'ಜಮಲು ಕುಡು' ಎಂದು ಕುಣಿಯುತ್ತಲೇ 3 ಕೋಟಿ ಬೆಲೆಯ ಕಾರು ಖರೀದಿ: ಅನಿಮಲ್‌ ನಟನ ಈ ಕಾರಿಗೆ ಫಿಧಾ!

ಇತ್ತೀಚಿನ ಬೆಳವಣಿಗೆಗಳು ನೋಡಿದರೆ ನಟ ಮತ್ತು ನಟಿಯರಿಗೆ ರೇಂಜ್‌ ರೋವರ್‌ ಎಸ್‌ಯುವಿಗಳೆಂದರೆ ಭಾರೀ ಇಷ್ಟ ಎಂದೆನಿಸುತ್ತಿದೆ. ಹೀಗೆನ್ನಲು ಕಾರಣವೇನೆಂದರೆ ಇತ್ತೀಚೆಗೆ ನಟ ನಟಿಯರು ಹೊಸ ಕಾರನ್ನು ಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗ ಬಹುತೇಕವಾಗಿ ನಮಗೆ ಕಾಣ ಸಿಗುವುದು ರೇಂಜ್‌ ರೋವರ್ ಕಂಪನಿಗಳ ಎಸ್‌ಯುವಿಗಳೆ. ಇದೀಗ ಆ ಪಟ್ಟಿಗೆ ಮತ್ತೊಬ್ಬ ಪ್ರಸಿದ್ದ ನಟ ಸೇರಿಕೊಂಡಿದ್ದು, ರೇಂಜ್‌ ರೋವರ್‌ನ ಅತೀ ಹೆಚ್ಚು ಬೆಲೆಬಾಳುವ ಎಸ್‌ಯುವಿ ಕಾರು ಮಾದರಿಯನ್ನು ಖರೀದಿಸಿದ್ದು, ಇಂದು ನಾವು ಆ ಕಾರು ಯಾವುದೆಂದು ನೋಡಲಿದ್ದೇವೆ.

ಬಾಳಿವುಡ್‌ನ ಪ್ರಸಿದ್ದ ನಟ ಬಾಬಿ ಡಿಯೋಲ್ ಇತ್ತೀಚೆಗೆ ಈ ಬಹುಕೋಟಿ ಐಷಾರಾಮಿ ಎಸ್‌ಯುವಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನಟ ಇತ್ತೀಚೆಗೆ ತನ್ನ ಹೊಚ್ಚಹೊಸ ಐಷಾರಾಮಿ ಎಸ್‌ಯುವಿಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ಗುರುತಿಸಲಾಗಿದೆ. ರೇಂಜ್ ರೋವರ್ ಎಸ್‌ಯುವಿಗಳು ದೀರ್ಘಕಾಲದವರೆಗೆ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಜನಪ್ರಿಯವಾಗಿದ್ದು , ರೇಂಜ್ ರೋವರ್‌ಗಳ ಟ್ರೆಂಡ್ ಮತ್ತೆ ಬರುತ್ತಿರುವಂತೆ ತೋರುತ್ತಿದೆ.

Bollywood Actor Sunny Deol Brought A Brand New Range Rover Autobiography

ಈ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೊದಲ್ಲಿ, ಬಾಬಿ ಡಿಯೋಲ್ ತನ್ನ ಹೊಚ್ಚಹೊಸ ರೇಂಜ್ ರೋವರ್ ಎಸ್‌ಯುವಿಯಿಂದ ಹೊರಬರುವುದನ್ನು ನಾವು ನೋಡಬಹುದಾಗಿದೆ. ವಿಮಾನ ನಿಲ್ದಾಣದಲ್ಲಿ ತನಗಾಗಿ ಕಾಯುತ್ತಿರುವ ಛಾಯಾಗ್ರಾಹಕರು ಮತ್ತು ವ್ಲಾಗರ್‌ಗಳನ್ನು ನಟ ಸ್ವಾಗತಿಸಿ, ಕ್ಯಾಮೆರಾಗಳಿಗೆ ಪೋಸ್ ನೀಡಿದ ನಂತರ ಅವರು ಸರಳವಾಗಿ ಒಳಗೆ ಹೋಗುತ್ತಾರೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ಅತ್ಯಂತ ಜನಪ್ರಿಯವಾಗಿದೆ (Range Rover Autobiography) ಮತ್ತು ಈ ಬ್ರಾಂಡ್‌ನ ಪ್ರಮುಖ SUV ಆಗಿದೆ. ವೀಡಿಯೊದಲ್ಲಿ ಇಲ್ಲಿ ಕಂಡುಬರುವ ಕಾರು ರೇಂಜ್ ರೋವರ್ LWB ಆಟೋಬಯೋಗ್ರಫಿ ಎಂದು ಗುರುತಿಸಲಾಗಿದೆ. ಈ ಕಾರು ಫ್ಯೂಜಿ ವೈಟ್‌ನ ಬಣ್ನದಲ್ಲಿದ್ದು ಅತ್ಯಂತ ಪ್ರೀಮಿಯಂ ಆಗಿ ಕಾಣುತ್ತದೆ. ಕಾರಿನ ಹೊರಭಾಗವು ಬಿಳಿಯಾಗಿದ್ದರೆ, ಒಳಭಾಗವು ಕಂದು ಬಣ್ಣದ ವಿನ್ಯಾಸವನ್ನು ಹೊಂದಿದೆ.

Bollywood Actor Sunny Deol Brought A Brand New Range Rover Autobiography

ಎಲ್ಲಾ ರೇಂಜ್ ರೋವರ್‌ಗಳಂತೆ, ಈ ರೂಪಾಂತರವು ಅದರ ಸೂಪರ್ ಐಷಾರಾಮಿ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಇದು ಪಿವಿ ಪ್ರೊ ಸಾಫ್ಟ್‌ವೇರ್ ಅನ್ನು ಒಳಗೊಂಡಿರುವ ಫ್ಲೋಟಿಂಗ್ ಕರ್ವ್ಡ್ 13.1-ಇಂಚಿನ ಟಚ್ ಡಿಸ್ಪ್ಲೇ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. 35 ಸ್ಪೀಕರ್‌ಗಳೊಂದಿಗೆ 1,600W ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಮ್ ಅನ್ನು ಸಹ ಹೊಂದಿದೆ.

ಇನ್ನು ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 394 Bhp ಮತ್ತು 550 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ 3.0-ಲೀಟರ್, ಇನ್‌ಲೈನ್ 6-ಸಿಲಿಂಡರ್ ಎಂಜಿನ್ ಅನ್ನು ಬಳಸುವ ಪೆಟ್ರೋಲ್ ರೂಪಾಂತರವನ್ನು ಬಾಬಿ ಡಿಯೋಲ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ರೇಂಜ್ ರೋವರ್‌ನ ಈ ರೂಪಾಂತರದ ಬೆಲೆ ಸುಮಾರು 2.60 ಕೋಟಿ ರೂ., ಎಕ್ಸ್ ಶೋರೂಂ.

ಇತ್ತೀಚೆಗೆ, ರೇಂಜ್ ರೋವರ್ ಭಾರತದಲ್ಲಿ ತಮ್ಮ ಕಾರುಗಳನ್ನು ನಿರ್ಮಿಸುವುದನ್ನು ಆರಂಭಿಸಿದೆ. ಇದರೊಂದಾಗಿ ಈ ಕಾರಿನ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಪೆಟ್ರೋಲ್ ಲಾಂಗ್‌ ವ್ಹೀಲ್‌ ಬೇಸ್‌ ಆಟೋಬಯೋಗ್ರಫಿ ರೂಪಾಂತರದ ಆರಂಭಿಕ ಬೆಲೆ 3.16 ಕೋಟಿ ರೂ., ಎಕ್ಸ್ ಶೋ ರೂಂ. ಆದರೆ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ, SUV ಬೆಲೆ 56 ಲಕ್ಷ ರೂಪಾಯಿಗಳ ಕುಸಿತವನ್ನು ಕಂಡು ಈಗ ಇದರ ಬೆಲೆಯನ್ನು 2.60 ಕೋಟಿ ರೂ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 24, 2024, 10:59 [IST]
English summary
Bollywood actor sunny deol brought a brand new range rover autobiography
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+