Just In
- 40 min ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 2 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 4 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 14 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Sports
ಭಾರತದ ಸಾಧನೆಗೆ ಅಭಿನಂದನೆ ಸಲ್ಲಿಸಿದ ಹಸೆಮಣೆಯೇರಲು ಸಿದ್ಧವಾಗಿರುವ ವೇಗಿ ಬೂಮ್ರಾ
- News
ದೇಶದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿ: 3 ನೇ ಸ್ಥಾನದಲ್ಲಿ ದೆಹಲಿ
- Movies
'ಕೋಟಿಗೊಬ್ಬ' ಸುದೀಪ್ ನೋಡಿ ಅಭಿಮಾನಿಗಳು ಫುಲ್ ಖುಷ್
- Finance
ಕ್ರಿಪ್ಟೋಕರೆನ್ಸಿ ಬಗ್ಗೆ ಕುತೂಹಲದ ಹೇಳಿಕೆ ಕೊಟ್ಟ ಸಚಿವ ಠಾಕೂರ್
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಕು ಪ್ರಾಣಿಗಳಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತದೆ ಬೌಲಸ್ ಕಂಪನಿಯ ಈ ವಾಹನ
ಭಾರೀ ಗಾತ್ರದ ಐಷಾರಾಮಿ ವಾಹನಗಳ ತಯಾರಕ ಕಂಪನಿಯಾದ ಬೌಲಸ್ ಟೆರ್ರಾ ಫಾರ್ಮಾ ವಾಹನವನ್ನು ಐಷಾರಾಮಿ ಫೀಚರ್'ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ವಾಹನದಲ್ಲಿ ಪ್ರವಾಸಕ್ಕೆ ತೆರಳಿದಾಗ ಕ್ಯಾಂಪ್ ಹಾಕಿ ತಂಗಲು ಬೇಕಾದ ಸೌಲಭ್ಯಗಳನ್ನು ನೀಡಲಾಗಿದೆ.

ಸಾಕಷ್ಟು ಸಂಖ್ಯೆಯ ಗ್ರಾಹಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ವಾಹನವನ್ನು ಐಷಾರಾಮಿ ಫೀಚರ್'ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ವಾಹನವು ಮೋಟಾರು ಮನೆಯಂತಿದ್ದು, ಮನೆಗಳಲ್ಲಿ ಕಂಡುಬರುವ ಬಹುತೇಕ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.

ಮನುಷ್ಯರಿಗೆ ಮಾತ್ರವಲ್ಲದೆ ಸಾಕುಪ್ರಾಣಿಗಳಿಗೂ ಸಹ ಮೂಲಭೂತ ಸೌಲಭ್ಯಗಳನ್ನು ಈ ವಾಹನದಲ್ಲಿ ನೀಡಲಾಗಿದೆ. ಈ ವಾಹನದಲ್ಲಿರುವ ಪ್ರಮುಖ ಫೀಚರ್'ಗಳಲ್ಲಿ ಇದು ಸಹ ಒಂದು. ಈ ವಾಹನವು ನಾಯಿಗಳಿಗೆ ಆಹಾರ ಹಾಗೂ ನೀರನ್ನು ಒದಗಿಸುವ ಕಟ್‌ಬೋರ್ಡ್‌ನ್ನು ಹೊಂದಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜೊತೆಗೆ ಮಲಗಲು ಹಾಸಿಗೆ ಸೇರಿದಂತೆ ವಿವಿಧ ರೀತಿಯ ಸೌಕರ್ಯಗಳನ್ನು ಹೊಂದಿದೆ. ಇದರಿಂದಾಗಿ ದೂರ ಪ್ರಯಾಣ ಮಾಡುವ ವೇಳೆಯಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಬಿಡಲು ಇಷ್ಟಪಡದವರಿಗೆ ಈ ವಾಹನವು ನೆರವಾಗುತ್ತದೆ.

ಈ ವಾಹನವು ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಕರೆದೊಯ್ಯಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ವಾಹನವು ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದಲ್ಲಿ ಒಬ್ಬರೆಂದು ತಿಳಿಯುವವರಿಗೆ ಸಹಾಯ ಮಾಡುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಐಷಾರಾಮಿ ವಾಹನವು 26 ಅಡಿ ಉದ್ದವಿರುವ ಟ್ರೈಲರ್ ವಾಹನವಾಗಿದೆ. ಐಷಾರಾಮಿ ಸೌಕರ್ಯಗಳು ಹಾಗೂ ಸಾಕುಪ್ರಾಣಿಗಳಿಗೆ ಸೂಕ್ತವಾದ ವಾಹನವಾಗಿ ಬೌಲಸ್ ಈ ವಾಹನವನ್ನು ಅಭಿವೃದ್ಧಿಪಡಿಸಿದೆ.

ಈ ವಾಹನವು ಆಟೋಮ್ಯಾಟಿಕ್ ಕ್ಲೈಮೇಟ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಪ್ರಾಣಿಗಳಿಗೆ ಅಗತ್ಯವಾದ ಹವಾಮಾನವನ್ನು ಆಟೋಮ್ಯಾಟಿಕ್ ಆಗಿ ಬದಲಿಸಿ, ಅವುಗಳಿಗೆ ಸರಿಯಾದ ವಾತಾವರಣವನ್ನು ಸೃಷ್ಟಿಸುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವಾಹನವು ಸಾಕುಪ್ರಾಣಿಗಳಿಗೆ ಮಾತ್ರವಲ್ಲದೆ ಅದರ ಮಾಲೀಕರಿಗೂ ಐಷಾರಾಮಿ ಪ್ರಯಾಣದ ಅನುಭವವನ್ನು ನೀಡಲು ಹಲವಾರು ಸೌಲಭ್ಯಗಳನ್ನು ಹೊಂದಿದೆ.ಈ ವಾಹನವು ಹೆಪ್ಪಾ ಏರ್ ಫಿಲ್ಟರ್, ವಾಟರ್ ಪ್ಯೂರಿಫೈಯರ್, ಫ್ಲಫಿ ಮ್ಯಾಟ್ರೆಸ್ ಹಾಗೂ ಯುವಿಸಿ ಲೈಟ್'ಗಳನ್ನು ಹೊಂದಿದ್ದು, ರೋಗಾಣುಗಳನ್ನು ಕೊಲ್ಲುತ್ತದೆ.

ಈ ವಾಹನದಲ್ಲಿ 4 ಕುಶನ್, ನಾಲ್ಕು ಜನರು ಕುಳಿತುಕೊಳ್ಳಬಹುದಾದ ಊಟದ ಟೇಬಲ್, ಸಣ್ಣ ಅಡುಗೆಮನೆ ಹಾಗೂ ಬಾತ್ ರೂಂಗಳನ್ನು ಹೊಂದಿದೆ. ಇದರ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಇಂಟರ್ ನೆಟ್ ಕನೆಕ್ಟಿವಿಟಿ ಹಾಗೂ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯಂತಹ ಸೌಲಭ್ಯಗಳನ್ನು ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಸೌಲಭ್ಯಗಳಿಂದಾಗಿ ಪ್ರಯಾಣಿಕರು ತಮ್ಮ ಪ್ರವಾಸವನ್ನು ಮನರಂಜನೆಯೊಂದಿಗೆ ಆನಂದಿಸುವುದು ಸ್ಪಷ್ಟವಾಗಿದೆ. ವರದಿಗಳ ಪ್ರಕಾರ ಈ ವಾಹನವು 16 ಮೈಲಿಗಳವರೆಗೆ ಪ್ರಯಾಣಿಸುವ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಸಿಸ್ಟಂ ಅನ್ನು ಸಹ ಹೊಂದಿದೆ.

ಇಷ್ಟೊಂದು ವಿಶೇಷ ಫೀಚರ್'ಗಳನ್ನು ಹೊಂದಿರುವ ಈ ವಾಹನದ ಬೆಲೆ 265,000 ಅಮೆರಿಕನ್ ಡಾಲರ್'ಗಳಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.1.9 ಕೋಟಿಗಳಾಗಿದೆ. ಬೌಲಸ್ ಕಂಪನಿಯು ಈ ವಾಹನಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.