ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟ ಪ್ರತಿಭೆ ಇರುತ್ತಾರೆ. ಆ ವಿಶಿಷ್ಟ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಹೊರ ತೆಗೆದು ಬಳಸಿಕೊಳ್ಳುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಸತ್ಯ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ. ಇನ್ನೂ ಕೆಲವರು 40 ವರ್ಷದ ನಂತರ ತಮ್ಮೊಳಗಿನ ಪ್ರತಿಭೆಯನ್ನು ಬಳಸಿಕೊಳ್ಳುತ್ತಾರೆ. ಅಂತಹ ಜನರ ಜೀವನದ ದ್ವಿತೀಯಾರ್ಧವು ಉತ್ತಮವಾಗಿರುತ್ತದೆ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಆದರೆ ಚಿಕ್ಕ ವಯಸ್ಸಿನಲ್ಲಿಯೇ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದು ಉತ್ತಮ. ಈ ಲೇಖನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯನ್ನು ತೋರಿಸಿ,ಜನರ ಗಮನ ಸೆಳೆದ ಬಾಲಕನ ಬಗ್ಗೆ ನೋಡೋಣ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಸಾಕಷ್ಟು ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಾರೆ. ಇದರಿಂದ ಅವರು ತಮ್ಮ ಅಮೂಲ್ಯ ಪ್ರತಿಭೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಬಾಲಕನೊಬ್ಬ ದೊಡ್ಡ ಟಯರ್ ಮೇಲೆ ಹತ್ತಿ ಮುಂದಕ್ಕೆ ಚಲಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಟಯರ್ ಮೇಲೆ ಹತ್ತಿ ಮುಂದಕ್ಕೆ ಹೋಗುವುದರಲ್ಲಿ ಯಾವ ಪ್ರತಿಭೆ ಇದೆ ಎಂದು ಕೇಳ ಬಹುದು. ಆದರೆ ಟ್ರಕ್‌ನಂತಹ ಭಾರೀ ಗಾತ್ರದ ವಾಹನಗಳಲ್ಲಿ ಅಳವಡಿಸುವ ದೊಡ್ಡ ಟಯರ್ ಮೇಲೆ ಹತ್ತಿ ಮುಂದಕ್ಕೆ ಚಲಿಸುವುದು ಸಾಮಾನ್ಯ ಸಂಗತಿಯಲ್ಲ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಈ ಬಾಲಕ ಆ ಟಯರ್ ಮೇಲೆ ನಿಂತು ಹಿಂದಕ್ಕೆ, ಮುಂದಕ್ಕೆ ಚಲಿಸುತ್ತಾನೆ. ನೋಡಿದ ತಕ್ಷಣ ಬಾಲಕ ಟ್ರೆಡ್‌ಮಿಲ್‌ ಮೇಲೆ ಚಲಿಸುವಂತೆ ಕಾಣುತ್ತದೆ. ಟ್ರೆಡ್‌ಮಿಲ್'ನಲ್ಲಿ ಕೇವಲ ಕಾಲುಗಳು ಮಾತ್ರ ಚಲಿಸುತ್ತವೆ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಆದರೆ ಟಯರ್‌ ಮುಂದೆ ಚಲಿಸುವಂತೆ ಮಾಡಲು ಇಡೀ ದೇಹವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಟ್ರೆಡ್‌ಮಿಲ್‌ನಲ್ಲಿ ಜಾರಿಬೀಳುವ ಸಾಧ್ಯತೆಗಳು ತೀರಾ ಕಡಿಮೆಯಾಗಿರುತ್ತವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಆದರೆ ಟಯರ್ ಮೇಲೆ ಚಲಿಸುವಾಗ ಜಾರಿ ಬೀಳುವ ಸಾಧ್ಯತೆಗಳು ಹೆಚ್ಚು. ರಸ್ತೆಯನ್ನು ಗಮನಿಸುತ್ತ ಟಯರ್‌ ಮೇಲೆ ಸರಿಯಾಗಿ ಕಾಲಿಡ ಬೇಕಾಗುತ್ತದೆ. ಹೆಚ್ಚು ವೇಗದಲ್ಲಿ ಚಲಿಸಿದರೆ ಇಲ್ಲವೇ ಕಡಿಮೆ ವೇಗದಲ್ಲಿ ಚಲಿಸಿದರೆ ಕೆಳಕ್ಕೆ ಬೀಳುವುದು ಖಚಿತ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಈ ವೀಡಿಯೊದಲ್ಲಿರುವ ಬಾಲಕ ಟಯರ್ ಮೇಲೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಬದಲಿಗೆ ರಸ್ತೆಯಲ್ಲಿ ಚಲಿಸುವ ವಾಹನಗಳತ್ತ ಗಮನ ಹರಿಸುತ್ತಿದ್ದ. ಇದರಿಂದ ಆ ಬಾಲಕ ಟಯರ್ ಮೇಲೆ ಮುಂದಕ್ಕೆ ಸಾಗಲು ಕಠಿಣ ತರಬೇತಿ ಪಡೆದಿರುವುದು ಸ್ಪಷ್ಟವಾಗುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ಕಠಿಣ ತರಬೇತಿಯೇ ಜನರ ಗಮನವನ್ನು ಆತನತ್ತ ತಿರುಗಿಸಿದೆ. ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಈ ಬಾಲಕನ ಪ್ರತಿಭೆಯನ್ನು ಹೊಗಳಿದ್ದಾರೆ. ಇನ್ನೂ ಹಲವಾರು ಜನರು ಆತನ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಭಾರೀ ಗಾತ್ರದ ಟಯರ್ ಮೇಲೆ ಸ್ಟಂಟ್ ಮಾಡಿದ ಬಾಲಕ

ಆದರೆ ಈ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿಯೂ ಹಲವಾರು ಅಪಾಯಗಳಿವೆ. ಏಕೆಂದರೆ ಎಲ್ಲ ಸಮಯವೂ ಒಂದೇ ರೀತಿಯಲ್ಲಿರುವುದಿಲ್ಲ. ದಯವಿಟ್ಟು ಯಾರೂ ಈ ರೀತಿ ಪ್ರತಿಭೆಯನ್ನು ಸೂಕ್ತ ತರಬೇತಿ ಇಲ್ಲದೇ ಪ್ರದರ್ಶಿಸದೇ ಇರುವುದು ಒಳಿತು.

Most Read Articles

Kannada
English summary
Boy does stunt on truck tyre, video goes viral. Read in Kannada.
Story first published: Tuesday, May 11, 2021, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X