ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಕೋವಿಡ್ 19ನಿಂದಾಗಿ ಭಾರತದಲ್ಲಿ ತನ್ನ ಯಾವುದೇ ಉದ್ಯೋಗಿ ಮೃತಪಟ್ಟರೆ ಅವರ ಕುಟುಂಬಗಳಿಗೆ ಸರಾಸರಿ ರೂ.70 ಲಕ್ಷಗಳ ವಿಮಾ ರಕ್ಷಣೆ ನೀಡುವುದಾಗಿ ವಾಹನಗಳ ಬಿಡಿ ಭಾಗ ತಯಾರಕ ಕಂಪನಿಯಾದ ಬಾಷ್ ತಿಳಿಸಿದೆ.

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಇದರ ಜೊತೆಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಪರಿಹಾರ ಕ್ರಮಗಳನ್ನು ಚುರುಕುಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ನೌಕರರು ಸಾವನ್ನಪ್ಪಿದಲ್ಲಿ ಅವರ ಕುಟುಂಬಕ್ಕೆ ಮೂರು ವರ್ಷಗಳವರೆಗೆ ವೈದ್ಯಕೀಯ ವಿಮೆ ನೀಡಲಾಗುವುದು ಎಂದು ಬಾಷ್ ಹೇಳಿದೆ.

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಕರೋನಾ ವೈರಸ್ ಎರಡನೇ ಅಲೆಯಲ್ಲಿ ಆಕ್ಸಿಜನ್ ಹಾಗೂ ಆರೋಗ್ಯ ಸೌಲಭ್ಯಗಳಿಗೆ ಕೊರತೆಯುಂಟಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಹಾಗೂ ಪುಣೆ ಕ್ಯಾಂಪಸ್‌ಗಳಲ್ಲಿ ಕರೋನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕಂಪನಿ ಹೇಳಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಆಕ್ಸಿಜನ್ ಉತ್ಪಾದನಾ ಘಟಕದಲ್ಲಿಯೂ ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ. ಈ ಉತ್ಪಾದನಾ ಘಟಕಗಳು ಕೋವಿಡ್ 19ನಿಂದ ಉಂಟಾಗಿರುವ ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿವೆ.

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಈ ಸಂಕಷ್ಟದ ಸಮಯದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರು ಒಗ್ಗಟ್ಟನ್ನು ತೋರಿಸಬೇಕು. ಸರಿಯಾದ ಜ್ಞಾನವನ್ನು ಹೊಂದಿರಬೇಕು ಹಾಗೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪರಸ್ಪರ ಬೆಂಬಲಿಸಬೇಕು ಎಂದು ಬಾಷ್ ಹೇಳಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ವಿಮಾ ರಕ್ಷಣೆ ಬಗ್ಗೆ ಮಾತನಾಡಿರುವ ಕಂಪನಿಯು, ಕರೋನಾ ಸೋಂಕಿನಿಂದ ನೌಕರರು ಸಾವನ್ನಪ್ಪಿದರೆ ಬಾಷ್ ತನ್ನ ಉದ್ಯೋಗಿಗಳಿಗೆ ಸರಾಸರಿ ರೂ.70 ಲಕ್ಷ ವಿಮಾ ರಕ್ಷಣೆ ನೀಡುತ್ತದೆ. ಈ ಮೊತ್ತವನ್ನು ಮೃತ ನೌಕರನ ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದೆ.

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಈ ಮೊತ್ತವನ್ನು ಈಗ ಅಸ್ತಿತ್ವದಲ್ಲಿರುವ ರೂ.7 ಲಕ್ಷಗಳ ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (ಇಡಿಎಲ್ಐ) ಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದ ಹಾಗೆ ಆಟೋ ಮೊಬೈಲ್ ಉದ್ಯಮದಲ್ಲಿ ಬಾಷ್ ಕಂಪನಿ ಮಾತ್ರವೇ ಈ ರೀತಿಯ ಯೋಜನೆಯನ್ನು ಘೋಷಿಸುತ್ತಿಲ್ಲ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಈ ಹಿಂದೆ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಕೂಡ ಈ ರೀತಿಯ ಯೋಜನೆಯನ್ನು ಘೋಷಿಸಿತ್ತು. ಕರೋನಾದಿಂದ ತನ್ನ ಉದ್ಯೋಗಿಗಳು ಮೃತಪಟ್ಟರೆ ಆ ಉದ್ಯೋಗಿಗಳ ಕುಟುಂಬಸ್ಥರಿಗೆ ಕಂಪನಿಯು ಮುಂದಿನ ಎರಡು ವರ್ಷಗಳವರೆಗೆ ಪೂರ್ಣ ವೇತನವನ್ನು ನೀಡಲಾಗುವುದು ಎಂದು ಬಜಾಜ್ ಆಟೋ ಘೋಷಿಸಿತ್ತು.

ಕೋವಿಡ್ 19ನಿಂದ ಮೃತಪಡುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದ ವಿಮಾ ರಕ್ಷಣೆ ಘೋಷಿಸಿದ ಬಾಷ್

ಇದರ ಜೊತೆಗೆ ಮೃತ ನೌಕರರ ಮಕ್ಕಳ ಶಿಕ್ಷಣ ವೆಚ್ಚವನ್ನೂ ಭರಿಸುವುದಾಗಿ ಕಂಪನಿ ತಿಳಿಸಿತ್ತು. ಇದಲ್ಲದೇ ಕಂಪನಿಯು ನೀಡುವ ವೈದ್ಯಕೀಯ ವಿಮೆಯನ್ನು ಸಹ ಅವಲಂಬಿತರಿಗೆ 5 ವರ್ಷಗಳವರೆಗೆ ನೀಡಲಾಗುವುದು ಎಂದು ಬಜಾಜ್ ಆಟೋ ಕಂಪನಿ ತಿಳಿಸಿದೆ. ಈ ಸೌಲಭ್ಯಗಳು ಬಜಾಜ್ ಆಟೋ ನೀಡುವ ಇತರ ಜೀವ ವಿಮಾ ಸೌಲಭ್ಯಗಳನ್ನು ಮೀರಿಸುತ್ತವೆ.

Most Read Articles

Kannada
English summary
Bosch offers Rs 70 Lakhs insurance coverage to Covid 19 affected employees families. Read in Kannada.
Story first published: Wednesday, May 26, 2021, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X