31 ಲಕ್ಷ ರೂಪಾಯಿಯ ಎಪ್ರಿಲಿಯಾ ಬೈಕ್‌ನಲ್ಲಿ ಓಡಾಡುತ್ತಿರುವ ಸ್ಟಾರ್ ನಟ: ಯಾರಿವರು?
ಬಾಲಿವುಡ್‌ನ ಹಲವು ನಟ-ನಟಿಯರು ಲಕ್ಷಗಟ್ಟಲೆ ಹಣವನ್ನು ಕೊಟ್ಟು ಐಷಾರಾಮಿ ಎಸ್‌ಯುವಿ ಹಾಗೂ ಸೆಡಾನ್‌ಗಳನ್ನು ಖರೀದಿಸುತ್ತಿರುತ್ತಾರೆ. ಆದರೆ ನಟ ಜಾನ್ ಅಬ್ರಹಾಂ ಅವರಿಗೆ ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷವಾದ ಪ್ರೀತಿವಿದ್ದು, ದುಬಾರಿ ಬೆಲೆಯ ವಿವಿಧ ಸೂಪರ್ ಬೈಕ್‌ಗಳ ಮಾಲೀಕರೂ ಆಗಿದ್ದಾರೆ. ಇತ್ತೀಚೆಗೆ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ 'ಎಪ್ರಿಲಿಯಾ'ದ ಭಾರತದ ರಾಯಭಾರಿಯಾಗಿ ಕೂಡ ಅವರನ್ನು ನೇಮಿಸಲಾಗಿದ್ದು, ಹೊಸ 'ಆರ್‌ಎಸ್457' ಬೈಕ್‌ನ್ನು ವಿತರಣೆ ತೆಗೆದುಕೊಳ್ಳುವಾಗ ಈ ಘೋಷಣೆಯನ್ನು ಮಾಡಲಾಗಿತ್ತು. ಕೆಲವೇ ದಿನಗಳ ಹಿಂದೆ ಜಾನ್ ಅಬ್ರಹಾಂ ರೂ.31 ಲಕ್ಷದ 'ಎಪ್ರಿಲಿಯಾ ಆರ್‌ಎಸ್‌ವಿ4 ಅಲ್ಟ್ರಾ ಡಾರ್ಕ್' ಮೋಟಾರ್‌ಸೈಕಲ್‌ನಲ್ಲಿ ಸಂಚರಿಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೇ.21ರಂದು ನಟ ಜಾನ್ ಅಬ್ರಹಾಂ (John Abraham) ಅವರು ಎಪ್ರಿಲಿಯಾ ಆರ್‌ಎಸ್‌ವಿ4 (Aprilia RSV4) ಬೈಕ್ ಓಡಿಸುತ್ತಿರುವ ವಿಡಿಯೋವನ್ನು 'ಎಪ್ರಿಲಿಯಾ ರೈಡರ್ಸ್ ಕ್ಲಬ್ ಬೆಂಗಳೂರು' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಮೋಟಾರ್‌ಸೈಕಲ್‌ನ್ನು ಜಾನ್ ಅಬ್ರಹಾಂ ಅವರಿಗೆ ಕಂಪನಿಯೇ ಉಡುಗೊರೆಯಾಗಿ ನೀಡಿದೆ ಎನ್ನಲಾಗಿದೆ. ಆದರೆ ಖಚಿತತೆಯಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಸಿಗುವ ನೂತನ ಆರ್‌ಎಸ್‌ವಿ4 ಬೈಕ್ ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯ (ಫೀಚರ್ಸ್)ಗಳನ್ನು ಹೊಂದಿದೆ.

ಈ ಎಪ್ರಿಲಿಯಾ ಆರ್‌ಎಸ್‌ವಿ4 ಮೋಟಾರ್‌ಸೈಕಲ್ ಶಕ್ತಿಯುತ 1099 ಸಿಸಿ ಎಂಜಿನ್ ಪಡೆದಿದ್ದು, 217 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 125 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, 15.4 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಚ್ಚ ಹೊಸ ಎಪ್ರಿಲಿಯಾ ಆರ್‌ಎಸ್‌ವಿ4 ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಟ್ರಿಪಲ್ ಎಲ್ಇಡಿ ಹೆಡ್‌ಲೈಟ್ ಸೆಟಪ್, ಡಿಆರ್‌ಎಲ್, ಮಲ್ಟಿ-ಲೆವೆಲ್ ಎಂಜಿನ್ ಬ್ರೇಕಿಂಗ್, 5-ಇಂಚಿನ ಟಿಎಫ್‌ಟಿ ಕನ್ಸೋಲ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ರೈಡಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. 202 ಕೆಜಿ ತೂಕವಿರುವ ಈ ಬೈಕ್, 17.9 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದ್ದು, ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ.

ಈಚೆಗೆ ನಟ ಜಾನ್ ಅಬ್ರಹಾಂ ಅವರು ವಿತರಣೆ ಪಡೆದಿದ್ದ ಎಪ್ರಿಲಿಯಾ ಆರ್‌ಎಸ್ 457 (Aprilia RS 457) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ರೂ.4.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 457 ಸಿಸಿ ಎಂಜಿನ್ ಪಡೆದಿದ್ದು, 46.9 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 43.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಎಪ್ರಿಲಿಯಾ ಆರ್‌ಎಸ್ 457 ಮೋಟಾರ್‌ಸೈಕಲ್ ಎಲ್ಇಡಿ ಲೈಟಿಂಗ್ ಸೆಟಪ್, 5 - ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರೈಡ್-ಬೈ-ವೈರ್ ಸಿಸ್ಟಮ್ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಪೋರ್ಟ್, ರೋಡ್ & ರೈನ್ ಎಂಬ ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 320 ಎಂಎಂ ಹಾಗೂ ಹಿಂಭಾಗ (ರೇರ್) 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ಡುಯಲ್ - ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕೂಡ ಒಳಗೊಂಡಿದೆ. 17 - ಇಂಚಿನ ಅಲಾಯ್ ವೀಲ್ಸ್ ಪಡೆದಿರುವ ಈ ಮೋಟಾರ್‌ಸೈಕಲ್, 175 ಕೆಜಿ ತೂಕವಿದೆ. ಈ ಬೈಕ್‌ಗೆ ಯಮಹಾ ಆರ್3, ಕೆಟಿಎಂ ಆರ್‌ಸಿ 390 ಹಾಗೂ ಕವಾಸಕಿ ನಿಂಜಾ 400 ಮೋಟಾರ್‌ಸೈಕಲ್‌ಗಳು ಪ್ರಬಲ ಪ್ರತಿಸ್ಪರ್ಧಿಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications