ಮಿಸ್ ಮಾಡದಿರಿ; ಬಾಲಿವುಡ್ ತಾರೆಯರ ನೆಚ್ಚಿನ ಬೈಕ್ ಗಳು

By Nagaraja

ತಾರೆಯರಿಗೆ ದುಬಾರಿ ವಾಹನಗಳ ಮೇಲಿನ ಅಭಿರುಚಿ ಸ್ವಲ್ಪ ಜಾಸ್ತಿನೇ ಆಗಿರುತ್ತದೆ. ಬಿಡುವಿಲ್ಲದ ಸಿನೆಮಾ ಜೀವನದ ನಡುವೆಯೂ ವಾಹನಗಳ ಮೇಲಿನ ಪ್ರೀತಿಯನ್ನು ತೋರಿಸಲು ಎಂದೂ ಹಿಂಜರಿಯುವುದಿಲ್ಲ.

Also Read: ಕೊನೆಗೂ ಪ್ರೇಮಾಭಿಲಾಷೆ ಬಹಿರಂಗಪಡಿಸಿದ ಅಮಿತಾಬ್ ಬಚ್ಚನ್

ತಾರೆಯರು ಅಭಿಮಾನಿಗಳ ಕಣ್ತಪ್ಪಿಸಿಕೊಂಡು ರಾತ್ರೋರಾತಿ ವಾಹನ ಓಡಿಸಿರುವ ಘಟನೆಯನ್ನು ನಾವು ಎಷ್ಟು ಬಾರಿ ಸುದ್ದಿ ಜಾಲಗಳಲ್ಲಿ ಓದಿರುತ್ತೇವೆ. ಇಲ್ಲಿ ಗಮನಾರ್ಹ ಅಂಶವೆಂದರೆ ನಟರೊಂದಿಗೆ ನಟಿಯರು ಸಹ ಲಕ್ಷಗಟ್ಟಲೆ ಬೆಲೆಬಾಳುವ ಬೈಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಲೇಖನದಲ್ಲಿ ಬಾಲಿವುಡ್ ತಾರೆಯರ ನೆಚ್ಚಿನ ಬೈಕ್ ಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ದಷ್ಟ ಪುಷ್ಠ ದೇಹಕಾಯದ ಜಾನ್ ಅಬ್ರಹಾಂ ಅತಿ ಹೆಚ್ಚು ಯುವ ಜನಾಂಗದ ಅಭಿಮಾನಿಗಳನ್ನು ಕಟ್ಟಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದ್ದಲ್ಲಿ, ಬಹುಶ: ಬಾಲಿವುಡ್ ನಲ್ಲಿ ಜಾನ್ ಅಬ್ರಹಾಂ ಅವರನ್ನು ಮೀರಿಸುವಂತಹ ಬೈಕ್ ಪ್ರೇಮಿ ಮಗದೋರ್ವ ಇರಲಾರದು. ಅವರ ಬಳಿ 25 ಲಕ್ಷ ರು.ಗಳಷ್ಟು ಬೆಲೆ ಬಾಳುವ ಎಪ್ರಿಲಿಯಾ ಆರ್‌ಎಸ್‌ವಿ4, 23 ಲಕ್ಷ ರು.ಗಳ ಯಮಹಾ 1700ಸಿಸಿ ವಿ ಮ್ಯಾಕ್ಸ್, 17 ಲಕ್ಷ ರು.ಗಳ ಕವಾಸಕಿ ಝಡ್‌ಎಕ್ಸ್ ನಿಂಜಾ, 15 ಲಕ್ಷಗಳ ಸುಜುಕಿ ಹಯಾಬುಸ, 14 ಲಕ್ಷಗಳ 1000 ಸಿಸಿ ಯಮಹಾ ಆರ್‌1, 10 ಲಕ್ಷಗಳ ಯಮಹಾ ಎಂಟಿ-01, 9 ಲಕ್ಷಗಳ ಯಮಹಾ ರೇವನ್, ರಜಪೂತನ್ ಲೈಮ್ ಲೈಟ್ ಇತ್ಯಾದಿ ಬೈಕ್ ಗಳ ದೊಡ್ಡ ಸಂಗ್ರಹವೇ ಇದೆ.

 ಸಂಜಯ್ ದತ್

ಸಂಜಯ್ ದತ್

ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸದಿಂದ ಮುಕ್ತವಾಗಿರುವ ಬಾಲಿವುಡ್ ನಟ ಸಂಜಯ್ ದತ್ ಬಳಿ ಅಂದಾಜು 15 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಫಾಟ್ ಬಾಯ್ ಬೈಕಿದೆ.

