Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಾಲಿ ರೈಡ್ ವೀಡಿಯೊ ಪೋಸ್ಟ್ ಮಾಡಿ ದಂಡ ತೆತ್ತ ನಟ
ಫೆಬ್ರವರಿ 14 ವಿಶ್ವ ಪ್ರೇಮಿಗಳ ದಿನ. ಈ ದಿನ ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಸಂಭ್ರಮವನ್ನು ಆಚರಿಸಿದರು. ಈ ದಿನ ಪ್ರೇಮಿಗಳು ಮಾತ್ರವಲ್ಲದೆ ದಂಪತಿಗಳು ಸಹ ತಮ್ಮ ಬಾಳ ಸಂಗಾತಿಗಳೊಂದಿಗೆ ಸಂಭ್ರಮವನ್ನು ಆಚರಿಸಿದರು.

ಫೆಬ್ರವರಿ 14ರಂದು ತಮ್ಮ ಪತ್ನಿಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಲು ಹೋದ ನಟರೊಬ್ಬರು ತೊಂದರೆಗೆ ಸಿಲುಕಿದ್ದಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜನಪ್ರಿಯ ನಟನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ತೊಂದರೆಗೆ ಸಿಲುಕಿದ ಜನಪ್ರಿಯ ನಟ ವಿವೇಕ್ ಒಬೆರಾಯ್. ಅವರು ತಮ್ಮ ಪತ್ನಿಯ ಜೊತೆ ಫೆಬ್ರವರಿ 14ರಂದು ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಜಾಲಿ ರೈಡ್ ಹೋಗಿದ್ದರು.

ಆ ಸಮಯದಲ್ಲಿ ಅವರು ಹಾಗೂ ಅವರ ಪತ್ನಿ ಹೆಲ್ಮೆಟ್ ಧರಿಸಿರಲಿಲ್ಲ ಎಂದು ವರದಿಯಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಇದು ದೃಢಪಟ್ಟಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವೈರಲ್ ಆಗಿರುವ ಈ ವೀಡಿಯೊಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ವಿಶೇಷವೆಂದರೆ ಈ ವೀಡಿಯೊವನ್ನು ಸ್ವತಃ ವಿವೇಕ್ ಒಬೆರಾಯ್ ರವರೇ ಪೋಸ್ಟ್ ಮಾಡಿದ್ದಾರೆ. ಈ ಸುಂದರವಾದ ಪ್ರೇಮಿಗಳ ದಿನದಂದು ನಾನು ಮತ್ತು ನನ್ನ ಹೆಂಡತಿ.

ಇದು ನಿಜಕ್ಕೂ ಉಲ್ಲಾಸಕರ ಸವಾರಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತಮಗೆ ಸಂಕಷ್ಟ ತರುತ್ತದೆ ಎಂದು ಅವರು ಭಾವಿಸಿರಲಿಲ್ಲ. ತಮ್ಮ ಪತ್ನಿಯೊಂದಿಗೆ ಜಾಲಿ ರೈಡಿಗೆ ತೆರಳಿದಾಗ ಅವರು ಹಾಗೂ ಅವರ ಪತ್ನಿ ಹೆಲ್ಮೆಟ್ ಧರಿಸಿರಲಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜೊತೆಗೆ ಕರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಫೇಸ್ ಮಾಸ್ಕ್ ಸಹ ಧರಿಸಿರಲಿಲ್ಲ. ಈ ವೀಡಿಯೊ ವೈರಲ್ ಆದ ಕೂಡಲೇ ಸಾಮಾಜಿಕ ಕಾರ್ಯಕರ್ತರಾದ ಮೀನು ವರ್ಗೀಸ್, ವಿವೇಕ್ ಒಬೆರಾಯ್ ಅವರ ವಿರುದ್ಧ ದೂರು ನೀಡಿದ್ದಾರೆ.

ಈ ವಿಷಯ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಕಿವಿಗೆ ಬಿದ್ದಿದೆ. ತಕ್ಷಣವೇ ಎಚ್ಚೆತ್ತ ಅವರು ನಟನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದರ ಬೆನ್ನಲ್ಲೇ ಮುಂಬೈ ಸ್ಯಾಂಟಕ್ರೂಜ್ ಟ್ರಾಫಿಕ್ ಪೊಲೀಸರು ನಟ ವಿವೇಕ್ ಒಬೆರಾಯ್ ಅವರಿಗೆ ದಂಡ ವಿಧಿಸಿದ್ದಾರೆ. ವಿವೇಕ್ ಒಬೆರಾಯ್ ಅವರಿಗೆ ರೂ.500 ದಂಡವನ್ನು ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಈ ದಂಡವನ್ನು ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ವಿಧಿಸಲಾಗಿದೆ. ಕರೋನಾ ವೈರಸ್ ಕಾರಣಕ್ಕೆ ಎಲ್ಲರಿಗೂ ಫೇಸ್ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.ವಿವೇಕ್ ಒಬೆರಾಯ್ ಈ ನಿಯಮಗಳನ್ನು ಉಲ್ಲಂಘಿಸಿರುವುದು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಟ ವಿವೇಕ್ ಒಬೆರಾಯ್ ಇತ್ತೀಚೆಗಷ್ಟೇ ರೂ.16 ಕೋಟಿ ಹಣವನ್ನು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿರುವ ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದರು.