ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಹೊಸ ಸಂಗತಿಗಳನ್ನು ಅನ್ವೇಷಿಸಲು ವಯಸ್ಸಿನ ಮಿತಿಯಿಲ್ಲ. ಕ್ರಿಯೆಟಿವಿಟಿ ಯಾವುದೇ ವಯಸ್ಸಿನವರಿಗೆ ಬೇಕಾದರೂ ಬರುತ್ತದೆ. ಈ ಮಾತು ಕೇರಳದ ತ್ರಿಶೂರ್‌ನ 12 ವರ್ಷದ ಬಾಲಕನಿಗೆ ಅನ್ವಯಿಸುತ್ತದೆ. ಶಾಲೆಗೆ ಹೋಗುವ ವಯಸ್ಸಿನಲ್ಲಿ ಹಳೆ ನ್ಯೂಸ್ ಪೇಪರ್‌ಗಳಿಂದ ರೈಲಿನ ಮಾದರಿಯನ್ನು ತಯಾರಿಸಿದ್ದಾನೆ.

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

12 ವರ್ಷದ ಅದ್ವೈತ ಕೃಷ್ಣ, ರೈಲು ಅಭಿಮಾನಿಯಾಗಿದ್ದಾನೆ. ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಕ್ರಿಯೆಟಿವಿಟಿಯಿಂದಾಗಿ ರೈಲು ಮಾದರಿಯನ್ನು ಹಳೆಯ ನ್ಯೂಸ್ ಪೇಪರ್‌ನಿಂದ ಸಿದ್ಧಪಡಿಸಿದ್ದಾನೆ. ಈ ರೈಲು ಮಾದರಿಯನ್ನು ಮೂರು ದಿನಗಳಲ್ಲಿ ತಯಾರಿಸಿದ್ದಾನೆ. ಅದ್ವೈತ ಕೃಷ್ಣ ತಯಾರಿಸಿರುವ ಈ ರೈಲು ಮಾದರಿ ನೈಜ ರೈಲಿನಂತೆ ಕಾಣುತ್ತದೆ.

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಈ ರೈಲು ಮಾದರಿಯನ್ನು ಹಳೆಯ ರೈಲಿನ ಆಧಾರದ ಮೇಲೆ ತಯಾರಿಸಲಾಗಿದೆ. ಮುಂಭಾಗದಲ್ಲಿ ಡೀಸೆಲ್ ಎಂಜಿನ್, ಸ್ಮೋಕ್ ಪೈಪ್, ಸಣ್ಣ ಕ್ಯಾಬಿನ್, ಕೆಳಭಾಗದಲ್ಲಿ ವ್ಹೀಲ್‌ಗಳನ್ನು ನೀಡಲಾಗಿದೆ.ಈ ಮಾದರಿಯಲ್ಲಿ ಎಂಜಿನ್‌ನ ಹಿಂದೆ ಎರಡು ಬೋಗಿಗಳನ್ನು ಅಳವಡಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಈ ಬೋಗಿಗಳ ಎರಡೂ ಬದಿಯಲ್ಲಿ ಡೋರ್ ಹಾಗೂ ವಿಂಡೋಗಳನ್ನು ನೀಡಲಾಗಿದೆ. ರೈಲ್ವೆ ಇಲಾಖೆಯು ಈ ಮಾದರಿಯನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿದೆ. ಪೇಪರ್‌ನಿಂದ ಮಾದರಿಯನ್ನು ಸಿದ್ಧಪಡಿಸಲು ಹೆಚ್ಚು ತಾಳ್ಮೆ ಹಾಗೂ ಕ್ರಿಯೆಟಿವಿಟಿ ಬೇಕಾಗುತ್ತದೆ.

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಬಹುತೇಕ ಜನರು ಅದ್ವೈತ ಕೃಷ್ಣನ ಕಲೆಯನ್ನು ಶ್ಲಾಘಿಸಿದ್ದಾರೆ. ಅದ್ವೈತ ಕೃಷ್ಣ, ಚೆರ್ಪುವಿನಲ್ಲಿರುವ ಸಿಎನ್ಎನ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಶಿಲ್ಪಿ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ರೈಲ್ವೆ ಇಲಾಖೆಯು ಮೈಸೂರಿನ ರೈಲು ಮ್ಯೂಸಿಯಂನಲ್ಲಿದ್ದ ಹಳೆ ರೈಲು ಬೋಗಿಯನ್ನು ರೆಸ್ಟೋರೆಂಟ್ ಆಗಿ ಮಾಡಿಫೈಗೊಳಿಸಿತ್ತು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಈ ರೆಸ್ಟೋರೆಂಟ್ ಅನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಈ ಸಣ್ಣ ರೆಸ್ಟೋರೆಂಟ್‌ನಲ್ಲಿ 20 ಜನರು ಕೂರಲು ಅವಕಾಶವಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ರೆಸ್ಟೋರೆಂಟ್ ಅನ್ನು ನೋ ಪ್ರಾಫಿಟ್ ನೋ ಲಾಸ್ ಮಾದರಿಯಲ್ಲಿ ನಡೆಸಲಾಗುತ್ತಿದೆ.

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಹೊಸ ರೀತಿಯ ಅನುಭವವನ್ನು ನೀಡಲು ಈ ಬೋಗಿಯನ್ನು ಮಾಡಿಫೈಗೊಳಿಸಲಾಗಿದೆ. ಮ್ಯೂಸಿಯಂಗೆ ಭೇಟಿ ನೀಡುವವರಿಗಾಗಿ ಇದನ್ನು ತೆರೆಯಲಾಗಿದೆ. ಹೊರಗಿನಿಂದ ಸಾಮಾನ್ಯ ಬೋಗಿಯಂತೆ ಕಾಣುವ ಈ ರೆಸ್ಟೋರೆಂಟ್‌ಗೆ ರೈಲ್ ಕೋಚ್ ಕೆಫೆ ಎಂಬ ಹೆಸರನ್ನಿಡಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹಳೆ ನ್ಯೂಸ್ ಪೇಪರ್‌ನಿಂದ ರೈಲು ಮಾದರಿ ನಿರ್ಮಿಸಿದ ಶಾಲಾ ಬಾಲಕ

ಈ ರೈಲು ಬೋಗಿಯಲ್ಲಿರುವ ಮೆಟ್ಟಿಲಿನಿಂದ ಹೊರ ಭಾಗಕ್ಕೆ ಪ್ರವೇಶಿಸಬಹುದು. ರೈಲು ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಈ ರೈಲು ಬೋಗಿಯು ಆಕರ್ಷಣಿಯ ಕೇಂದ್ರವಾಗಿ ಮಾರ್ಪಟ್ಟಿದೆ.

Most Read Articles

Kannada
English summary
Boy from Kerala builds train model using old newspaper. Read in Kannada.
Story first published: Friday, June 26, 2020, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X