ಳತನವಾಗಿದೆ ಎಂದು ಭಾವಿಸಬಹುದು.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಆದರೆ ಸಿನಿಮಾ ಶೂಟಿಂಗ್ ವೇಳೆ ಜನ ಸಂದಣಿ ಇರುವುದು ಸಹಜ. ಆದರೂ ಕಾರು ಕಳ್ಳತನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲಿಂದ ಬಂದ ವರದಿಗಳ ಪ್ರಕಾರ ಕಳುವು ಮಾಡಲಾದ ಕಾರಿನೊಳಗೆ ದುಬಾರಿ ಬೆಲೆಯ ವಸ್ತುಗಳು ಇದ್ದವು ಎಂದು ಹೇಳಲಾಗಿದೆ. ಟಾಮ್ ಕ್ರೂಸ್‌ರವರಿಗೆ ಸೇರಿದ ದುಬಾರಿ ಬೆಲೆಯ BMW X7 ಐಷಾರಾಮಿ ಕಾರ್ ಅನ್ನು ಕಳುವು ಮಾಡಲಾಗಿದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಟಾಮ್ ಕ್ರೂಸ್ ತಮ್ಮ BMW X7 ಕಾರ್ ಅನ್ನು ಆಗಸ್ಟ್ 25 ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಗ್ರ್ಯಾಂಡ್ ಹೋಟೆಲ್ ಹೊರಗೆ ಪಾರ್ಕ್ ಮಾಡಿ ಶೂಟಿಂಗ್'ಗೆ ತೆರಳಿದ್ದರು. ಅವರ ಅಂಗರಕ್ಷಕ ಬಂದು ನೋಡಿದ ನಂತರ ಪಾರ್ಕ್ ಮಾಡಲಾದ ಕಾರು ಕಾಣೆಯಾಗಿರುವುದು ತಿಳಿದಿದೆ. ತಮ್ಮ ಕಾರು ಕಳುವಾಗಿರುವುದು ಟಾಮ್ ಕ್ರೂಸ್ ರವರಿಗೆ ಅಚ್ಚರಿ ಮೂಡಿಸಿದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಬರ್ಮಿಂಗ್‌ಹ್ಯಾಮ್‌ ಪೊಲೀಸರ ಪ್ರಕಾರ BMW X7 ಐಷಾರಾಮಿ ಕಾರಿನ ಕೀ ಲೆಸ್ ಇಗ್ನಿಷನ್ ಫೋಬ್‌ನಿಂದ ಹೊರಬರುವ ಸಿಗ್ನಲ್ ಅನ್ನು ಕ್ಲೋನ್ ಮಾಡಿ ಕಾರ್ ಅನ್ನು ಕಳುವು ಮಾಡಲು ಖದೀಮರು ಸ್ಕ್ಯಾನರ್ ಬಳಸಿದ್ದಾರೆ. ಇದರಿಂದ ಇದೊಂದು ಯೋಜಿತ ಕಳ್ಳತನವೆಂದು ಕಂಡು ಬಂದಿದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಸಿನಿಮಾ ಚಿತ್ರೀಕರಣಕ್ಕಾಗಿ ಬರ್ಮಿಂಗ್‌ಹ್ಯಾಮ್‌'ಗೆ ತೆರಳಿದ್ದ ಟಾಮ್ ಕ್ರೂಸ್, ಈ BMW X7 ಐಷಾರಾಮಿ ಕಾರಿನಲ್ಲಿ ನಗರದಾದ್ಯಂತ ಸಂಚರಿಸಿದ್ದಾರೆ. ಕೆಲವರು ಈ ಕಾರ್ ಅನ್ನು ನೋಡಿರಬಹುದು. ಟಾಮ್ ಕ್ರೂಸ್ ರವರು ಗ್ರ್ಯಾಂಡ್ ಹೋಟೆಲ್‌ನೊಳಗೆ ಹೋಗಿರುವುದನ್ನು ನೋಡಿದ ನಂತರ ಕಾರ್ ಅನ್ನು ಕಳುವು ಮಾಡಿದ್ದಾರೆ. ಅಥವಾ ಈ ಕಾರು ಟಾಮ್ ಕ್ರೂಸ್ ಅವರಿಗೆ ಸೇರಿದ್ದು ಎಂದು ತಿಳಿಯದೇ ದುಬಾರಿ ಬೆಲೆಯ ಕಾರು ಎಂಬ ಕಾರಣಕ್ಕೂ ಕಾರ್ ಅನ್ನು ಕಳವು ಮಾಡಿರಬಹುದು.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಕಾರಿನೊಂದಿಗೆ ಕಾರಿನಲ್ಲಿದ್ದ ದುಬಾರಿ ಬೆಲೆಯ ವಸ್ತುಗಳನ್ನು ಸಹ ಕಳ್ಳರು ಕದ್ದಿದ್ದಾರೆ. ಪೊಲೀಸರು ಈ ಐಷಾರಾಮಿ ಕಾರಿನಲ್ಲಿ ಅಳವಡಿಸಲಾಗಿದ್ದ ಎಲೆಕ್ಟ್ರಾನಿಕ್ ಕಣ್ಗಾವಲು ಸಾಧನದ ನೆರವಿನೊಂದಿಗೆ ಈ ಕಾರ್ ಅನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆದರೆ ಕಾರಿನೊಳಗಿದ್ದ ವಸ್ತುಗಳನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಕಾರ್ ಅನ್ನು ಹಿಂಪಡೆಯಲಾಗಿದ್ದರೂ, ಕಾರು ಕಳ್ಳತನವಾಗಿದೆ ಎಂದು ತಿಳಿದಾಗ ಟಾಮ್ ಕ್ರೂಸ್ ತಮ್ಮ ಅಂಗರಕ್ಷಕರ ಮೇಲೆ ಕೋಪಗೊಂಡಿದ್ದರು ಎಂದು ವರದಿಯಾಗಿದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ದುಬಾರಿ ಬೆಲೆಯ ಐಷಾರಾಮಿ ಕಾರು ಕಳುವಾದಾಗ ಕಾರು ಮಾಲೀಕರು ಈ ರೀತಿ ವರ್ತಿಸುವುದು ಸಹಜ. BMW X7 ಎಸ್‌ಯುವಿಯನ್ನು ಭಾರತದಲ್ಲಿಯೂ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 95.84 ಲಕ್ಷಗಳಿಂದ ರೂ. 1.64 ಕೋಟಿಗಳಾಗಿದೆ. BMW X7 ಎಸ್‌ಯುವಿಯನ್ನು ನಾಲ್ಕು ಮಾದರಿಗಳಲ್ಲಿ ಹಾಗೂ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಈ ಐಷಾರಾಮಿ ಎಸ್‌ಯುವಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳನ್ನು ನೀಡಲಾಗಿದೆ. ಈ ಎಸ್‌ಯುವಿಯಲ್ಲಿರುವ 3.0 ಲೀಟರ್, 6 ಸಿಲಿಂಡರ್ ಪೆಟ್ರೋಲ್ ಎಂಜಿನ್ ಗರಿಷ್ಠ 340 ಬಿ‌ಹೆಚ್‌ಪಿ ಪವರ್ ಹಾಗೂ 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.0 ಲೀಟರ್, 6 ಸಿಲಿಂಡರ್ ಡೀಸೆಲ್ ಎಂಜಿನ್ 265 ಬಿ‌ಹೆಚ್‌ಪಿ ಪವರ್ ಹಾಗೂ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಪೆಟ್ರೋಲ್ ಎಂಜಿನ್ ಆಯ್ಕೆಯು BMW X7 xDrive40i M Sport ಎಂಬ ಒಂದು ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಡೀಸೆಲ್ ಎಂಜಿನ್‌ ಮೂರು ಮಾದರಿಗಳಲ್ಲಿ ಲಭ್ಯವಿದೆ. ಈ ಐಷಾರಾಮಿ ಎಸ್‌ಯುವಿಯ ಪೆಟ್ರೋಲ್ ಮಾದರಿಯು 6.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಿದರೆ, ಡೀಸೆಲ್ ಮಾದರಿಯು 7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

ಭಾರತದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಆಗಿ ಆಮದು ಮಾಡಿಕೊಂಡು ಮಾರಾಟ ಮಾಡಲಾಗುವ BMW X7 ಎಸ್‌ಯುವಿಯಲ್ಲಿ ಗರಿಷ್ಠ 6 ಜನರು ಆರಾಮವಾಗಿ ಕುಳಿತು ಪ್ರಯಾಣ ಮಾಡಬಹುದು. ಭಾರತದಲ್ಲಿ BMW X7 ಎಸ್‌ಯುವಿಯು Mercedes Benz GLS ಹಾಗೂ Volvo XC 90 ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಚಿತ್ರೀಕರಣ ಸ್ಥಳದಿಂದಲೇ ಕಳುವಾಯ್ತು ನಟನ ದುಬಾರಿ ಬೆಲೆಯ ಐಷಾರಾಮಿ ಕಾರು

BMW X7 ಐಷಾರಾಮಿ ಎಸ್‌ಯುವಿಯ ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟುಗಳನ್ನು ನೀಡಲಾಗಿದೆ. ಜರ್ಮನಿ ಮೂಲದ BMW ಕಂಪನಿಯ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಭಾರತದ ಬಹುತೇಕ ಸೆಲೆಬ್ರಿಟಿಗಳು BMW ಕಂಪನಿಯ ಕಾರುಗಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.

Most Read Articles

Kannada
English summary
Bmw x7 car stolen during the shooting of mission impossible 7 movie details
Story first published: Tuesday, August 31, 2021, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X