ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

ಬಾಲಿವುಡ್ ರಂಗದಲ್ಲಿ ಆಕ್ಷನ್ ಜೊತೆಗೆ ಕಾಮೆಡಿ ಚಿತ್ರಗಳಲ್ಲಿ ನಟಿಸುವ ಮೂಲಕ ತನ್ನದೇ ಆದ ಅಭಿಮಾನ ಬಳಗವನ್ನು ಕಟ್ಟಿಕೊಂಡಿರುವ ಕಿಲಾಡಿ ಅಕ್ಷಯ್ ಕುಮಾರ್ ಕೆಲವೊಂದು ಗಮನಾರ್ಹ ಆಕ್ಷನ್ ಕಾರುಗಳನ್ನು ಹೊಂದಿದ್ದಾರೆ.

ಸಿನೆಮಾ ಜೀವನವನ್ನು ಹೊರತುಪಡಿಸಿದರೆ ನೈಜ ಜೀವನದಲ್ಲೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಅಕ್ಷಯ್ ಕುಮಾರ್ ಇತರ ನಟರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಲೇಖನದಲ್ಲಿ ಅಕ್ಷಯ್ ಕುಮಾರ್ ಬಳಿಯಿರುವ ಅತ್ಯಾಕರ್ಷಕ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ರೇಂಜ್ ರೋವರ್ ವೋಗ್

ರೇಂಜ್ ರೋವರ್ ವೋಗ್

ನಿಮಗಿದು ಗೊತ್ತೇ? ಸಿನೆಮಾ ರಂಗದಲ್ಲಿ ಅಕ್ಷಯ್ ಕುಮಾರ್ ಎಂದೇ ಮಿಂಚುತ್ತಿರುವ ಈ ಬಾಲಿವುಡ್ ಸ್ಟಾರ್ ನ ನೈಜ ಹೆಸರು ರಾಜೀವ್ ಹರಿ ಓಂ ಭಾಟಿಯಾ ಆಗಿದೆ. ಹಾಗೆಯೇ ಕೋಟಿ ಬೆಲೆ ಬಾಳುವ ರೇಂಜ್ ರೋವರ್ ವೋಗ್ ಕಾರನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

ಪೋರ್ಷೆ ಕೆಯನ್ ಗೆ ನೇರ ಎದುರಾಳಿಯಾಗಿರುವ ರೇಂಜ್ ರೋವರ್ ವೋಗ್ ಬೆಲೆ 2.18 ಕೋಟಿ ರು.ಗಳಿಂದ 2.75 ಕೋಟಿ ರುಪಾಯಿಗಳ ವರೆಗೆ ದುಬಾರಿಯೆನಿಸುತ್ತದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯವಾಗುತ್ತಿದೆ. ಅಂತೆಯೇ ಟಾಪ್ ಎಂಡ್ ಪೆಟ್ರೋಲ್ ಮಾದರಿಯು 5 ಲೀಟರ್ ವಿ8 ಸೂಪರ್ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಫಾಟಂ

ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಮಾತ್ರವಲ್ಲದೆ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಅಕ್ಷಯ್ ಕುಮಾರ್ ಸಹ ಹೊಂದಿದ್ದಾರೆ. ಘೋಸ್ಟ್ ಮೇಲ್ದರ್ಜೆಯಲ್ಲಿ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಫಾಟಂ 3.34 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

ರೋಲ್ಸ್ ರಾಯ್ಸ್ ಫಾಟಂದಲ್ಲಿರುವ ಶಕ್ತಿಶಾಲಿ 6.8 ಲೀಟರ್ ವಿ12 ಪೆಟ್ರೋಲ್ ಎಂಜಿನ್ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದಿದ್ದು, ಅಕ್ಷಯ್ ಕುಮಾರ್ ನೆಚ್ಚಿನ ಗಾಡಿಯೆನಿಸಿಕೊಂಡಿದೆ.

ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್

ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್

ಇತರೆ ಸೆಲೆಬ್ರಿಟಿಗಳಂತೆಯೇ ಐಷಾರಾಮಿ ಕಾರುಗಳ ಮೇಲೆ ಅಕ್ಷಯ್ ಕುಮಾರ್ ಸಹ ಹೆಚ್ಚಿನ ಒಲವು ತೋರಿದ್ದಾರೆ. ಅಷ್ಟೇ ಯಾಕೆ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಹೊಂದಿರುವ ದೇಶದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಅಕ್ಷಯ್ ಕುಮಾರ್ ಸಹ ಓರ್ವರಾಗಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

3.21 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಿಕೊಂಡಿರುವ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ 4.0 ಲೀಟರ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 660 ಎನ್ ಎಂ ತಿರುಗುಬಲದಲ್ಲಿ 500 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಮಗದೊಂದು 6.0 ಲೀಟರ್ ಎಂಜಿನ್ 800 ಎನ್ ಎಂ ತಿರುಗುಬಲದಲ್ಲಿ 616 ಅಶ್ವಶಕ್ತಿಯನ್ನು ನೀಡುತ್ತದೆ.

ಹೋಂಡಾ ಸಿಆರ್ ವಿ

ಹೋಂಡಾ ಸಿಆರ್ ವಿ

ತಮ್ಮ ದೈನಂದಿನ ಸವಾರಿಗಾಗಿ ಹೋಂಡಾ ಸಿಆರ್ ವಿ ಕ್ರೀಡಾ ಬಳಕೆಯ ವಾಹನವನ್ನು ಅಕ್ಷಯ್ ಕುಮಾರ್ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದು ಅದ್ಭುತ ಚಾಲನಾ ಅನುಭವವನ್ನು ಖಾತ್ರಿಪಡಿಸುತ್ತದೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

ಅಕ್ಷಯ್ ಕುಮಾರ್ ಹೋಂಡಾ ಸಿಆರ್ ವಿ ತಾಜಾ ಆವೃತ್ತಿಯನ್ನು ಖರೀದಿಸಿದ್ದು, ಇದರಲ್ಲಿರುವ 2.0 ಲೀಟರ್ ಮತ್ತು 2.04 ಎಂಜಿನ್ ಗಳನ್ನು ಆಳವಡಿಸಲಾಗಿದೆ. ಅಲ್ಲದೆ 21.09 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಪೋರ್ಷೆ ಕೆಯನ್

ಪೋರ್ಷೆ ಕೆಯನ್

ಐಷಾರಾಮಿ ಮತ್ತು ನಿರ್ವಹಣೆಯಲ್ಲಿ ಯಾವುದೇ ರಾಜಿಗೂ ತಯಾರಿಲ್ಲದ ಪೋರ್ಷೆ ಬ್ರಾಂಡ್ ದೇಶದ ಸೆಲೆಬ್ರಿಟಿಗಳಿಗೆ ಬಲು ಪ್ರಿಯ. ಇದೇ ಕಾರಣಕ್ಕಾಗಿ ತಾರೆಗಳ ನಡುವೆ ಪೋರ್ಷೆ ಕೆಯನ್ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಕ್ಷನ್ ಕಾರುಗಳು

1.04 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ಪೋರ್ಷೆ ಕೆಯನ್ ಎಸ್ ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಟಾಪ್ ಎಂಡ್ ಮಾದರಿಯಲ್ಲಿರುವ 4.8 ಲೀಟರ್ ವಿ8 ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 500 ಅಶ್ವಶಕ್ತಿ ಉತ್ಪಾದಿಸುತ್ತದೆ.

More from DriveSpark

Article Published On: Friday, June 3, 2016, 10:37 [IST]
English summary
Bollywood star Akshay Kumar's Car Collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+