ಶಾಹೀದ್ ಕಪೂರ್

ಶಾಹೀದ್ ಕಪೂರ್

ಮಗದೊರ್ವ ಜನಪ್ರಿಯ ನಟಲಾಗಿರುವ ಶಾಹೀದ್ ಕಪೂರ್ ಅವರ ಬಳಿ 15 ಲಕ್ಷ ರು.ಗಳಷ್ಟು ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಫಾಟ್ ಬಾಯ್ ಮತ್ತು 10 ಲಕ್ಷ ರು.ಗಳಷ್ಟು ದುಬಾರಿಯ ಯಮಹಾ ಎಂಟಿ-01 ಬೈಕಿದೆ.

ಸೈಫ್ ಆಲಿ ಖಾನ್

ಸೈಫ್ ಆಲಿ ಖಾನ್

ಪತ್ನಿ ಹಾಗೂ ನಟಿ ಕರೀನಾ ಕಪೂರ್ ಗೆ ಬೈಕ್ ರೈಡಿಂಗ್ ಅಂದ್ರೆ ತುಂಬಾನೇ ಭಯವಾದರೂ ಆಕೆಯ ಪತಿ ಹಾಗೂ ನಟ ಸೈಫ್ ಆಲಿ ಖಾನ್ ಏಳು ಲಕ್ಷ ರು.ಗಳಷ್ಟು ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಐಯಾನ್ 883 ಬೈಕ್ ನಲ್ಲಿ ಸವಾರಿ ಹೊಡೆಯಲು ಇಷ್ಟಪಡುತ್ತಾರೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ನಿಜ ಜೀವನದಲ್ಲೂ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಳಿಯೂ 13 ಲಕ್ಷಗಳಷ್ಟು ಬೆಲೆ ಬಾಳುವ ಹೋಂಡಾ ಸಿಬಿಆರ್ ಇಂಟರ್ ನ್ಯಾಷನಲ್ ಬೈಕಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಸಹ ಕಟ್ಟಾ ಬೈಕ್ ಪ್ರೇಮಿಯಾಗಿದ್ದಾರೆ. ಅವರು 16 ಲಕ್ಷ ರು.ಗಳಷ್ಟು ಬೆಲೆ ಬಾಳುವ ಸುಜುಸಿ ಇನ್ಟ್ರ್ರುಂಡರ್ ಎಂ1800ಆರ್‌ಝಡ್ ಮತ್ತು 15 ಲಕ್ಷ ರು.ಗಳಷ್ಟು ಬೆಲೆ ಬಾಳುವ ಸುಜುಕಿ ಹಯಾಬುಸ ಬೈಕ್ ಹೊಂದಿದ್ದಾರೆ.

ನೀಲ್ ನಿತಿನ್ ಮುಖೇಶ್

ನೀಲ್ ನಿತಿನ್ ಮುಖೇಶ್

ಹಿಂದಿ ಚಲನಚಿತ್ರರಂಗದಲ್ಲಿ ದೀರ್ಘವಾಧಿಯ ವರೆಗೂ ನಟನಾ ಕೌಶಲ್ಯ ಮೆರೆಯಲು ಉತ್ಸುಕತೆಯಲ್ಲಿರುವ 35ರ ಹರೆಯದ ನೀಲ್ ನಿತಿನ್ ಮುಖೇಶ್ 16 ಲಕ್ಷ ರು.ಗಳ ಡುಕಾಟಿ 848 ಬೈಕ್ ಇಟ್ಟುಕೊಂಡಿದ್ದಾರೆ.

ಉದಯ್ ಚೋಪ್ರಾ

ಉದಯ್ ಚೋಪ್ರಾ

ಯಶ್ ಚೋಪ್ರಾ ಪುತ್ರ ಉದಯ್ ಚೋಪ್ರಾ ತಮ್ಮ ಬಳಿ ಜನಪ್ರಿಯ 'ಧೂಮ್' ಚಿತ್ರದಲ್ಲಿ ಬಳಕೆ ಮಾಡಿರುವ ಎಲ್ಲ ಬೈಕ್ ಗಳನ್ನು ಹೊಂದಿದ್ದಾರೆ. ಈ ಸಾಲಿನಲ್ಲಿ 16 ಲಕ್ಷ ಬೆಲೆ ಬಾಳುವ ಸುಜುಕಿ ಜಿಎಸ್‌ಎಕ್ಸ್‌ಆರ್ ಹಾಗೂ 77,000 ರು.ಗಳ ಸುಜುಕಿ ಜಿಎಸ್‌ಆರ್ ಪ್ರಮುಖವೆನಿಸಿದೆ.

ಆರ್ ಮಾಧವನ್

ಆರ್ ಮಾಧವನ್

ತಮಿಳು ಚಿತ್ರರಂಗದಲ್ಲಿ ಉತ್ತುಂಗಕ್ಕೇರುವ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಿರುವ ನಟ ಆರ್ ಮಾಧವನ್ 33 ಲಕ್ಷ ರು.ಗಳ ಬಿಎಂಡಬ್ಲ್ಯು ಕೆ1600 ಜಿಟಿಎಲ್ ಬೈಕ್ ಹೊಂದಿದ್ದಾರೆ.

ವಿವೇಕ್ ಓಬೆರಾಯ್

ವಿವೇಕ್ ಓಬೆರಾಯ್

ಇತರೆ ನಟರನ್ನು ಹೋಲಿಕೆ ಮಾಡಿದಾಗ ವಿವೇಕ್ ಓಬೆರಾಯ್ ಬೈಕ್ ರುಚಿ ಸ್ವಲ್ಪ ಜಾಸ್ತಿನೆ ಇದೆ. ಯಾಕೆಂದರೆ ಅವರು ಬರೋಬ್ಬರಿ ಅರ್ಧ ಕೋಟಿ ಬೆಲೆ ಬಾಳುವಷ್ಟು ಡುಕಾಟಿ 1098 ಮತ್ತು 23 ಲಕ್ಷ ರು.ಗಳ ಯಮಹಾ ವಿ ಮ್ಯಾಕ್ ಬೈಕ್ ಗಳನ್ನು ಹೊಂದಿದ್ದಾರೆ.

ಫರ್ದೀನ್ ಖಾನ್

ಫರ್ದೀನ್ ಖಾನ್

ಅತ್ತ ಫರ್ಧೀನ್ ಖಾನ್ ಸಹ ಅಂದಾಜು 63 ಲಕ್ಷ ರು.ಗಳಷ್ಟು ಬೆಲೆ ಬಾಳುವ ಕವಾಸಕಿ ಝಡ್ ಝಡ್ ಆಱ್ 1200 ಬೈಕ್ ಖರೀದಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ನಟರಿಗಿಂತಲೂ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಬಾಲಿವುಡ್ ಬಹು ಬೇಡಿಕೆಯ ನಟಿ ಪ್ರಿಯಾಂಕಾ ಚೋಪ್ರಾ ಆರು ಲಕ್ಷ ರು.ಗಳಷ್ಟು ದುಬಾರಿಯ ಹಾರ್ಲೆ ಡೇವಿಡ್ಸನ್ ಬೈಕ್ ಹೊಂದಿದ್ದಾರೆ.

ಗುಲ್ ಪನಾಗ್

ಗುಲ್ ಪನಾಗ್

ಆಫ್ ರೋಡ್ ಬೈಕಿಂಗ್ ನಲ್ಲೂ ತಮ್ಮ ಮಿಂಚಿಂಗ್ ತೋರಿರುವ ಬಾಲಿವುಡ್ ನಟಿ ಗುಲ್ ಪನಾಗ್ ನೆಚ್ಚಿನ ಬೈಕ್ ರಾಯಲ್ ಎನ್ ಫೀಲ್ಡ್ ಆಗಿದೆ.

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್

ಮಹಿಳೆಯರಿಂದ ಭಾರದ ಬೈಕ್ ಗಳನ್ನು ಓಡಿಸಲು ಸಾಧ್ಯವಿಲ್ಲ ಎಂಬುದನ್ನು ಮಗದೊಮ್ಮೆ ತಪ್ಪೆಂದು ಸಾಬೀತುಪಡಿಸಿರುವ ಶ್ರದ್ಧಾ ಕಪೂರ್ ಸಹ ರಾಯಲ್ ಎನ್ ಫೀಲ್ಡ್ ಬೈಕ್ ಗಳ ಮೇಲೆ ಪ್ರೀತಿಯನ್ನು ತೋರಿದ್ದಾರೆ.

ಇವನ್ನೂ ಓದಿ

ವಿಶ್ವದ ಬೆಲೆ ಬಾಳುವ ಕ್ರೀಡಾಪಟುವಿನ 135 ಕೋಟಿ ದುಬಾರಿಯ ಜೆಟ್

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್

More from DriveSpark

Article Published On: Monday, March 7, 2016, 12:18 [IST]
English summary
Bollywood stars and their Favourite bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+